ಗ್ರಾಮ ಲೆಕ್ಕಿಗರ ವರ್ಗಾವಣೆ ವಿರೋಧಿಸಿ ಧರಣಿ
ಹೊಳೆನರಸೀಪುರ: ಪದೇ ಪದೇ ದೊಡ್ಡಕಾಡನೂರು ವೃತ್ತ ಗ್ರಾಮಲೆಕ್ಕಿಗರನ್ನು ವರ್ಗಾವಣೆ ಮಾಡುತ್ತಿರುವುದನ್ನು ವಿರೋದಿಸಿ ನೂರಕ್ಕು ಹೆಚ್ಚು ಗ್ರಾಮಸ್ಥರು ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿ ವರ್ಗಾವಣೆ ತಡೆ ಹಿಡಿಯುವಂತೆ ಆಗ್ರಹಿಸಿದರು.
ತಾಲೂಕಿನ ದೊಡ್ಡಕಾಡನೂರು ವೃತ್ತದ ಗ್ರಾಮಲೆಕ್ಕಿಗ ಪೃಥ್ವಿಕುಮಾರ್ ಅವರು ಕರ್ತವ್ಯಕ್ಕೆ ಬಂದು ಕೇವಲ ಒಂದೆರಡು ತಿಂಗಳು ಕಳೆದಿದ್ದು, ಈ ಅಲ್ಪಾವಧಿಯಲ್ಲೇ ಅವರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾಯಿಸಕೂಡದು ಎಂದು ಗ್ರಾಮಸ್ಥರು ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದರು. ಪೃಥ್ವಿ ಅವರನ್ನು ಅರಕಲಗೂಡು ಹೊನ್ನವಳ್ಳಿ ವೃತ್ತಕ್ಕೆ ವರ್ಗ ಮಾಡಲಾಗಿದೆ.
ಅಲ್ಪಾವಧಿಗೇ ವರ್ಗ: ಆದರೆ ಇಲ್ಲಿ ಪ್ರಮುಖ ಅಂಶವೆಂದರೆ ಈ ಹಿಂದೆ ದೊಡ್ಡಕಾಡನೂರು ವೃತ್ತಕ್ಕೆ ಬಂದಿರುವ ಬಹುತೇಕ ಗ್ರಾಮಲೆಕ್ಕಿಗರನ್ನು ಬಂದ ಕೆಲ ದಿನಗಳಲ್ಲೇ ವರ್ಗ ಮಾಡುತ್ತಿರುವುದೂ ಇಲ್ಲಿನ ಜನರ ಅಸಮಾಧಾನಕ್ಕೆ ಮತ್ತೊಂದು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಗ್ರಾಮದ ಜನ ಪೃಥ್ವಿಕುಮಾರ್ ಅವರ ವರ್ಗಾವಣೆ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸೋಮಶೇಖರ್, ಕೆ. ಕುಮಾರ್, ಗ್ರಾಪಂ ಸದಸ್ಯರಾದ ರಾಜಶೆಟ್ಟಿ, ವೆಂಕಟೇಶ್, ಜವರನಾಯಕ, ರಾಜೇಗೌಡ, ಶಾಲಾಭಿವೃದ್ಧಿ ಅಧ್ಯಕ್ಷ ಕೃಷ್ಣೇಗೌಡ, ಮಾಜಿ ಗ್ರಾಪಂ ಸದಸ್ಯ ರಾಮಕೃಷ್ಣೇಗೌಡ, ಈಶ್ವರ್, ಸಂತೋಶ್, ರೇವಣ್ಣ ಮತ್ತು ಮಲ್ಲೇಶ್ ಸೇರಿದಂತೆ ಬಹಳಷ್ಟು ಮಂದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

