ಹಾಸನ, ಸಕಲೇಶಪುರ ತಾಲೂಕಿನಲ್ಲಿ ಗುಡುಗು ಸಹಿತ ಮಳೆ
ಹಾಸನ: ಜಿಲ್ಲೆಯ ಹಲವೆಡೆ ಭಾನುವಾರ ಭಾರಿ ಗುಡುಗು ಸಹಿತ ಮಳೆಯಾಗಿದೆ. ಹಾಸನ, ಸಕಲೇಶಪುರ, ಬೇಲೂರು, ಆಲೂರು ತಾಲೂಕುಗಳಲ್ಲದೇ ಅನೇಕ ಕಡೆ ಮಳೆಯಾಗಿದೆ. ಸಂಜೆ 6.30 ರ ನಂತರ ಆಕಾಶದಲ್ಲಿ ದಟ್ಟನೆ ಮೋಡ ಮೇಳೈಸುತ್ತಿದ್ದಂತೆ ಮಿಂಚು, ಗುಡುಗುಗಳ ಆರ್ಭಟದ ನಡುವೆ ಸುರಿದ ಮಳೆ ಭೂಮಿಗೆ ತಂಪೆರೆಯಿತು.
ಸಕಲೇಶಪುರ ತಾ.ನಲ್ಲಿ ಗಂಟೆಗೂ ಹೆಚ್ಚು ಕಾಲ ಮಳೆ: ಸಕಲೇಶಪುರ ತಾಲೂಕಿನ ಅಲ್ಲಲ್ಲಿ ಭಾನುವಾರ ಗಂಟೆಗೂ ಹೆಚ್ಚು ಕಾಲ ಮುಂಗಾರು ಮಳೆ ಸುರಿದಿದೆ. ಇದರಿಂದ ಕಾಫಿ ಬೆಳೆಗಾರರ ಆತಂಕ ಕಡಿಮೆಯಾಗಿದೆ. ಕಾಫಿ ಕೊಯಿಲು ಮುಗಿದ ನಂತರ ಕಾಫಿ ಗಿಡಗಳು ಹೂವು ಮೂಡಲು ಮಳೆ ಅಗತ್ಯವಿದ್ದು, ಮಳೆ ವಿಳಂಬವಾದ ಕಾರಣ ತುಂತುರು ನೀರಾವರಿ ಮೊರೆ ಹೋಗಿದ್ದ ಕಾಫಿ ಬೆಳೆಗಾರರು ಕೋಟ್ಯಂತರ ಹಣವನ್ನು ತುಂತುರು ನೀರಾವರಿಗಾಗಿ ಖರ್ಚು ಮಾಡಿದ್ದರು. ಆದರೆ ಮಧ್ಯಮ ಹಾಗೂ ಸಣ್ಣ ಕಾಫಿ ಬೆಳೆಗಾರರಿಗೆ ನೀರಿನ ಸೌಲಭ್ಯವಿಲ್ಲದ ಕಾರಣ ಮಳೆಗಾಗಿ ಕಾದಿದ್ದು ಮಳೆಯ ಆಗಮನವಿಲ್ಲದೆ ಕಂಗಾಲಾಗಿದ್ದರು. ಹಾನುಬಾಳ್ ಹೋಬಳಿಯಲ್ಲಿ ಮಳೆಯಾಗಿದ್ದರೆ, ಭಾನುವಾರ ಮಳೆಯಾಗಿರುವುದರಿಂದಾಗಿ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.
ಸಿಡಿಲಿಗೆ ಹಸು ಬಲಿ: ಸಿಡಿಲು ಬಡಿದು ಹಸುವೊಂದು ಮೃತಪಟ್ಟ ಪಟ್ಟ ಘಟನೆ ಹೆತ್ತೂರು ಗ್ರಾಮ ಸಮೀಪದ ದಿಣ್ಣೇಕೆರೆ ಕಾಫಿ ಎಸ್ಟೇಟ್ನಲ್ಲಿ ಭಾನುವಾರ ನಡೆದಿದೆ. ಗ್ರಾಮದ ರವಿ ಎಂಬುವವರಿಗೆ ಸೇರಿದ ಸುಮಾರು 20 ಸಾವಿರ ಬೆಲೆಯ ಹಸುವನ್ನು ಮೇಯಲು ಕಟ್ಟಿದ್ದ ವೇಳೆ ಈ ಘಟನೆ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

