'ಸಂಗೀತ ಪರಿಕಲ್ಪನೆ ಉಳಿಸುವುದು ಶ್ಲಾಘನೀಯ'
ಹೊಳೆನರಸೀಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪಾಶ್ಚಿಮಾತ್ಯ ಸಂಗೀತಗಳ ಅಬ್ಬರಗಳ ನಡುವೆ ನಮ್ಮ ನಾಡು-ನುಡಿಯನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ನೈಜ ಸಂಗೀತದ ಪರಿಕಲ್ಪನೆಯನ್ನು ಮನಸ್ಸಿನಲ್ಲಿ ಉಳಿಯುವಂತಹ ಕೆಲಸವನ್ನು ಮಾಡುತ್ತಿರುವುದು ಸಂತಸದ ಸಂಗತಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ ಅಭಿನಂದಿಸಿದರು.
ಅವರು ಪಟ್ಟಣದ ಶ್ರೀವೆಂಕಟೇಶ್ವರ ವಿದ್ಯಾಸಂಸ್ಥೆ, ಕನ್ನಡ ಸಂಸ್ಕತಿ ಇಲಾಖೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ರೋಟರಿ ಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಗೀತದ ಶಕ್ತಿ: ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವಕೀಲ ಎಚ್.ಎಸ್. ಅರುಣ್, ಸಂಗೀತವು ಸರ್ವ ರೋಗಕ್ಕೂ ಮದ್ದು ಎಂಬಂತೆ ಮನುಷ್ಯನ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ನಾವು ಸಂಗೀತವನ್ನು ಕೇಳಿ ಮನಸ್ಸಿನ ಭಾವನೆಗಳಲ್ಲಿ ಆಗುವ ವ್ಯತಿರಿಕ್ತತೆಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಮನುಷ್ಯನ ರಕ್ತದೊತ್ತಡವನ್ನು ಕಡಿಮೆಗೊಳಿಸಿ ಆರೋಗ್ಯಕ್ಕೆ ಇಂಬು ನೀಡುವ ಶಕ್ತಿ ಸಂಗೀತಕ್ಕಿದೆ. ಇದನ್ನು ಆಲಿಸುವವರಿಗೆ ಆಯಸ್ಸು ಹೆಚ್ಚೆಂಬುದನ್ನು ವಿಜ್ಞಾನಗಳು ದೃಢಪಡಿಸಿವೆ ಎಂದರು.
ಶ್ಲಾಘನೀಯ: ಹಾಸನ ಹಾಲು ಒಕ್ಕೂಟದ ವಿಸ್ತರಾಣಾಧಿಕಾರಿ ದಿನೇಶ್ ಅವರು ಪ್ರಸ್ತುತ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಹತ್ತಾರು ಸಾವಿರ ರೂಗಳನ್ನು ಖರ್ಚು ಮಾಡುವಂತೆ ಆಗಿದೆ. ಆದರೆ ಕನ್ನಡ ಸಂಸ್ಕತಿ ಇಲಾಖೆ ಸುಗಮ ಸಂಗೀತಕ್ಕೆ ಒತ್ತು ನೀಡಿ ನೈಜ ಸಂಗೀತಕ್ಕೆ ಪ್ರಾಶಸ್ತ್ಯ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಪಾತರಗಿತ್ತಿ ಪಕ್ಕ, ಕಾಣದ ಕಡಲಿಗೆ, ಕೋಡಗನ ಕೋಳಿನುಂಗಿತ್ತಾ, ನಿಂಗಿ ನಿಂಗೀ ನಿಂಗಿ, ಬಾರೋ ಕೃಷ್ಣಯ್ಯ, ಗೋವಿಂದ ನಿನ್ನ ನಾಮವೆ ಚಂದ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ, ಭಾಗ್ಯದ ಬಳೆಗಾರ, ಇಷ್ಟು ದಿನ ವೈಕುಂಠ, ಎದೆ ತುಂಬಿ ಹಾಡಿದೆನು, ನೀನಮ್ಮ ಗೆಲುವಾಗಿ ಬಾ, ಮೊದಲ ದಿನ ಮೌನ ಮುಂತಾದ ಸುಮಧುರ ಗೀತೆಗಳು ಸಾರ್ವಜನಿಕರ ಮನಸ್ಸಿಗೆ ಮುದ ನೀಡಿದವು.
ಸುಗಮ ಸಂಗೀತದ ನೇತೃತ್ವವನ್ನು ಶಿಕ್ಷಕ, ಗಾಯಕರೂ ಆದ ಕೆ.ಎಲ್.ದಿವಾಕರ್ ವಹಿಸಿದ್ದರು. ಸಮಾರಂಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಕಾರ್ಯದರ್ಶಿ ಶಿವಕುಮಾರ್, ಶಿಕ್ಷಕ ಶಿವಕುಮಾರಾಚಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

