'ಖಾತ್ರಿ' ಫಲಾನುಭವಿಗಳ ಸಹಿ ಎಲ್ಲಾ ಒಂದೇ ರೀತಿ!
ಬೇಲೂರು: ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಸಹಿ ಎಲ್ಲವೂ ಒಂದೇ ತರಹದ್ದಾಗಿದ್ದವು.
ಬೇಲೂರು ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಶನಿವಾರ ಲೋಕಾಯುಕ್ತ ಎಸ್ಪಿ ಡಾ. ವೇದಾಮೂರ್ತಿ ಅವರು ಕಡತಗಳ ಪರಿಶೀಲನೆ ನಡೆಸುತ್ತಿದ್ದಾಗ ಕಂಡು ಈ ಅಚ್ಚರಿ ಕಂಡು ಬಂತು.
ಇದನ್ನು ಕಂಡು ಅಸಮಾಧಾನಗೊಂಡ ಎಸ್ಪಿ, 2012ರಲ್ಲಿ ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 40 ಮಂದಿ ಫಲನುಭವಿಗಳಿಗೆ ಹಣ ನೀಡಲಾಗಿದ್ದು ಫಲನುಭವಿಗಳ ಸಹಿ ಒಂದೇ ರೀತಿಯಲ್ಲಿ ನಮೂದಾಗಿರುವುದು ಕಡತಗಳಲ್ಲಿ ಕಂಡು ಬಂದಿದೆ. ಒಟ್ಟು 37 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು ರು. 5 ಕೋಟಿ 34 ಲಕ್ಷ ಮೊತ್ತದ ಹಣ, ವಿವಿಧ ಯೋಜನೆಯಲ್ಲಿ ಬಳಕೆಯಾಗಿರುವ ಹಣದ ಬಗ್ಗೆ ಲೆಕ್ಕಪರಿಶೋಧಕರು ಅತೃಪ್ತಿ ವ್ಯಕ್ತಪಡಿಸಿದ್ದು, ಕೂಡಲೇ ಈ ಬಗ್ಗೆ ತಾ.ಪಂ.ಅಧಿಕಾರಿಗಳು ಸಮಜಾಯಿಸಿ ನೀಡದಿದ್ದಲ್ಲಿ ಅಧಿಕಾರಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಿದರು.
ಟೆಂಡರ್ ಇಲ್ಲದೇ ಖರೀದಿ: ಅಭಿವೃದ್ಧಿ ಯೋಜನೆಗಳಿಗೆ ರು. 3 ಕೋಟಿ ಸರ್ಕಾರ ನೀಡಿದ್ದು, ಇದನ್ನು ಬಳಕೆ ಮಾಡುವಲ್ಲಿ ವಿಫಲವಾಗಿದ್ದು ಸಂಪೂರ್ಣ ಹಣ ಸರ್ಕಾರಕ್ಕೆ ವಾಪಸ್ಸು ಹೋಗಿದೆ. ಪಂಚಾಯಿತಿಗಳಲ್ಲಿ ಕಂಪ್ಯೂಟರ್ ಖರೀದಿ ಮಾಡುವಾಗ ಟೆಂಡರ್ ಕರೆಯದೆ ಖರೀದಿ ಮಾಡಿರುವುದು ಕಂಡು ಬಂದಿದೆ ಎಂದರು. ತೋಟಗಾರಿಕೆ ಇಲಾಖೆ, ಪುರಸಭೆ ಹಾಗೂ ಮುರಾರ್ಜಿ ವಸತಿ ಶಾಲೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಂದ ವಿವಿಧ ರೀತಿಯ ದೂರುಗಳನ್ನು ಸ್ವೀಕರಿಸಿ ವಿಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ನಿರೀಕ್ಷಕ ನರಸಿಂಹಮೂರ್ತಿ, ಸಿಬ್ಬಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

