ಹಾಸನ

ಇ-ಟೆಂಡರ್ ಖಂಡಿಸಿ ಕೃಷಿ ಮಾರುಕಟ್ಟೆ ಬಂದ್

Published On :

ಅರಸೀಕೆರೆ: ಇ- ಟೆಂಡರ್ ಪದ್ಧತಿ ವಿರೋಧಿಸಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಎಲ್ಲಾ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚುವ ಮೂಲಕ ವ್ಯಾಪಾರ- ವಹಿವಾಟುಗಳಿಗೆ ಸಂಪೂರ್ಣ ವಿರಾಮ ನೀಡಿ ಶುಕ್ರವಾರ ಬಂದ್ ಆಚರಿಸಿದರು.
ರಾಜ್ಯ ಸರ್ಕಾರ ಈಗಾಗಲೇ ಜಾರಿಗೆ ತಂದಿರುವ 2013 ಕೃಷಿ ಮಾರಾಟ ನೀತಿ, ರೈತರ ಹಿತಾಶಕ್ತಿಗೆ ಸಂಪೂರ್ಣ ಮಾರಕವಾಗಿದ್ದು.
 ಈ ನೂತನ ಕಾಯ್ದೆಯಿಂದ ರೈತರಿಗೆ ಮತ್ತು ವರ್ತಕರಿಗೆ ಯಾವುದೇ ರೀತಿಯ ಅನುಕೂಲ ಆಗುವುದಿಲ್ಲ ಬದಲಿಗೆ ಖಾಸಗಿ ಕಂಪನಿಗಳಿಗೆ ಹೆಚ್ಚಿನ ವರದಾನವಾಗಿದ್ದು, ಈ ಅವೈಜ್ಞಾನಿಕ ನೀತಿಯನ್ನು ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಪ್ರತಿಭಟನಾನಿರತ ವರ್ತಕರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಜಿ.ವಿ.ಟಿ. ಬಸವರಾಜು ಮಾತನಾಡಿ, ಹಳೇಯ ಟೆಂಡರ್ ಪದ್ಧತಿ ರೈತರು ಮತ್ತು ವರ್ತಕರ ನಡುವೆ ಉತ್ತಮ ಬಾಂಧವ್ಯ ವೃದ್ಧಿಸುವ ವ್ಯವಸ್ಥೆಯಾಗಿದ್ದು, ವ್ಯಾಪಾರ, ವ್ಯವಹಾರ, ವಹಿವಾಟುಗಳು ಅನೇಕ ವರ್ಷಗಳಿಂದ ಉತ್ತಮವಾಗಿ ನಡೆಯುತ್ತಿತ್ತು. ಆದರೆ, ಈಗಿನ ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಎಲೆಕ್ಟ್ರಾನಿಕ್ ಮಾಧ್ಯಮದ ಇ- ಟೆಂಡರ್ ಪದ್ಧತಿ ರೈತರಿಗೆ ಹೆಚ್ಚಿನ ಅನಾನುಕೂಲ ಸೃಷ್ಟಿಸುವ ಜೊತೆಗೆ, ರೈತರ ಕೈಗೆ ಹಣ ಸಿಗದ ಪರಿಸ್ಥಿತಿ ನಿರ್ಮಿಸುತ್ತದೆ. ಅಂತಹ ರೈತ ವಿರೋಧಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಸರ್ಕಾರ ಜಾರಿಗೆ ತರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಟಿ.ಎಸ್. ರುದ್ರಯ್ಯ, ಜಿ.ವಿ. ಬಸವರಾಜು, ಮಹಾವೀರ್, ಕೆ. ರಮೇಶ್, ಎಸ್.ಬಿ.ಟಿ. ವೆಂಕಟೇಶ್ ಬಾಬು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.