ಶಾಸಕ ಮಂಜು ಹೇಳಿಕೆಗೆ ಜೆಡಿಎಸ್ ತಿರುಗೇಟು
ಅರಕಲಗೂಡು: ಮಾಜಿ ಪ್ರಧಾನಿ ದೇವೇಗೌಡ ಮತ್ತು ಶಾಸಕ ಹೆಚ್.ಡಿ. ರೇವಣ್ಣ ಅವರು ಶಿಷ್ಟಾಚಾರ ಉಲ್ಲಂಘಿಸಿ ತಮ್ಮ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಎ. ಮಂಜು ಮಾಡಿದ್ದ ಆರೋಪಕ್ಕೆ ಜೆಡಿಎಸ್ ತಿರುಗೇಟು ನೀಡಿದೆ.
ಶನಿವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಎ.ಆರ್. ಜನಾರ್ಧನ್ ಮತ್ತು ಇತರ ಪಕ್ಷದ ಮುಖಂಡರು ಶಾಸಕ ಎ. ಮಂಜು ಹೇಳಿಕೆಗಳು ಪ್ರಬುದ್ಧತೆಯಿಂದ ಕೂಡಿದ್ದಲ್ಲ ಎಂದು ಟೀಕಿಸಿದರು. ದೇವೇಗೌಡರಂತಹ ಹಿರಿಯ ವ್ಯಕ್ತಿತ್ವದ ಬಗ್ಗೆ ಮಂಜು ಅವರ ಪಕ್ಷದವರೇ ಆದ ಕಾಂಗ್ರೆಸ್ ಪಕ್ಷದ ಜಾಫರ್ ಶರೀಫ್ ಅವರು ಅವರ ವಿರುದ್ಧ ಅಭ್ಯರ್ಥಿಯನ್ನೇ ಹಾಕಬಾರದೆಂದು ಹೈಕಮಾಂಡ್ಗೆ ಪತ್ರ ಬರೆದು ತಮ್ಮ ದೊಡ್ಡತನ ಮೆರೆದಿದ್ದಾರೆ. ಆದರೆ ಕ್ಷೇತ್ರದ ಶಾಸಕ ಮಂಜು ವಿರುದ್ಧ ಮಾತನಾಡಿ, ತಮ್ಮ ಘನತೆಗೆ ಧಕ್ಕೆ ತಂದುಕೊಂಡಿದ್ದಾರೆ ಎಂದು ದೂರಿದರು.
ಅವರಿಂದಲೇ ಉಲ್ಲಂಘನೆ: ಶಾಸಕ ಮಂಜು ಅವರಿಂದಲೇ ಈವರೆಗೆ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂದ ಅವರು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರಿಗೇ ಗೊತ್ತಿಲ್ಲದೇ ಕಾರ್ಯಕ್ರಮಗಳನ್ನು ಮಾಡಿರುವ ಇವರು ತಾಲೂಕಿನ ಗ್ರಾ.ಪಂ. ನೂತನ ಕಟ್ಟಡವನ್ನು ಅಲ್ಲಿಯ ಸದಸ್ಯರಿಗೇ ತಿಳಿಸದೇ ಉದ್ಘಾಟನೆ ಮಾಡಿದ್ದಾರೆ. ನರೇಗಾ ಯೋಜನೆ ಉದ್ದೇಶ ತಿಳಿಯದ ಶಾಸಕರು ಹೆಣ್ಣೂರು ಕೊಂಗಳಲೆಯ ಕೆರೆಯ ಸಣ್ಣ ನೀರಾವರಿ ಕಾಮಗಾರಿಯ ಶಂಕುಸ್ಥಾಪನೆ ಮಾಡಿದ್ದಾರೆ ಎಂದರು.
ನೀತಿ ಸಂಹಿತೆ ಉಲ್ಲಂಘನೆ: ಚುನಾವಣೆ ಘೋಷಣೆಯ ನಂತರವೂ ಶಾಸಕ ಎ. ಮಂಜು, ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಇದಕ್ಕೆ ತಹಸೀಲ್ದಾರರೂ ಸಾಥ್ ನೀಡಿದ್ದು, ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸದಸ್ಯರಾದ ಪಾರ್ವತಮ್ಮ ನಂಜುಂಡಾಚಾರ್, ಭಾಗ್ಯಮ್ಮ, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ, ಸದಸ್ಯರಾದ ದೇವರಾಜೇಗೌಡ, ಎಂ.ಎಸ್. ಯೋಗೇಶ್, ಜೆಡಿಎಸ್ ಮುಖಂಡರುಗಳಾದ ತಿಮ್ಮೇಗೌಡ, ಕಿಶೋರ್, ಲೋಕೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

