ಲೋಕಸಭೆ ಸಮರಕ್ಕೆ ಜಿಲ್ಲಾಡಳಿತ ಸನ್ನದ್ಧ
ಹಾಸನ: ಜಿಲ್ಲೆ ಹಾಗೂ ಕಡೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ 15,23,524 ಮತದಾರರು ಹಾಗೂ 2196 ಮತಗಟ್ಟೆಗಳಿದ್ದು ಜಿಲ್ಲಾಡಳಿತ ಚುನಾವಣೆಗೆ ಸಿದ್ಧತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ವಿವರಣೆ ನೀಡಿದರು. ಜಿಲ್ಲೆಯಲ್ಲಿ 1960 ಹಾಗೂ ಕಡೂರು ವಿಧಾನಸಬಾ ಕ್ಷೇತ್ರದಲ್ಲಿ 236 ಸೇರಿದಂತೆ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2196 ಮತಗಟ್ಟೆಗಳಿದ್ದು, ಶ್ರವಣಬೆಳಗೊಳದಲ್ಲಿ270 ಮತಗಟ್ಟೆಗಳು, ಅರಸೀಕೆರೆಯಲ್ಲಿ 275 ಮತಗಟ್ಟೆಗಳು, ಬೇಲೂರಿನಲ್ಲಿ 268 ಮತಗಟ್ಟೆಗಳು, ಹಾಸನದಲ್ಲಿ 265 ಮತಗಟ್ಟೆಗಳು, ಹೊಳೆನರಸೀಪುರದಲ್ಲಿ 316 ಮತಗಟ್ಟೆಗಳು, ಅರಕಲಗೂಡಿನಲ್ಲಿ 285 ಮತಗಟ್ಟೆಗಳು, ಸಕಲೇಶಪುರದಲ್ಲಿ 281 ಮತಗಟ್ಟೆಗಳು ಮತ್ತು ಕಡೂರಿನಲ್ಲಿ 236 ಮತಗಟ್ಟೆಗಳು ಸೇರಿದಂತೆ ಒಟ್ಟಾರೆಯಾಗಿ 2196 ಮತಗಟ್ಟೆಗಳಿವೆ ಎಂದರು. ಎಲ್ಲೆಡೆ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಅಕ್ರಮ ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು
ಮತ ಯಂತ್ರಗಳ ಸರಬರಾಜು: ಲೋಕಸಭಾ ಸಾರ್ವತ್ರಿಕ ಚುನಾವಣೆಗಾಗಿ ಬಿಇಎಲ್ ಕಂಪನೆಯಿಂದ ನೂತನ ವಿದ್ಯುನ್ಮಾನ ಮತ ಯಂತ್ರಗಳನ್ನು ಸರಬರಾಜು ಮಾಡಿದ್ದು, ಇವುಗಳಲ್ಲಿ 2700 ಬಿಯುಗಳು ಹಾಗೂ 2180 ಸಿಯುಗಳಿದ್ದು, ಸರ್ಕಾರಿ ಎಂಜಿಯರಿಂಗ್ ಕಾಲೇಜಿನಲ್ಲಿ ಭದ್ರತೆಯಲ್ಲಿ ಇಡಲಾಗಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಪ್ರಥಮವಾಗಿ ಪರಿಶೀಲನೆ ಮಾಡಲು ಬಿಇಎಲ್ನ ಅಧಿಕಾರಿ ಮತ್ತು ಎಂಜಿನಿಯರ್ಗಳು ಬರಲಿದ್ದು, ಅವುಗಳ ಪರಿಶೀಲನೆ ನಡೆಸಲಿದ್ದಾರೆ. ಆನಂತರ, ಆಯಾ ವಿಧಾನ ಸಭಾ ಕ್ಷೇತ್ರಗಳಿಗೆ ಮರು ಹಂಚಿಕೆ ಮಾಡಲು ಕ್ರಮವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ನೀತಿ ಸಂಹಿತೆ ತಂಡಗಳು: ನೀತಿ ಸಂಹಿತೆಯನ್ನು ಜಾರಿಗೆ ತರಲು ಜಿಲ್ಲಾಮಟ್ಟ, ತಾಲೂಕು ಮಟ್ಟ ಹಾಗೂ ಹೋಬಳಿ ಮಟ್ಟಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿ ತಂಡಗಳನ್ನು ರಸಚಿಲಾಗಿದೆ. ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಹಾಸನ ಉಪ ವಿಭಾಗಾಧಿಕಾರಿ ಬಿ.ಶರತ್, ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ.ಎಸ್.ಎಸ್. ಮಧುಕೇಶ್ವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ರಶ್ಮಿ, ಜಿಲ್ಲಾ ವಾರ್ತಾ ಮತ್ತು ಪ್ರಚಾರಾಧಿಕಾರಿ ವಿನೋದ್ ಚಂದ್ರ ತಂಡದಲ್ಲಿದ್ದಾರೆ.
ಅಧಿಕಾರಿಗಳ ನಿಯೋಗ: ಶ್ರವಣಬೆಳಗೊಳದಲ್ಲಿ ಜಿಲ್ಲಾ ಪಂಚಾಯ್ತಿಯ ಜಿಲ್ಲಾ ಯೋಜನಾಧಿಕಾರಿ ಎಚ್.ವಿ.ನಾಗರಾಜು, ಅರಸೀಕೆರೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎನ್.ಆರ್.ಪುರುಷೋತ್ತಮ್, ಬೇಲೂರಿನಲ್ಲಿ ಭೂ ಸೇನಾ ನಿಗಮದ ಉಪ ನಿರ್ದೇಶಕ ವೇಣುಗೋಪಾಲ್, ಹಾಸನದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಹನುಮಂತರೆಡ್ಡಿ, ಹೊಳೆನರಸೀಪುರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಎಸ್.ಬಸವರಾಜು, ಅರಕಲಗೂಡಿನಲ್ಲಿ ಪಶುಸಂಗೋಪನಾ ಇಲಾಖೆಯ ಡಾ.ಪಿ. ಶ್ರೀನಿವಾಸ್, ಸಕಲೇಶಪುರದಲ್ಲಿ ಜಿಲ್ಲಾ ನೋಂದಣಾಧಿಕಾರಿ ಆರ್.ಪಿ. ಬಡಿಗೇರ, ಸಕಲೇಶಪುರ-ಆಲೂರಿನಲ್ಲಿ ಜಿಲ್ಲಾ ಪಂಚಾಯ್ತಿ ಜಲಾನಯನ ಅಧಿಕಾರಿ ಜಿ.ಡಿ.ಕೃಷ್ಣಮೂರ್ತಿ.
ಸಹಾಯಕ ಚುನಾವಣಾಧಿಕಾರಿಗಳು: ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಜಿ. ಸುರೇಶ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಕೀಲ್ ಅಹಮದ್, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಪಿ. ಕುಮಾರ್, ಹಾಸನ ಉಪ ವಿಭಾಗಾಧಿಕಾರಿ ಬಿ.ಶರತ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ. ಸುಜ್ಞಾನ ಮೂರ್ತಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ಸಿ.ಕೆ. ಜಗದೀಶ್ ಕುಮಾರ್, ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ. ಮಧುಕೇಶ್ವರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ವಿ. ನಾಗರಾಜು ಈ ನೇಮಕಾತಿ ಆದೇಶ ಅಂತಿಮವಾಗಿ ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳು ಅನುಮೋದಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ, ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಇದ್ದರು.
9ರಂದು ಮತಪಟ್ಟಿ ಆಂದೋಲನ
ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಅರ್ಹ ಮತದಾರರ ಹೆಸರನ್ನು ಸೇರಿಸಲು ಮಾ. 9ರಂದು ಜಿಲ್ಲೆಯ ಎಲ್ಲಾ 1980 ಮತಗಟ್ಟೆಗಳಲ್ಲಿ ಆಯೋಗದ ನಿರ್ದೇಶನದಂತೆ ಆಂದೋಲನವನ್ನು ನಡೆಸಲಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ. ವಿಧಾನ ಸಭಾ ಕ್ಷೇತ್ರಗಳಲ್ಲಿನ ಸ್ಥಳ ಬದಲಾವಣೆ ಸಂದರ್ಭದಲ್ಲಿ 8ಎ ನಮೂನೆಗಳನ್ನು ಸೂಕ್ತವಾಗಿ ಭಿರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮತಗಟ್ಟೆ ಅಧಿಕಾರಿ (ಬಿಎಲ್ಓ)ಗಳಿಗ ನೀಡಬೇಕು. ಈ ನಮೂನೆಗಳನ್ನು ಮಾ. 16ರವರೆಗೂ ಸಹ ನೀಡಬಹುದಾಗಿದೆ. ನಂತರ ಬರುವ ಅರ್ಜಿ ನಮೂನೆಗಳನ್ನು ಪರಿಗಣಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮತದಾರರ ವಿವರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿ ಅನ್ಬುಕುಮಾರ್, ಜಿಲ್ಲೆಯಲ್ಲಿನ ಮತದಾರರ ವಿವರಣೆ ನೀಡಿದರು. ಶ್ರವಣಬೆಳಗೊಳದಲ್ಲಿ 96,305 ಪುರುಷರು, 95,675 ಮಹಿಳೆಯರು, ಇತರೆ 9 ಸೇರಿದಂತೆ ಒಟ್ಟು 1,91,989 ಮತದಾರರು ಇದ್ದಾರೆ. ಅರಸೀಕೆರೆಯಲ್ಲಿ 1,00,133 ಪುರುಷರು, 99,893 ಮಹಿಳೆಯರು, ಇತರೆ 19 ಸೇರಿದಂತೆ 2,00,045 ಮತದಾರರಿದ್ದಾರೆ. ಬೇಲೂರಿನಲ್ಲಿ 90,296 ಪುರುಷರು, 86,750 ಮಹಿಳೆಯರು, ಇತರೆ 5 ಸೇರಿದಂತೆ 1,77,051 ಮತದಾರಿದ್ದಾರೆ. ಹಾಸನದಲ್ಲಿ 94,346 ಪುರುಷರು, 94,460 ಮಹಿಳೆಯರು, ಇತರೆ 16 ಸೇರಿದಂತೆ 1,88,822 ಮತದಾರರಿದ್ದಾರೆ ಎಂದು ವಿವರಿಸಿದರು. ಹೊಳೆನರಸೀಪುರದಲ್ಲಿ 1,00,627 ಪುರುಷರು, 98,440 ಮಹಿಳೆಯರು, 6 ಇತರೆ ಸೇರಿದಂತೆ 1,99,073 ಮತದಾರರಿದ್ದಾರೆ. ಅರಕಲಗೂಡಿನಲ್ಲಿ 1,03,408 ಪುರುಷರು, 96,386 ಮಹಿಳೆಯರು, 10 ಇತರೆ ಸೇರಿದಂತೆ 1,99,804 ಮತದಾರರಿದ್ದಾರೆ. ಸಕಲೇಶಪುರದಲ್ಲಿ 91,805 ಪುರುಷರು, 91,313 ಮಹಿಳಯರು, 4 ಇತರೆ ಸೇರಿದಂತೆ 1,83,122 ಮತದಾರರಿದ್ದಾರೆ. ಕಡೂರಿನಲ್ಲಿ 93,849 ಪುರುಷರಿದ್ದು, 89,763 ಮಹಿಳೆಯರು, 6 ಇತರೆ ಸೇರಿದಂತೆ 1,83,618 ಮತದಾರರು ಸೇರಿದಂತೆ ಒಟ್ಟಾರೆಯಾಗಿ 15,23,524 ಮತದಾರರಿದ್ದಾರೆ ಎಂದು ಅನ್ಬುಕುಮಾರ್ ತಿಳಿಸಿದರು.
ಸಾರ್ವಜನಿಕರಿಗೆ ಹೆಲ್ಪ್ಲೈನ್
ಜಿಲ್ಲಾಧಿಕಾರಿಗಳ ಕಚೇರಿ 08172-265028, 08172 -261111, 08172-267345, ಹಾಸನ ಉಪ ವಿಭಾಗಾಧಿಕಾರಿ ಕಚೇರಿ 08172-268403, ಸಕಲೇಶಪುರ ಉಪ ವಿಭಾಗಾಧಿಕಾರಿ ಕಚೇರಿ 08172-244003, ತಾಲೂಕು ಕಚೇರಿಯ 08172-268395, 08172-260395, ಅರಸೀಕೆರೆ ತಾಲೂಕು ಕಚೇರಿಯ 08174-232270, 08174-234879, ಚನ್ನರಾಯಪಟ್ಟಣ ತಾಲೂಕು ಕಚೇರಿ 08176-252235, 08176-252314, ಬೇಲೂರು ತಾಲೂಕು ಕಚೇರಿಯ 08177-222234, 08177-230800. ಅರಕಲಗೂಡು ತಾಲೂಕು ಕಚೇರಿಯ 08175-220246, 08175-221736, ಹೊಳೆನರಸೀಪುರ ತಾಲೂಕು ಕಚೇರಿಯ 08175-273261, 08175-272111, ಸಕಲೇಶಪುರ ತಾಲೂಕು ಕಚೇರಿಯ 08173-244004, 08173-243012 ಮತ್ತು ಆಲೂರು ತಾಲೂಕು ಕಚೇರಿಯ 08170-218222 ಹಾಗೂ 08170-218422 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

