ಹಾಸನ

ಶಿಕ್ಷಕರು ಜಾಣರಾದ್ರೆ ವಿದ್ಯಾರ್ಥಿಗಳೂ ಜಾಣರು

Published On :

ಹಾಸನ: ವಿದ್ಯಾರ್ಥಿಗಳೆಲ್ಲರೂ ಪ್ರತಿಭಾವಂತರೇ, ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾದವರು ಬುದ್ಧಿವಂತ ಶಿಕ್ಷಕರಿಂದ ಕಲಿಯುತ್ತಿರುವುದರಿಂದ ಮಕ್ಕಳು ಸಹಜವಾಗಿ ಬುದ್ಧಿವಂತರಾಗುತ್ತಾರೆ ಎಂದು  ಶಿಕ್ಷಣ ಇಲಾಖೆಯ ಸಂಯೋಜಕ ನಂಜುಂಡೇಗೌಡ ಅಭಿಪ್ರಾಯಪಟ್ಟರು.  
ತಾಲ್ಲೂಕಿನ ನಿಡೂಡಿ ಗ್ರಾಮದಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಯಾವುದೇ ಕೀಳರಿಮೆ ಇಟ್ಟುಕೊಳ್ಳದೆ ಶಾಲೆಗೆ ದಾಖಲಿಸಬೇಕು. ಸರ್ಕಾರಿ ಶಾಲೆಗಳ ಲ್ಲಿಯೂ ಉತ್ತಮ ಶಿಕ್ಷಣ ದೊರೆಯು ತ್ತದೆ. ಅನೇಕ ಸವಲತ್ತುಗಳನ್ನು ಮಕ್ಕಳಿಗಾಗಿ ನೀಡುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾಮ ಪಂಚಾಯ್ತಿ ಸದಸ್ಯ ತೋಪೇಗೌಡ ಮಾತನಾಡಿ, ನಮ್ಮೂರ ಶಾಲೆಯಲ್ಲಿ ಉತ್ತಮ ಶಿಕ್ಷರಿದ್ದಾರೆ. ಖಾಸಗಿ ಶಾಲೆಗಿಂತಲೂ ಇಲ್ಲಿ ಕಲಿಕೆ ಉತ್ತಮವಾಗಿದೆ. ಮುಂದಿನ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಶಾಲೆಗೆ ಧ್ವನಿ ವರ್ಧಕ ನೀಡುವುದಾಗಿ ತಿಳಿಸಿದರು.
ಹರಳಹಳ್ಳಿ ಕ್ಲಸ್ಟರ್‌ನ ಸಿ.ಆರ್.ಪಿ. ಗೋಪಾಲ ಕೃಷ್ಣ ಮಾತನಾಡಿ, ಈ ಶಾಲೆ ಉತ್ತಮ ಶಾಲೆಯಾಗಿದ್ದು, ಪ್ರತಿಭಾವಂತ ಹಾಗೂ ಅರ್ಪಣಾ ಮನೊಭಾವವಿರುವ ಶಿಕ್ಷಕರಿದ್ದಾರೆ. ಶಾಲೆಯಲ್ಲಿ ಉತ್ತಮ ಪರಿಸರವಿದೆ. ಹಾಗಾಗಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿದ್ದು, ಗ್ರಾಮದ ಎಲ್ಲಾ ಪೋಷಕರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿಕೊಡಿ ಎಂದರು.
ಲೇಖಕಿ ಶೈಲಜಾ ಹಾಸನ ಮಾತನಾಡಿ, ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಿದ್ದು, ಕಲಿಕೆ ಉತ್ತಮಗೊಳಿಸಲು ಎಲ್ಲಾ ಶಿಕ್ಷಕರು ಪರಿಶ್ರಮ ಪಡುತ್ತಿರುವುದು  ಶ್ಲಾಘ ನೀಯ. ಸರ್ಕಾರಿ ಶಾಲೆಗಳು ಸಹ ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಸರ್ಕಾರಿ ಮಕ್ಕಳು ತೋರಿಸಿಕೊಟ್ಟಿದ್ದಾರೆ. ಇದೇ ರೀತಿಯ ಪ್ರೋತ್ಸಾಹ ಪೋಷಕರಿಂದ ಸಿಗಬೇಕು ಎಂದರು.
ಎಸ್.ಡಿ.ಎಮ್.ಸಿ. ಅಧ್ಯಕ್ಷ ಬಸವ ರಾಜು, ಶಿಕ್ಷಕಿಯರಾದ ಮಂಜುಳ, ಮೀನಾಕ್ಷಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.