'ಎತ್ತಿನಹೊಳೆ ಯೋಜನೆ ಚುನಾವಣೆ ಗಿಮಿಕ್ ಅಲ್ಲ'
ಹಾಸನ: ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆಯ ಹಿಂದೆ ಯಾವುದೇ ಚುನಾವಣೆ ಗಿಮಿಲ್ ಇಲ್ಲ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಬಯಲು ಸೀಮೆ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶವನ್ನು ಮಾತ್ರ ಹೊಂದಿದ್ದು, ಅದನ್ನು ಪೂರ್ಣಗೊಳಿಸುತ್ತೇವೆ. ಇದರ ಸಾಧಕ-ಬಾಧಕಗಳ ಬಗ್ಗೆ ತಜ್ಞರೊಂದಿಗೆ ಈಗಾಗಲೇ ಚರ್ಚೆಯನ್ನು ನಡೆಸಿದ್ದು, ಮತ್ತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನಿಗದಿ ಪಡಿಸಿದ್ದ ಹಣವನ್ನು ಸಂಪೂರ್ಣವಾಗಿ ಬಳಕೆ ಮಾಡುವ ಬಗ್ಗೆ ಕಾನೂನನ್ನು ಜಾರಿಗೆ ತರಲಾಗಿದೆ. ಈ ಕಾನೂನಿನ ಪ್ರಕಾರ ಅಧಿಕಾರಿಗಳು ನಿಗದಿ ಪಡಿಸಿರುವ ಹಣವನ್ನು ವೆಚ್ಚ ಮಾಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಆದ್ದರಿಂದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ನಿಗದಿ ಪಡಿಸಿದ ಹಣವನ್ನು ವೆಚ್ಚಬೇಕಾಗಿದೆ ಎಂದರು.
ಭಿನ್ನಭಿಪ್ರಾಯವಿಲ್ಲ: ಸರ್ಕಾರಕ್ಕೂ ಹಾಗೂ ಕೆಪಿಸಿಸಿಯ ನಡುವೆ ಯಾವುದೇ ರೀತಿಯ ಭಿನ್ನಭಿಪ್ರಾಯಗಳಿಲ್ಲ.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಯಾವ ಸಂದರ್ಭದಲ್ಲಿ ಸರ್ಕಾರದ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಂತ ಗೊತ್ತಿಲ್ಲ. ಒಟ್ಟಿನಲ್ಲಿ ನಮ್ಮಲ್ಲಿ ಯಾವುದೇ ರೀತಿಯ ಭಿನ್ನಭಿಪ್ರಾಯಗಳಿಲ್ಲದೆ ಒಟ್ಟಾಗೆ ಇದ್ದೇವೆ ಎಂದರು.
ಅಂಬೇಡ್ಕರ್ ಮತ್ತು ಗಾಂಧಿಗೆ ಹೊಲಿಸಲು ನಾನು ಮೂರ್ಖನ
ಗೌಡರನ್ನು ಹೋಲಿಸಿಲ್ಲ: ನಾನು ದೇವೇಗೌಡರನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರಿಗಾಗಲಿ ಅಥವಾ ಗಾಂಧಿಜಿಗಾಗಲಿ ಹೋಲಿಕೆ ಮಾಡಿಲ್ಲ. ನಾನು ಯಾರನ್ನೂ ಹೊಗಳಿಯೂ ಇಲ್ಲ, ತೆಗಳಿಯೂ ಇಲ್ಲ.
ರಾಜ್ಯಾಂಗಕ್ಕೆ ಬದ್ಧನಾಗಿ ಮಾತನಾಡಿದ್ದೇನೆ ಅಷ್ಟೇ. ಅದನ್ನು ಸರಿಯಾಗಿ ಅರ್ಥೈಸಿಲ್ಲ. ಸಂವಿಧಾನದ ಆಶಯದೊಳಗೆ ಒಳ್ಳೆಯ ವ್ಯಕ್ತಿತ್ವ ಮತ್ತು ಉತ್ತಮ ಕೆಲಸ ಮಾಡಿದವರನ್ನು ಪ್ರಶಂಸಿದ್ದೇನೆ ಅಷ್ಟೇ ಎಂದ ಅವರು, ಅಂಬೇಡ್ಕರ್ ಮತ್ತು ಗಾಂಧಿಜಿಗೆ ಅವರಿಗೆ ಸರಿಸಮಾನರಾದವರು ಯಾರು ಇಲ್ಲ. ಅವರಿಗೆ ಹೊಲಿಕೆ ಮಾಡಲು ನಾನು ಮೂರ್ಖನೇ ಎಂದು ಕೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

