ಸಾಹಿತ್ಯಕ್ಕೆ ಜಿಎಸ್ಎಸ್ ಕೊಡುಗೆ ಅಪಾರ: ಶಂಕರ್
ಹಾಸನ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಜಿಎಸ್ಎಸ್ ಅವರ ಅಪಾರ ಕೊಡುಗೆಯನ್ನು ನೀಡಿದಂತಹ ಮಹಾನ್ ಸಾಹಿತಿ ಎಂದು ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರ ಕನ್ನಡ ಸಹ ಪ್ರಾಧ್ಯಾಪಕ ಎಂ. ಶಂಕರ್ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜ್ ಸಭಾಂಗಣದಲ್ಲಿ ಕನ್ನಡ ವಿಭಾಗ ಹಾಗೂ ಸಾಹಿತ್ಯ ಸ್ಪಂದನ ವೇದಿಕೆಯಿಂದ ಗುರುವಾರ ನಡೆದ ಜಿಎಸ್ಎಸ್ ನುಡಿನಮನ, ಗೀತಾ ಗಾಯನ ಹಾಗೂ ನುಡಿ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕವಿಯಾದವನು ತನ್ನ ಕವಿತೆಗಳಲ್ಲಿ ಮತ್ತೊಬ್ಬ ಕವಿಯನ್ನು ಕಾಣುತ್ತಾನೆ. ಭೌತಿಕವಾಗಿ ಇಂದು ಕವಿ ಇದ್ದೂ ಇಲ್ಲ ಎಂದಾಗ ನಮ್ಮಲ್ಲಿ ಶೂನ್ಯ ಎನ್ನುವ ಭಾವನೆ ಮೂಡುತ್ತದೆ. ಜಿಎಸ್ಎಸ್ ತಮ್ಮ ಕಾಲಾವಧಿಯ ಹಲವಾರು ಕವಿತೆಯನ್ನು ರಚಿಸಿ ಎಲ್ಲರ ಮನದಲ್ಲಿ ಉಳಿದಿದ್ದಾರೆ ಎಂದರು. ಸಾವಿರ ವರ್ಷಗಳಾದರೂ ಬಸವಣ್ಣ, ಅಕ್ಕಮಹಾದೇವಿ ಹಾಗೂ ದಾಸರನ್ನು ನೆನಪಿಸಿಕೊಳ್ಳುತ್ತೇವೆ. ಅದೇ ರೀತಿ ಜಿಎಸ್ಎಸ್ ಅವರನ್ನೂ ನೆನೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಎಸ್. ಶಿವರುದ್ರಪ್ಪ ರವರ ಸಾಹಿತ್ಯದ ಗೀತೆಯನ್ನು ಆಕಾಶವಾಣಿ ಕಲಾವಿದೆ ಬನಮ ಗುರುದತ್ ಹಾಡಿದರು. ಇದೆ ವೇಳೆ ಕಾಲೇಜಿನ ಪ್ರಾಂಶುಪಾಲ ಐ.ಎಂ.ಮೋಹನ್ ಇತರರು ಇದ್ದರು. ಎಚ್.ಕೆ. ಶೃತಿಶ್ರೀ ಪ್ರಾರ್ಥಿಸಿದರು. ಸಿ.ಪಿ. ಶರತ್ ಕುಮಾರ್ ಸ್ವಾಗತಿಸಿದರು.
'ಗ್ರಾಮೀಣ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ'
ಅರಕಲಗೂಡು: ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡುವಲ್ಲಿ ಪೈಪೋಟಿ ನೀಡುತ್ತಿದ್ದು ನಗರ ಪ್ರದೇಶದ ಶಿಕ್ಷಣ ಸಂಸ್ಥೆಗಳಿಗಿಂತ ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆಗಳು ಹೆಚ್ಚು ಪರಿಣಾಮಕಾರಿಯಾಗಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಫಲವಾಗಿವೆ ಎಂದು ಪೊಟ್ಯಾಟೋ ಕ್ಲಬ್ನ ಸಂಸ್ಥಾಪಕ ಅಧ್ಯಕ್ಷ ಹೆಚ್. ಯೋಗಾರವುಶ್ ತಿಳಿಸಿದ್ದಾರೆ.
ತಾಲೂಕಿನ ಗಂಜಲಗೂಡು ಗ್ರಾಮದ ಶ್ರೀ ಲಕ್ಷ್ಮೀ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಪೋಷಕರಲ್ಲಿ ಇಂದು ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸ ಬೇಕೆಂಬ ಮನೋಭಾವ ಹೆಚ್ಚಾಗುತ್ತಿದೆ. ಇದಕ್ಕೆ ಸರ್ಕಾರಿ ಶಾಲೆಗಳಲ್ಲಿ ಸಮರ್ಪಕವಾಗಿ ಶಿಕ್ಷಣ ಸಮರ್ಪಣಾ ಮನೋಭಾವ ಕಡಿಮೆಯಾಗಿರುವುದೂ ಕಾರಣ ಎಂದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು ಮಕ್ಕಳನ್ನು ಕೆಲಸಕ್ಕೆ ಹಚ್ಚದೇ ಉತ್ತಮ ಶಿಕ್ಷಣ ನೀಡುವತ್ತ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಸೌಲಭ್ಯವಿದ್ದರೂ ಗುಣಮಟ್ಟವಿಲ್ಲ: ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಎ. ನಂಜುಂಡಸ್ವಾಮಿ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಕಡಿಮೆ ಸಂಬಳ ಮತ್ತು ಸೌಲಭ್ಯಗಳನ್ನು ಪಡೆದ ಶಿಕ್ಷಕರು ಹೆಚ್ಚು ಗುಣಾತ್ಮಕ ಮತ್ತು ಪರಿಣಾಮಕಾರಿ ಶಿಕ್ಷಣ ನೀಡುತ್ತಿದ್ದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ಹೆಚ್ಚಿನ ಸಂಬಳ ಮತ್ತು ಹಲವು ಸೌಲಭ್ಯಗಳಿದ್ದರೂ ಗುಣಮಟ್ಟದ ಶಿಕ್ಷಣ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಉಪನ್ಯಾಸಕ ಲಕ್ಷ್ಮಣ್ ಮಾತನಾಡಿದರು. ಸಮಾರಂಭದಲ್ಲಿ ಶಾಲಾ ಕಾರ್ಯದರ್ಶಿ ಲಕ್ಷ್ಮಿ ಲಕ್ಷಣ, ಪಟ್ಟಣ ಪಂಚಾಯಿತಿ ಸದಸ್ಯ ರಮೇಶ್ ವಾಟಾಳ್,ಹೊನ್ನವಳ್ಳಿ ಲೋಕೇಶ್, ವಿರೂಪಾಕ್ಷ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನವಾಯಿತು.
ಉತ್ತಮ ರೀತಿ ಕಾಮಗಾರಿ ಮಾಡಿಸಿಕೊಳ್ಳಲು ಸಲಹೆ
ರಾಮನಾಥಪುರ: ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಗ್ರಾಮದ ಕಾಮಗಾರಿಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಿ ಉತ್ತಮ ರೀತಿ ಕಾಮಗಾರಿಗಳನ್ನು ಮಾಡಿಸಿಕೊಳ್ಳುವಂತೆ ಶಾಸಕ ಎ. ಮಂಜು ಸಲಹೆ ನೀಡಿದರು. ಕೊಣನೂರು ಹೋಬಳಿ ಹೆಣ್ಣೂರು ಕೆಂಗಳಲೆ ಗ್ರಾಮದಲ್ಲಿ ಇತ್ತೀಚೆಗೆ ಕೆರೆ ಹೂಳು ಹಾಗೂ ಕೆರೆ ಕೋಡಿ ನಿರ್ಮಾಣಕ್ಕೆ ಎನ್.ಆರ್.ಏ.ಜಿ ವತಿಯಿಂದ ರು. 30 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಿದರು. ಕಾಮಗಾರಿ ಮಾಡುವ ಗುತ್ತಿಗೆದಾರರು ಗುಣಮಟ್ಟದ ಕಾಪಾಡುವಂತೆ ತಿಳಿಸಿದರು. ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ರಾಜೇಗೌಡ, ಮುಖಂಡ ಮಂಜು ಸಣ್ಣಸ್ವಾಮಿ, ಶೇಖರ್, ಬೋಮನಹಳ್ಳಿ ಕೃಷ್ಣ, ಹೋಸನಗರ ವೆಂಕಟೇಶ್ ಇತರರು ಇದ್ದರು. ಕುಮಾರ್ ಸ್ವಾಗತಿಸಿ, ರಾಜಣ್ಣ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

