ಹಾಸನ

ಗಿಡ ಮೂಲಿಕೆಯಲ್ಲಿ ನಾನಾ ಔಷಧಿ

Published On :

ಹಾಸನ: ಭೂಮಿ ಲಭ್ಯವಾಗುವ ಗಿಡ ಮೂಲಿಕೆಯಲ್ಲಿ ನಾನಾ ರೀತಿಯ ಔಷಧಿ ಗುಣ ಹೊಂದಿರುತ್ತದೆ ಎಂದು ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಭಟ್ ತಿಳಿಸಿದ್ದಾರೆ.
ನಗರದ ಸಾಲಗಾಮೆ ರಸ್ತೆಯ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿರುವ ಹೇಮಾವತಿ ಕಲ್ಯಾಣ ಮಂಟಪ (ಗಂಗಾತೀರ್ಥ)ದಲ್ಲಿ ಆರೋಗ್ಯ ಮೇಳವನ್ನು ಜಿಲ್ಲೆಯ ಆಯುಷ್ ಇಲಾಖೆ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮನುಷ್ಯನಿಗೂ ಔಷಧಿ ಬಗ್ಗೆ ತಿಳಿಯುವುದು ಅವಶ್ಯಕವಾಗಿದೆ. ಶೇ. 50ರಷ್ಟು ಹೆಣ್ಣು ಮಕ್ಕಳಿಗೆ ತಿಳುವಳಿಕೆಯ ಕೊರತೆಯಿಂದ ಅನೇಕ ಅವಘಡಕ್ಕೆ ಸಿಲುಕುತ್ತಿದ್ದಾರೆ ಎಂದರು.
ಜಾಗೃತಿ ಮೂಡಿಸಬೇಕು: ನಮ್ಮ ದೇಶವಲ್ಲದೆ ಚೀನಾ, ಥಾಯ್ಲೆಂಡ್ ಸೇರಿದಂತೆ ಇತರೆ ದೇಶಗಳಲ್ಲೂ ಆಯುರ್ವೇದ ಶಾಸ್ತ್ರ ಪ್ರಸಿದ್ಧವಾಗಿದೆ. ಅಮೃತ ಬಳ್ಳಿಯನ್ನು ಹೆಚ್ಚು ಬಿಪಿ ಹಾಗೂ ಸಕ್ಕರೆ ಖಾಯಿಲೆಗೆ ಉಪಯೋಗಿಸಲಾಗುತ್ತಿದೆ. ಮುಖ್ಯವಾಗಿ ದಿನನಿತ್ಯ ಬರುವ ರೋಗಗಳನ್ನು ಗಿಡ ಮೂಲಿಕೆಯಿಂದ ತಡೆಯಬಹುದು ಎಂದು ಅವರು ಸಲಹೆ ನೀಡಿದರು. ಹಳ್ಳಿ ಪ್ರದೇಶದ ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚು ಅರಿವು ಮತ್ತು ಜಾಗೃತಿ ಮೂಡಿಸಬೇಕೆಂದು ಕಿವಿಮಾತು ಹೇಳಿದರು.
ದೈಹಿಕ ರೋಗಕ್ಕೆ ಯೋಗ ಎಲ್ಲಾ ರೀತಿಯ ಖಾಯಿಲೆಗಳಿಗೆ ನಿಯಂತ್ರಣಕಾರಿಯಾಗಿ ಕೆಲಸ ಮಾಡುತ್ತದೆ. ಮೂರು ದಿನದ ಈ ಆರೋಗ್ಯ ಮೇಳವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಗಮನ ನೀಡಬೇಕು: ಜಿಲ್ಲಾ ಆಯುಷ್ ಅಧಿಕಾರಿ ನಂಜರಾಜ್ ಮಾತನಾಡಿ, ಆಯುರ್ವೇದದಲ್ಲಿ ಪ್ರಾಣಾಯಾಮ ಹಾಗೂ ಯೋಗದಂತಹ ಚಿಕಿತ್ಸೆ ಕೂಡ ನೀಡಲಾಗುತ್ತಿದೆ. ನಮ್ಮ ಸುತ್ತಮುತ್ತ ಪರಿಸರದಲ್ಲಿ ಲಭ್ಯವಾಗುವ ಗಿಡ ಮೂಲಿಕೆ ಒಳಗೆ ಅನೇಕ ರೀತಿಯ ಔಷಧಿಗಳನ್ನು ಕಾಣಬಹುದು. ಅದನ್ನು ಉಪಯೋಗಿಸುವ ರೀತಿ ನೀತಿಗಳ ಬಗ್ಗೆ ಹೆಚ್ಚು ಗಮನ ನೀಡಬೇಕಾಗಿದೆ ಎಂದು ಹೇಳಿದರು.
ಮೂರು ದಿನದ ಕಾರ್ಯಕ್ರಮದಲ್ಲಿ ಮನೆ ಮದ್ದು ಔಷಧಿ ಬಗ್ಗೆಯು ಪರಿಚಯ ಮಾಡಲಾಗುತ್ತದೆ ಎಂದರು.  ನೂರಾರು ಜನರು ಈ ಆರೋಗ್ಯ ಮೇಳದ ಉಪಯೋಗ ಪಡೆದುಕೊಂಡರು. ಆಯುಷ್ ಇಲಾಖೆ ನಿವೃತ್ತ ಅಧಿಕಾರಿ ಡಾ. ನಾಗರಾಜ್, ಪರಿಮಳ, ಶೀಲಾ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.