'ನಿವಾಸಿಗಳಿಗೆ ತೊಂದರೆಆಗದಂತೆ ಚತುಷ್ಪಥ ರಸ್ತೆ'
ಹಾಸನ: ಹಾಸನ-ಬಿ.ಸಿ. ರೋಡ್ರ್ಸ್ತೆಯನ್ನು ಚುತುಷ್ಪಥ ರಸ್ತೆ ಯನ್ನಾಗಿ ಪರಿವರ್ತಿಸುವ ಸಂದರ್ಭದಲ್ಲಿ ಪಾಳ್ಯ, ಬಾಳ್ಳುಪೇಟೆ, ಸಕಲೇಶ ಪುರ ಪಟ್ಟಣಗಳಿಗೆ ತೊಂದರೆಯಾಗ ದಂತೆ ಬೈಪಾಸ್ ನಿರ್ಮಾಣ ಮಾಡಲಾಗುವುದು ಎಂದು ಲೋಕೋಪ ಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಬಿ.ಬಿ. ಶಿವಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ, ಹಾಸನ-ಬಿ.ಸಿ. ರೋಡ್ ರಸ್ತೆಯನ್ನು ಚುತುಷ್ಪಥ ರಸ್ತೆಗೆ ಸರ್ವೆ ಪ್ರಕ್ರಿಯೆ ಮುಕ್ತಾಯ ಗೊಂಡಿದೆಯೇ, ಖಾಸಗಿ ಜಮೀನನ್ನು ಸದರಿ ರಸ್ತೆಗೆ ವಶಪಡಿಸಿಕೊಳ್ಳಲಾಗಿದೆಯೇ, ವಶಪಡಿಸಿಕೊಂಡಿರುವ ಜಮೀನಿಗೆ ನೀಡಿರುವ ಪರಿಹಾರದ ಮೊತ್ತ, ಬಾಕಿ ಉಳಿದಿರುವ ಪರಿಹಾರದ ಮೊತ್ತ, ಕಾಮಗಾರಿ ಆರಂಭದ ಕುರಿತಾಗಿ ಪ್ರಶ್ನೆ ಕೇಳಲಾಗಿತ್ತು.
ಇದಕ್ಕೆ ಉತ್ತರಿಸಿದ ಸಚಿವರು, ಹಾಸನ-ಬಿ. ಸಿ. ರೋಡ್ ರಸ್ತೆಯನ್ನು ಚುತುಷ್ಪಥ ರಸ್ತೆಯನ್ನಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ವೇ ಕೆಲಸಗಳು ಪೂರ್ಣಗೊಂಡಿದ್ದು, ಭೂ ಸ್ವಾಧೀನ ಕುರಿತು ಈಗಾಗಲೇ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ. ಈ ತಿಂಗಳ ಕೊನೆಯಲ್ಲಿ ಪ್ರಕಟಣೆ ಮಾಡಲಾಗುವುದು. ನೋಟಿಫಿಕೇಶನ್ ವಾರ್ತಾ ಪತ್ರಿಕೆಯಲ್ಲಿ ಹೊರಡಿಸಿದ ನಂತರ ಭೂಸ್ವಾಧೀನದ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಮತ್ತು ಪರಿಹಾರ ಹಣ ಬಟವಾಡೆ ಮಾಡಲಾಗುವುದು. ಸದ್ಯ ಯಾವುದೇ ಪರಿಹಾರ ಹಣ ವಿತರಿಸಿಲ್ಲ. ಶೇ. 80ರಷ್ಟು ಭೂಸ್ವಾಧೀನ ಮಾಡಿಕೊಂಡು, ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಒಪ್ಪಿಗೆ ದೊರಕಿದ ನಂತರ ಹೆದ್ದಾರಿ ನಿಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.
ಹಾಸನ-ಸಕಲೇಶಪುರ ಮಾರ್ಗದ ಮಧ್ಯೆ ಬರುವ ಗ್ರಾಮ ಗಳಾದ ಪಾಳ್ಯ, ಬಾಳ್ಳುಪೇಟೆ ಹಾಗೂ ಸಕಲೇಶಪುರ ಪಟ್ಟಣಗಳಿಗಾಗಿ ಬೈಪಾಸ್ಗಳನ್ನು ನಿರ್ಮಿಸಲು ಉದ್ದೇ ಶಿಸಲಾದೆ. ಈ ಬೈಪಾಸ್ಗಳ ಹೊರತಾಗಿ ಸದ್ಯ ಇರುವ ಅಲೈನ್ಮೆಂಟ್ನಲ್ಲಿ ತಿರುವುಗಳನ್ನು ಸುಧಾರಣೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ ಎಂದು ಬಿ.ಬಿ. ಶಿವಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

