ಯಮಪುರಿಗೆ ರಹದಾರಿಯಾಗಿರುವ ಪ್ರಮುಖ ರಸ್ತೆ
ಅರಕಲಗೂಡು: ಪಟ್ಟಣದ ಹೊರವಲಯಗಳ ರಸ್ತೆಗಳು ಗುಂಡಿ ಬಿದ್ದು ವಾಹನ ಸಂಚಾರವೇ ದುಸ್ಥರ ಎಂಬ ಬೊಬ್ಬೆ ಒಂದೆಡೆಯಾದರೆ, ಅರಕಲಗೂಡು ಪಟ್ಟಣದ ಒಳಗೇ ಇರುವ ಪ್ರಮುಖ ರಸ್ತೆಗಳಲ್ಲೂ ಸುಗಮ ಸಂಚಾರಕ್ಕೂ ಹತ್ತಾರು ಸಮಸ್ಯೆಗಳಿವೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಒಂದಾದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಮುಂದಿನ ರಸ್ತೆ ಹಿರೀಸಾವೆಯಿಂದ ಸೋಮವಾರ ಪೇಟೆ ಹಾಗೂ ಹಳೇಬೀಡಿನಿಂದ ಪಿರಿಯಾಪಟ್ಟಣಕ್ಕೆ ಹೋಗುವ ಹೆದ್ದಾರಿಯಲ್ಲಿ ಬರುವ ರಸ್ತೆ. ಪಟ್ಟಣದಲ್ಲಿ ಬರುವ ಈ ದ್ವಿಪಥ ರಸ್ತೆ. ಈ ರಸ್ತೆಯ ಒಂದು ಬದಿಯ ತುಂಬೆಲ್ಲಾ ರಸ್ತೆ ಬದಿಯ ಮಣ್ಣೇ ತುಂಬಿ ಹೋಗಿದೆ. ಡಾಂಬಾರು ರಸ್ತೆಯೇ ಕಾಣದಂತಾಗಿದೆ. ವಾಹನಗಳೇನಾದರೂ ಇದರ ಮೇಲೆ ಚಲಿಸಿದರೆ ಸಾಕು, ಪಾದಚಾರಿಗಳಂತೂ ಧೂಳಿನಿಂದ ಮುಚ್ಚಿ ಹೋಗುತ್ತಾರೆ.
ಕಣ್ಣು ತುಂಬೆಲ್ಲಾ ಮಣ್ಣು ತುಂಬಿ ಕಣ್ಣು ಹಾಳಾಗುತ್ತಿದೆ. ಇನ್ನು ದ್ವಿಚಕ್ರ ವಾಹನಗಳೇನಾದರೂ ಈ ಮಣ್ಣು ರಸ್ತೆಯಲ್ಲಿ ಚಲಿಸಿದರೆ, ಅದೊಂದು ಮೃತ್ಯು ಮೃದಂಗವೇ ಸರಿ. ಈವರೆಗೆ ಈ ಮಣ್ಣು ತುಂಬಿದ ಡಾಂಬಾರು ರಸ್ತೆಯಲ್ಲಿ ಬಿದ್ದು ತಲೆ ಒಡೆದುಕೊಂಡವರು ಅದೆಷ್ಟೋ ಮಂದಿ.
ನಿರ್ವಹಣೆ ಯಾರ ಜವಾಬ್ದಾರಿ?: ಇದಾವುದೂ ಇಲ್ಲಿನ ಅಧಿಕಾರಿಗಳಿಗೆ ಕಾಣದಿರುವುದು ಈ ಭಾಗದ ಜನರ ದುರಂತವೇ ಸರಿ.ಇಷ್ಟಕ್ಕೂ ಈ ರಸ್ತೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ್ದು, ಇದರ ನಿರ್ವಹಣೆ ಯಾರಿಗೆ ಸೇರಬೇಕು ಎಂಬುದು ಇಲ್ಲಿರುವ ಪ್ರಶ್ನೆ.ಲೋಕೋಪಯೋಗಿ ಇಲಾಖೆ ಈ ಡಾಂಬಾರ್ ರಸ್ತೆ ಮೇಲಿರುವ ಮಣ್ಣು ತೆಗೆಸಬೇಕೆರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರದ್ದೇ ಅಥವಾ ಪಟ್ಟಣ ಪಂಚಾಯಿತಿ ಈ ಮಣ್ಣು ತೆಗೆಸಬೇಕೇ ಎಂಬ ಪ್ರಶ್ನೆ ತಲೆ ಎತ್ತಿದೆ. ಈ ಹಿಂದೆ ಒಂದೆರಡು ಬಾರಿ ಪಟ್ಟಣ ಪಂಚಾಯಿತಿ ಸಾರ್ವಜನಿಕ ಒತ್ತಡಕ್ಕೆ ಮಣಿದು ಮಣ್ಣು ತೆಗೆಸಿದೆಯಾದರೂ, ಲೋಕೋಪಯೋಗಿ ಇಲಾಖೆ ಎಂಬ ಪ್ರಶ್ನೆ ಎದ್ದಿದೆ.
ಈ ನಡುವೆ ಪಟ್ಟಣ ಪಂಚಾಯಿತಿ ಕೆಲಸಗಾರರ ಸಮಸ್ಯೆ ಎದುರಿಸುತ್ತಿದ್ದು, ಪೌರಕಾರ್ಮಿಕರನ್ನು ಈ ಕೆಲಸಕ್ಕೆ ಹಚ್ಚಿದರೆ ಪಟ್ಟಣದ ನೈರ್ಮಲ್ಯ ಕಾಯುವ ಕೆಲಸ ಮಾಡಲು ಅಸಾಧ್ಯ ಎಂಬುದು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರ ಅಭಿಪ್ರಾಯ. ಒಟ್ಟಾರೆ, ಇಂತಹ ಸಣ್ಣ ಪುಟ್ಟ ಸಮಸ್ಯೆಗಳೂ ಇಲ್ಲಿಯ ಜನರನ್ನು ಕಾಡುತ್ತಿದೆ. ಇದಕ್ಕೆ ಪರಿಹಾರ ದೊರಕುವುದಾದರೂ ಎಂದು ಕಾದು ನೋಡಬೇಕಿದೆ.
-ಅ.ರಾ. ಸುಬ್ಬರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

