ಹಾಸನ

ಜಿಲ್ಲಾ ಸಹಕಾರ ಸಂಘದ ವಿವಾದ ಸುಖಾಂತ್ಯ

Published On :

ಚನ್ನರಾಯಪಟ್ಟಣ: ಪಟ್ಟಣದ ಭೂ ಅಭಿವೃದ್ಧಿ ಬ್ಯಾಂಕ್ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿ ಎರಡು ದಿನಗಳು ಕಳೆದರೂ ಆಡಳಿತ ಮಂಡಳಿಯ ಒಳ ಜಗಳದಿಂದ ಕುರ್ಚಿ ನೀಡದ ವಿಷಯ ಬೀದಿಗೆ ಬಂದು ಕಡೆಯಲ್ಲಿ ಪೊಲೀಸರು ಹಾಗೂ ಜಿಲ್ಲಾ ಸಹಕಾರ ನಿಬಂದಕರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯ ಕಂಡ ಘಟನೆ ಗುರುವಾರ ನಡೆಯಿತು.
ಬ್ಯಾಂಕ್‌ನ ಪ್ರಬಾರಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜು ಅವರನ್ನು ಮೂಲಸ್ಥಾನಕ್ಕೆ ನಿಯೋಜಿಸಿ ಸರ್ಕಾರ ಬ್ಯಾಂಕ್‌ಗೆ ವ್ಯವಸ್ಥಾಪಕರನ್ನು ಬೇರೆಡೆಯಿಂದ ವರ್ಗಾವಣೆ ಮಾಡಿ ಕರ್ತವ್ಯಕ್ಕೆ ಹಾಜರಾಗಿ ಎರಡು ದಿನಗಳು ಕಳೆದರೂ ವ್ಯವಸ್ಥಾಪಕ ಸ್ಥಾನ ನೀಡದೆ ಪ್ರಭಾರಿ ವ್ಯವಸ್ಥಾಪಕರನ್ನೇ ಮುಂದುವರಿಸಲು ಮುಂದಾದ ಅಧ್ಯಕ್ಷರ ವಿರುದ್ಧ ಉಪಾಧ್ಯಕ್ಷರು ಸೇರಿದಂತೆ 9 ಮಂದಿ ನಿರ್ದೇಶಕರು, ಅಧ್ಯಕ್ಷರ ಕ್ರಮವನ್ನು ವಿರೋಧಿಸಿದ ಸಂದರ್ಭದಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರುಗಳ ಬೆಂಬಲಿಗರು ಕೈ ಕೈ ಮಿಲಾಯಿಸಲು ಮುಂದಾದ ಸಂದರ್ಭದಲ್ಲಿ ಪೊಲೀಸರ ಮಧ್ಯಪ್ರವೇಶದಿಂದ ಗೊಂದಲ ನಿವಾರಣೆಯಾಯಿತು.
ಪ್ರಭಾರಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜು, ಅಧ್ಯಕ್ಷರ ಜತೆ ಕೈ ಜೋಡಿಸಿ, ಆಡಳಿತ ಮಂಡಳಿಯ ಒಪ್ಪಿಗೆ ಪಡೆಯದೆ ಸಾಲ ನೀಡುವಲ್ಲಿ ಅವ್ಯವಹಾರವೆಸಗಿದ್ದಾರೆಂದು ಉಪಾಧ್ಯಕ್ಷರು ಸೇರಿದಂತೆ 9 ಮಂದಿ ನಿರ್ದೇಶಕರು ಜಿಲ್ಲಾ ಸಹಕಾರ ನಿಬಂದಕರಿಗೆ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ನಿಯೋಜನೆಗೊಂಡ ವ್ಯವಸ್ಥಾಪಕ ಕೃಷ್ಣೇಗೌಡ ಅವರಿಗೆ ಕುರ್ಚಿ ಬಿಡದಂತೆ ಅಧ್ಯಕ್ಷರು ತಾಕೀತು ಮಾಡಿದ ಹಿನ್ನಲೆಯಲ್ಲಿ ಗೊಂದಲ ಮೂಡಿತು.
ಬಗೆಹರಿದ ಗೊಂದಲ: ನಿರ್ದೇಶಕರು ಹಾಗೂ ಅಧ್ಯಕ್ಷರ ನಡುವಿನ ತಿಕ್ಕಾಟದಲ್ಲಿ ವ್ಯವಸ್ಥಾಪಕರು ಗೊಂದಲದಲ್ಲಿ ಸಿಲುಕಿ ಕಡೆಯಲ್ಲಿ ರಾಜು ಅವರನ್ನು ಗುರುವಾರದಂದು ಒಂದು ದಿನ ಮಾತ್ರ ವ್ಯವಸ್ಥಾಪಕರಾಗಿ ಮುಂದುವರಿಸಲು ಅವಕಾಶ ಕೋರಿದ ಅಧ್ಯಕ್ಷರಿಗೆ 9 ಮಂದಿ ನಿರ್ದೇಶಕರು ಅವಕಾಶ ನೀಡಿ ಶುಕ್ರವಾರದಿಂದ ವ್ಯವಸ್ಥಾಪಕರಾಗಿ ಕೃಷ್ಣೇಗೌಡ ಅವರಿಗೆ ಅವಕಾಶ ನೀಡುವಂತೆ ಮಾಜಿ ಅಧ್ಯಕ್ಷ ಚಂದ್ರೇಗೌಡ ಅವರು ತಿಳಿಸಿದ ಹಿನ್ನಲೆಯಲ್ಲಿ ಗೊಂದಲ ಬಗೆಹರಿಯಿತು.
ಅಧ್ಯಕ್ಷರ ವಿವೇಚನೆಯಂತೆ 25ಲಕ್ಷ ಸಾಲ ನೀಡುವ ಸಂಬಂದ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯದೆ ಅಧ್ಯಕ್ಷರು ಸೇರಿದಂತೆ ಅವರ ಸಂಬಂದಿಕರಿಗೆ ಸಾಲ ನೀಡಿದ್ದನ್ನು ಖಂಡಿಸಿದ 9ಮಂದಿ ನಿರ್ದೇಶಕರು ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.