ಹಾಸನ

ಸ್ವಚ್ಛತೆಗಾಗಿ ನಗರಸಭೆ ಜತೆ ಜನ ಕೈ ಜೋಡಿಸಬೇಕು

Published On :

ಹಾಸನ: ಸ್ವಚ್ಛತೆ ನಿರ್ವಹಿಸಲು ನಗರಸಭೆಯೊಂದರಿಂದ ಮಾತ್ರ ಸಾಧ್ಯವಿಲ್ಲ. ಜನತೆ ಕೂಡ ಸ್ವಚ್ಛತೆಯನ್ನು ಕಾಪಾಡುವಲ್ಲಿ ನಗರಸಭೆಯೊಂದಿಗೆ ಕೈಜೋಡಿಸಬೇಕೆಂದು ಕ್ಷೇತ್ರದ ಶಾಸಕ  ಹೆಚ್.ಎಸ್. ಪ್ರಕಾಶ್ ಮನವಿ ಮಾಡಿದರು.
ನಗರದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ ಆವರಣದಲ್ಲಿ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಸ ವಿಲೇವಾರಿಗಾಗಿ ಕೋಟ್ಯಂತರ ರು  ಖರ್ಚು ಮಾಡಲಾಗುತ್ತಿದೆ. ಈಗಾಗಲೇ ಕಸವನ್ನು ಬೇರ್ಪಡಿಸುವ ಯಂತ್ರ ಬರುತ್ತಿದೆ. ಮನೆ-ಮನೆಯ ಕಸ ವಿಲೇವಾರಿ ಮಾಡಲು ಪ್ರತಿ ವಾರ್ಡ್‌ಗೂ ಆಪೆ ವಾಹನ ನೀಡಲಾಗಿದೆ. ಸಾರ್ವಜನಿಕರು ಇವರೊಂದಿಗೆ ಸಹಕರಿಸಿದರೆ ಮಾತ್ರ ಸ್ವಚ್ಛತೆಯಿಂದ ಇರಲು ಸಾಧ್ಯ ಎಂದು ಸಲಹೆ ನೀಡಿದರು.
ಕರೆ: ಪೂರ್ಣ ಸ್ವಚ್ಛತೆಯನ್ನು ನಗರಸಭೆಯಿಂದಲೇ ಮಾಡಲು ಆಗುವುದಿಲ್ಲ. ಜನರಲ್ಲಿ ಅರಿವು ಮೂಡಿಸುವುದರ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ ಎಂದು ಅವರು ಕರೆ ನೀಡಿದರು.
ತಿಳುವಳಿಕೆ ಮೂಡಿಸಬೇಕು: ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಚನ್ನವೀರಪ್ಪ ಮಾತನಾಡಿ, ಆಯ ವಾರ್ಡ್‌ನ ಸ್ವಚ್ಛತೆ ಕಾಪಾಡಲು ಅಲ್ಲಿನ ನಿವಾಸಿಗಳ ಸಹಕಾರ ಅಗತ್ಯ.
 ಕಸದ ವಿಲೇವಾರಿ ತುಂಬ ತಲೆ ನೋವಾಗಿ ಪರಿಣಮಿಸಿದ್ದು, ಚುನಾವಣೆ ಸಮಯದಲ್ಲಿ ಮಾತ್ರ ಮತ ಕೇಳಲು ಬಂದಾಗ ನೀರು, ಸ್ವಚ್ಛತೆ, ವಿದ್ಯುತ್ ಸಮಸ್ಯೆ ಬಗ್ಗೆ ಹೆಚ್ಚು ಧ್ವನಿ ಕೇಳಿ ಬರುತ್ತಿತ್ತು. ಕಸ ವಿಲೇವಾರಿ, ಸ್ವಚ್ಛತೆ ಹಾಗೂ ನೀರಿನ ಅಭಾವವನ್ನು ನಿಭಾಯಿಸಲು ಜನರಲ್ಲಿಯೇ ತಿಳುವಳಿಕೆ ಬರುವಂತೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಎಲ್ಲಾ ವಾರ್ಡ್‌ಗಳಲ್ಲೂ ಕ್ರಾಸ್ ಸೂಚಿಸಿ ಹೆಸರು ಇಡಬೇಕು ಎಂದು ಸಲಹೆ ನೀಡಿ, ಶಾಸಕರ ಸಹಕಾರ ಕೇಳಿದರು.
ಚಾಲನೆ: ಕಾರ್ಯಕ್ರಮಕ್ಕೆ ಮೊದಲು ದೇವಾಲಯದ ಆವರಣದಲ್ಲಿ 8ನೇ ವಾರ್ಡ್‌ನ ಕಸ ವಿಲೇವಾರಿ ಅಫೆ ವಾಹನಕ್ಕೆ ನಗರಸಭೆ ಅಧ್ಯಕ್ಷರಾದ ಶ್ರೀವಿದ್ಯಾ ಆನಂದ್ ಹಸಿರು ಬಾವುಟ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಇದೇ ವೇಳೆ ವಾರ್ಡ್‌ನ ಸದಸ್ಯೆ ನೇತ್ರಾವತಿ ಗಿರೀಶ್, ಹೆಚ್.ಎಸ್. ಅನಿಲ್ ಕುಮಾರ್, ಹೆಚ್.ಬಿ. ಗೋಪಾಲ್, ನಗರಸಭೆ ಆರೋಗ್ಯ ನಿರೀಕ್ಷಕ ಸ್ಟೀಫನ್ ಪ್ರಕಾಶ್, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ, ಸಮಾಜ ಸೇವಕರಾದ ಶ್ರೀಕಂಠಯ್ಯ, ಸಿಟಿ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಗಿರೀಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.