ನೀರಿನ ಸಮಸ್ಯೆಗೆ ರಾಜಕೀಯ ಬೆರೆಸಲ್ಲ
ಅರಸೀಕೆರೆ: ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ರಾಜಕೀಯ ಭೇದಭಾವ ಮಾಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ರೂಪಿಸಲಾಗುವುದು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
ಪಟ್ಟಣದ ಎಲ್ಲಾ 27 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಜನತೆಯ ಸಂಕಷ್ಠಕ್ಕೆ ಸೂಕ್ತ ಪರಿಹಾರ ದೊರಕಿಸುವ ಪ್ರಯತ್ನದಲ್ಲಿ ಮಂಗಳವಾರ ಸಂಜೆ ಪುರಸಭಾಧ್ಯಕ್ಷ ಮೋಹನ್ ಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ತುರ್ತು ಸಭೆಯಲ್ಲಿ ತಿಳಿಸಿದರು.
ಕಾಂಗ್ರೆಸ್ ಸದಸ್ಯ ಬಿ.ಎನ್. ವಿದ್ಯಾಧರ್, ನಾಮನಿರ್ದೇಶಿತ ಸದಸ್ಯರಾದ ಉಮಾಶಂಕರ್ ಮತ್ತು ಕಾಳೇಗೌಡ ಮಾತನಾಡಿ ಸರಸ್ವತಿಪುರ, ಹಾಸನ ರಸ್ತೆಯ ಎಡಭಾಗ ಮತ್ತು ಬಲಭಾಗದ ವಾರ್ಡ್‌ಗಳಲ್ಲಿ, ಮಲ್ಲೇಶ್ವರ ನಗರ ಸುಬ್ರಹ್ಮಣ್ಯ ನಗರಗಳಲ್ಲಿ ಕಳೆದ 8 ದಿನಗಳಿಂದ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ, ಈ ಭಾಗದಲ್ಲಿನ ಮಿನಿ ಟ್ಯಾಂಕ್‌ನ ಸಂಪರ್ಕದ ಕೊಳವೆ ಬಾವಿಯಲ್ಲಿ ನೀರು ಇಲ್ಲದ ಕಾರಣ, ನೀರಿಗಾಗಿ ಪ್ರತಿನಿತ್ಯ ಜನ ಪರದಾಡು ಪರಿಸ್ಥಿತಿ ನಿರ್ಮಾಣ ಆಗಿದೆ ಎಂಬುದನ್ನು ಅಧ್ಯಕ್ಷರ ಗಮನಕ್ಕೆ ತಂದಾಗ ಈ ಬಗ್ಗೆ ಶಾಸಕರು ಪ್ರತಿಕ್ರಿಯಿಸಿದರು.
ತಾರತಮ್ಯ ಸಹಿಸುವುದಿಲ್ಲ: ಯಾವುದೇ ವಾರ್ಡ್‌ಗಳಲ್ಲಿ ಯಾವುದೇ ಪಕ್ಷದ ಸದಸ್ಯರಿದ್ದರೂ ಸರಿಯೇ, ಮೊದಲು ಅಲ್ಲಿನ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಲು ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಸ್ಪಂದಿಸಬೇಕಾಗಿದೆ. ಜನತೆಗೆ ಅತ್ಯಂತ ಅವಶ್ಯಕವಾಗಿ ಬೇಕಾದ ಕುಡಿಯುವ ನೀರಿನ ಸರಬರಾಜು ಮಾಡುವ ಬಗ್ಗೆ ಯಾವುದೇ ತಾರತಮ್ಯ ನೀತಿಯನ್ನು ಅಧಿಕಾರಿಗಳು ಮತ್ತು ಸದಸ್ಯರು ಅನುಸರಿಸಿದರೆ ತಾವು ಸಹಿಸುವುದಿಲ್ಲ ಎಂದು ಹೇಳಿದರು.
ಅನುಮೋದನೆ: ಪಟ್ಟಣಕ್ಕೆ ಹೇಮಾವತಿ ಕುಡಿಯುವ ನೀರು ಸರಬರಾಜು ಮಾಡುವ ತಿಪಟೂರು ಪಂಪ್‌ಹೌಸ್‌ಗೆ ಅಗತ್ಯವಾಗಿ ಬೇಕಾದ 150 ಎಚ್.ಪಿ. ಮೋಟಾರ್, ಸೇರಿದಂತೆ ವಿವಿಧ ಸಾಮಗ್ರಿಗಳು ಮತ್ತು ರಿಪೇರಿ ಕಾರ್ಯಗಳಿಗೆ ಕರೆಯಲಾಗಿದ್ದ ರು. 1 ಲಕ್ಷ, ರು. 92000, ರು. 96000 ಹಾಗೂ ರು. 99000ಗಳ ನಾಲ್ಕು ಟೆಂಡರ್‌ಗಳ ಗುತ್ತಿಗೆಗೆ ಅನುಮೋದನೆ ನೀಡಲಾಯಿತು.
ವಿವಿಧ ವಾರ್ಡ್‌ಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಟ್ಯಾಂಕರ್ ಮೌಂಟೆಡ್ ಟ್ರ್ಯಾಲಿ ಸರಬರಾಜು ಮಾಡುವುದು ಮತ್ತು ಟ್ಯಾಂಕರ್ ಮೂಲಕ ವಿವಿಧ ವಾರ್ಡ್‌ಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಕರೆಯಲಾಗಿದ್ದ ಟೆಂಡರ್‌ಗೆ ಅನುಮೋದನೆ. ಹಾಗೂ ಪುರಸಭಾ ನಿಧಿಯಲ್ಲಿ ಚರ್ಚ್ ಕಾಲೋನಿಗೆ ಮತ್ತು ರೇಲ್ವೆ ಬ್ರಿಡ್ಜ್ ಹತ್ತಿರ ಬೀದಿ ದೀಪಗಳ ಆಳವಡಿಕೆಗೆ ವಿದ್ಯುತ್ ಸಂಪರ್ಕ ಒದಗಿಸುವ ಕಾಮಗಾರಿಗೆ ಅತ್ಯಂತ ಕಡಿಮೆ ದರಕ್ಕೆ ಟೆಂಡರ್ನ್‌ಮೂದಿಸಿದ್ದ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವಂತೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಭಾಗ್ಯಲತಾ ಮಂಜುನಾಥ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಮೀವುಲ್ಲ, ಮುಖ್ಯಾಧಿಕಾರಿ ಸತ್ಯನಾರಾಯಣ, ನಾಮನಿರ್ದೇಶಿತ ಸದಸ್ಯರಾದ ಅಬ್ದುಲ್ ಜಮೀಲ್, ಜಯಪದ್ಮ ಯೂನಸ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

