ಇಂದು ಜಿಲ್ಲಾದ್ಯಂತ ಮತದಾರರ ವಿಶೇಷ ಅಭಿಯಾನ
ಹಾಸನ: ಮತದಾರರ ಮಾಹಿತಿಗಾಗಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಮಾ. 9ರಂದು ವಿಶೇಷ ಅಭಿಯಾನ ದಿನವನ್ನಾಗಿ ಆಚರಿಸಲಾಗುತ್ತಿದೆ.
ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಬಿ.ಎಲ್.ಒ.ಗಳು ಕಡ್ಡಾಯವಾಗಿ ಸಂಬಂಧಿಸಿದ ಮತಗಟ್ಟೆಗಳಲ್ಲಿ ಹಾಜರಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಅರ್ಜಿಗಳ ವಿವರ: ಜ. 1, 2014ಕ್ಕೆ 18 ವರ್ಷ ತುಂಬುವ ಎಲ್ಲರೂ, ಮತದಾರರ ಪಟ್ಟಿಯಲ್ಲಿ ಹೆಸರು ಸೇರದೇ ಇರುವ ಮತದಾರರು, ನಮೂನೆ- 6ನ್ನು ಒಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ, ಜನನ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರಗಳೊಂದಿಗೆ ಭರ್ತಿ ಮಾಡಿ ಸಲ್ಲಿಸುವುದು. ಮತ, ಅನರ್ಹ, ವಾಸವಿಲ್ಲದ ಮತದಾರರ ಹೆಸರು ನಮೂದುಗಳನ್ನು ಕೈಬಿಡಲು ನಮೂನೆ- 7ನ್ನು, ನಮೂದುಗಳ ತಿದ್ದುಪಡಿಗಾಗಿ ನಮೂನೆ- 8ನ್ನು ಹಾಗೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸ್ಥಳಾಂತರವಾಗಿದ್ದರೆ, ನಮೂನೆ-8ಎ ಅನ್ನು ಸೂಕ್ತ ರೀತಿಯಲ್ಲಿ ಭರ್ತಿ ಮಾಡಿ, ಸಮರ್ಥನೆಗಾಗಿ ಅವಶ್ಯಕ ದಾಖಲೆಗಳೊಂದಿಗೆ ನಿರ್ದಿಷ್ಟಾಧಿಕಾರಿಗಳಿಗೆ, ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ, ತಾಲೂಕು ಕಚೇರಿಗೆ, ಉಪ ವಿಭಾಗಾಧಿಕಾರಿ ಕಚೇರಿಗೆ ಮಾ. 16ರ ಒಳಗಾಗಿ ಸಲ್ಲಿಸಬಹುದಾಗಿದೆ. ಆನ್ಲೈನ್ ಮುಖೇನ ಡಿಡಿಠ:ಜ್ಛ್ಝ.ಟ್ಝ್ಛಿ.್ಝಟಿಣ್ಛ್ಝಡ್ಝಿಣಜಟಿಡಜ್ಠಢ್ಝ್ಛಜಡ, ಡಿಡಿಠ:್ಛಜ್ಟ್ಞಛ್ಠಟಿಛಡಿಛ್ಞಛ.್ಞಛ್ಠ.ಟ್ಝ್ಛಿ.್ಝಟಿ, ಡಿಡಿಠ:ಢ್ಟಡಿಜ್ಠ್ಠಜ್ಜ.್ಞಛ್ಠ.ಟ್ಝ್ಛಿ.್ಝಟಿ ಮೂಲಕವೂ ಸಹ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅಧಿಕಾರಿಗಳ ವಿವರ: ಜಿಲ್ಲೆಯ ಮತದಾರರ ನೋಂದಣಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ತಹಸೀಲ್ದಾರರ ಹೆಸರು, ಕಚೇರಿ ವಿಳಾಸ, ದೂರವಾಣಿ ಹಾಗೂ ಸಂಚಾರಿ ದೂರವಾಣಿ ಸಂಖ್ಯೆ ವಿವರಗಳು ಕೆಳಕಂಡಂತಿವೆ.
ಶ್ರವಣಬೆಳಗೊಳ, ಅರಸೀಕೆರೆ, ಹಾಸನ, ಹೊಳೆನರಸೀಪುರ ಕ್ಷೇತ್ರಗಳಲ್ಲಿ ಹಾಸನ ಉಪವಿಭಾಗಾಧಿಕಾರಿ ಬಿ. ಶರತ್ ಮತದಾರರ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೂರವಾಣಿ ಸಂಖ್ಯೆ 08172-268403. ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ ಆಯಾಯ ತಾಲ್ಲೂಕು ತಹಸೀಲ್ದಾರರು, ಚನ್ನರಾಯಪಟ್ಟಣದಲ್ಲಿ ಪಿ.ಜಿ. ನಟರಾಜ್, ಅರಸೀಕೆರೆಯಲ್ಲಿ ಕೇಶವಮೂರ್ತಿ, ಹಾಸನಕ್ಕೆ ಮಂಜುನಾಥ್, ಹೊಳೆನರಸೀಪುರಕ್ಕೆ ಆರ್.ಬಿ. ಶಿವಶಂಕರಪ್ಪ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಇದೇ ರೀತಿ ಬೇಲೂರು, ಅರಕಲಗೂಡು ಸಕಲೇಶಪುರ ಕ್ಷೇತ್ರಗಳಲ್ಲಿ ಸಕಲೇಶಪುರ ಉಪವಿಭಾಗಾಧಿಕಾರಿ ಮಧುಕೇಶ್ವರ್ ಅವರು ಮತದಾರರ ನೋಂದಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ದೂರವಾಣಿ ಸಂಖ್ಯೆ 080173-244003. ಬೇಲೂರು ತಹಸೀಲ್ದಾರರಾದ ರವಿಚಂದ್ರ, ಅರಕಲಗೂಡು ತಹಸೀಲ್ದಾರ್ ಕೆ.ಪಿ.ಈಶ್ವರಪ್ಪ, ಸಕಲೇಶಪುರ ತಹಸೀಲ್ದಾರ್ ಶ್ರೀಮತಿ ಪಾರ್ವತಿ ಮತ್ತು ರವಿಚಂದ್ರನಾಯಕ್ ಅವರು ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿ ನಿರ್ವಹಿಸುತ್ತಿದ್ದಾರೆ.
ಮತದಾರರ ಮಿತ್ರ: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಮತದಾರರ ಮಾಹಿತಿ ಕೇಂದ್ರವು ಚನ್ನರಾಯಪಟ್ಟಣದ ಮಿನಿ ವಿಧಾನಸೌಧದಲ್ಲಿದ್ದು ತಾಲ್ಲೂಕು ಶಿರಸ್ತೇದಾರ್ ಅನಂತ ಪದ್ಮನಾಭ ಉಡುಪ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ದೂರವಾಣಿ ಸಂಖ್ಯೆ 08176-252235 ಮತ್ತು ಮೊಬೈಲ್ 9886364047 ಆಗಿದೆ. ಅರಸೀಕೆರೆಯ ಮಿನಿ ವಿಧಾನಸೌಧದಲ್ಲಿ ಮತದಾರರ ಮಾಹಿತಿ ಕೇಂದ್ರವಿದ್ದು ಅಲ್ಲಿನ ಶಿರಸ್ತೇದಾರ್ ವಿ. ಪೆರುಮಾಳ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ದೂರವಾಣಿ ಸಂಖ್ಯೆ 08174-234879 ಮತ್ತು ಮೊಬೈಲ್ 9242470955 ಆಗಿದೆ.
ಬೇಲೂರಿನ ಮಿನಿ ವಿಧಾನಸೌಧದಲ್ಲಿ ಮತದಾರರ ಮಾಹಿತಿ ಕೇಂದ್ರವಿದ್ದು ಶಿರಸ್ತೇದಾರ್ ಶಿವಯ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೂರವಾಣಿ 08177-222234, ಮೊಬೈಲ್ 7259378911 ಆಗಿದೆ. ಹಾಸನದ ತಾಲ್ಲೂಕು ಕಚೇರಿಯಲ್ಲಿ ಮತದಾರರ ಮಾಹಿತಿ ಕೇಂದ್ರವಿದ್ದು, ಶಿರಸ್ತೇದಾರ್ ರಾಜು ಮಾಹಿತಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ದೂರವಾಣಿ ಸಂಖ್ಯೆ 08172-260395 ಮತ್ತು ಮೊಬೈಲ್ 9449809931 ಆಗಿದೆ.
ಹೊಳೆನರಸೀಪುರದ ಮಿನಿ ವಿದಾನಸೌಧದಲ್ಲಿ ಶಿರಸ್ತೇದಾರ್ ಮೋಹನ್ ಮಾಹಿತಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ದೂರವಾಣಿ ಸಂಖ್ಯೆ 08175-272111 ಮತ್ತು ಮೊಬೈಲ್ 9481626185 ಆಗಿದೆ.
ಅರಕಲಗೂಡು ಮಿನಿ ವಿಧಾನಸೌಧದಲ್ಲಿ ಶಿರಸ್ತೇದಾರ್ ಗಂಗರಾಜ್ ಮಾಹಿತಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ದೂರವಾಣಿ 08175-220246, ಮೊಬೈಲ್ 9445758979 ಆಗಿದೆ.
ಸಕಲೇಶಪುರ ತಾಲೂಕು ಕಚೇರಿಯ ಶಿರಸ್ತೇದಾರ್ ರಮೇಶ್ ಮಾಹಿತಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ದೂರವಾಣಿ 08173-244004, ದೂರವಾಣಿ 9448940879 ಹಾಗೂ ಆಲೂರು ತಾಲೂಕು ಕಚೇರಿಯ ಶಿರಸ್ತೇದಾರ್ ಒ. ರಮೇಶ್ ಸಾಹಿತಿ ಅಧಿಕಾರಿಯಾಗಿದ್ದು, ದೂರವಾಣಿ 08170-218222 ಮತ್ತು ಮೊಬೈಲ್ 8971346101 ಆಗಿದೆ.
ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಬಿ.ಎಲ್.ಒ.ಗಳು ಕಡ್ಡಾಯವಾಗಿ ಸಂಬಂಧಿಸಿದ ಮತಗಟ್ಟೆಗಳಲ್ಲಿ ಹಾಜರಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
- ವಿ. ಅನ್ಬುಕುಮಾರ್, ಜಿಲ್ಲಾಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

