ಅಪ್ಪ- ಮಗನ ಕ್ಷುಲ್ಲಕ ರಾಜಕಾರಣ
ಅರಕಲಗೂಡು: ಕಳೆದ ನಾಲ್ಕೂವರೆ ವರ್ಷದಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರದತ್ತ ಮುಖ ಮಾಡದ ಮಾಜಿ ಪ್ರಧಾನಿ, ಸಂಸದ ಎಚ್.ಡಿ. ದೇವೇಗೌಡರು ಚುನಾವಣೆ ಸಮೀಪಿಸುತ್ತಿದ್ದಂತೆ ತರಾತುರಿಯಲ್ಲಿ ಅಭಿವೃದ್ದಿ ಕಾಮಗಾರಿಗಳಲ್ಲೂ ಕ್ಷುಲ್ಲಕ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಶಾಸಕ ಎ. ಮಂಜು ಕಿಡಿ ಕಾರಿದ್ದಾರೆ.
ಮಾಜಿ ಪ್ರಧಾನಿಗಳಾಗಿ ಉನ್ನತ ಹುದ್ದೆಯನ್ನು ಅಲಂಕರಿಸಿದವರು ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಸರ್ಕಾರದ ಅನುದಾನದಿಂದ ನಿರ್ಮಿಸಿದ ಸಮುದಾಯಭವನಗಳನ್ನು ಉದ್ಘಾಟಿಸುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಅಗ್ರಹಾರ, ದೊಡ್ಡಳ್ಳಿ, ಮಾದಾಪುರ, ಪೇಟೆ ಮಾಚಗೋಡನಹಳ್ಳಿ ಗ್ರಾಮಗಳಲ್ಲಿ ಸಮುದಾಯ ಭವನಗಳನ್ನು ಉದ್ಘಾಟಿಸಿದ ದೇವೇಗೌಡ ಹಾಗೂ ಅವರ ಮಗ ಎಚ್.ಡಿ. ರೇವಣ್ಣ ಯಾವ ನೈತಿಕತೆಯ ಮೇಲೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು ಎಂದು ಪ್ರಶ್ನಿಸಿದರು.
ಕ್ಷಮೆ ಕೇಳಬೇಕು: ಕ್ಷೇತ್ರದ ಶಾಸಕರನ್ನು ಕಡೆಗಣಿಸಿ ಕಾರ್ಯಕ್ರಮಗಳನ್ನು ರೂಪಿಸುವುದು ಎಷ್ಟು ಸರಿ ಎಂದು ಕೇಳಿದ ಅವರು, ಅವರು ಮಾಡಿರುವ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದರು.
ಅಪಮಾನ ಮಾಡಿದ್ದಾರೆ: ಸರ್ಕಾರದ ಅನುದಾನದಿಂದ ನಿರ್ಮಿಸಲಾದ ತಮ್ಮ ಕ್ಷೇತ್ರದ ಸಮುದಾಯ ಭವನಗಳ ಉದ್ಘಾಟನೆಯನ್ನು ಖಾಸಗಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಮಾಡಿರುವುದು ಒಂದೆಡೆಯಾದರೆ,ತಾಲೂಕಿನ ಹುಲ್ಲಂಗಾಲ ಗ್ರಾಮದ ಸಮುದಾಯಭವನವನ್ನು ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್.ಡಿ. ರೇವಣ್ಣ ಉದ್ಘಾಟಿಸುವ ಮೂಲಕ ಈ ಕ್ಷೇತ್ರದ ಜನತೆಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.
ತಮ್ಮ ಕ್ಷೇತ್ರದಲ್ಲಿ ಅನಗತ್ಯ ಹಸ್ತಕ್ಷೇಪವನ್ನು ತಾವು ಸಹಿಸಲಾಗದು ಎಂದು ಎಚ್ಚರಿಸಿದ ಅವರು ದೇವೇಗೌಡರು ಚುನಾವಣೆ ಹತ್ತಿರವಾದಂತೆ ತಾಲೂಕಿನ ಜನರ ಮೇಲೆ ತೋರುವ ಪ್ರೀತಿ ಕಳೆದ ನಾಲ್ಕೂವರೆ ವರ್ಷ ಇರಲಿಲ್ಲ. ಪ್ರತಿ ವರ್ಷದ ಸಂಸದರ ನಿಧಿಗೆ ಬರುವ ರು. 5 ಕೋಟಿ ಹಣದಲ್ಲಿ ತಾಲೂಕಿಗೆ ಎಷ್ಟು ನೀಡಿದ್ದಾರೆ ಎಂದು ಮಂಜು ಪ್ರಶ್ನಿಸಿದರು.
ಅಧಿಕಾರಿಗಳ ವಿರುದ್ದ ಕ್ರಮ- ಹುಲ್ಲಂಗಾಲ ಗ್ರಾಮದ ಸಮುದಾಯಭವನವನ್ನು ಈ ಹಿಂದೆಯೇ ತಾವು ಉದ್ಘಾಟಿಸಿದ್ದೆವು.ಅದೇ ಕಟ್ಟಡಕ್ಕೆ ಸುಣ್ಣ ಬಣ್ಣ ಮಾಡಿಸಿ ಎರಡನೇ ಬಾರಿಗೆ ಉದ್ಘಾಟಿಸಿರುವ ರೇವಣ್ಣ ಇಷ್ಟೋಂದು ಕೆಳ ಮಟ್ಟದ ಪ್ರಚಾರ ಪ್ರಿಯತೆ ಹೊಂದಬಾರದಿತ್ತು ಎಂದು ನುಡಿದು ಈ ಘಟನೆಗೆ ಸಂಬಂಧಿಸಿದಂತೆ ತಾವು ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಸರ್ಕಾರಕ್ಕೆ ಬರೆಯುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

