ಹಾಸನ

ಅನೈತಿಕ ಸಂಬಂಧದಿಂದ ವ್ಯಾಪಾರಿ ಪರಮೇಶ್ ಹತ್ಯೆ

Published On :

ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿಯ ಚಿನ್ನದ ವ್ಯಾಪಾರಿ ಪರಮೇಶ್ ಶೂಟೌಟ್ ಪ್ರಕರಣವನ್ನು ಒಂದೇ ದಿನದಲ್ಲಿ ಪೊಲೀಸರುಬೇಧಿಸಿದ್ದು, ಈ ಸಂಬಂಧ 6 ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ವಲಯ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರರಾವ್ ತಿಳಿಸಿದರು. ಸೋಮವಾರ ರಾತ್ರಿ 7.15ರ ಸುಮಾರಿಗೆ ಬಸ್‌ನಿಲ್ದಾಣದ ಬಳಿ ಪರಮೇಶ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದು ಪರಾರಿಯಾಗಿದ್ದರು.
ಕೊಲೆ ಹಿಂದೆ ಅನೈತಿಕ ಸಂಬಂಧ: ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಚಂದ್ರರಾವ್, ನುಗ್ಗೇಹಳ್ಳಿಯ ಬಾಗೂರು ರಸ್ತೆಯಲ್ಲಿ ಕಾಳಿಕಾಂಬ ಜ್ಯುಯಲರ್ ಮಾಲೀಕ ಪರಮೇಶ್ ತಾನು ಇಟ್ಟುಕೊಂಡಿದ್ದ ಅನೈತಿಕ ಸಂಬಂಧವೇ ಕೊಲೆಗೆ ಕಾರಣವಾಗಿದೆ ಎಂದು ತಿಳಿಸಿದರು.
ಚಿನ್ನದ ಅಂಗಡಿ ಮಾಲೀಕ ಪರಮೇಶ್ ತನ್ನ ಅಂಗಡಿಯ ಎದುರಿನಲ್ಲಿದ್ದ ಟೈಲರ್ ಅಂಗಡಿಯ ಮಾಲಿಕ ನಟೇಶ್ ಪತ್ನಿ ಜತೆ ಇಟ್ಟುಕೊಂಡಿದ್ದ ಅನೈತಿಕ ಸಂಬಂಧ ಬಿಡಿಸಲಾಗದಷ್ಟು ಮಿತಿ ಮೀರಿದ್ದರಿಂದ ಸುಪಾರಿ ನೀಡಿ ಪರಮೇಶನನ್ನು ಶೂಟೌಟ್ ಮಾಡಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ತನ್ನ ಪತ್ನಿ ಜತೆ ಇಟ್ಟುಕೊಂಡಿದ್ದ ಅನೈತಿಕ ಸಂಬಂಧದ ಬಗ್ಗೆ ಚನ್ನರಾಯಪಟ್ಟಣದ ಜೆ.ಡಿ. ಟೈಲರ್ ಪ್ರಕಾಶ್ ಜೊತೆ ಚರ್ಚಿಸಿದ ಸಂದರ್ಭದಲ್ಲಿ ತನ್ನ ಮತ್ತೋರ್ವ ಸ್ನೇಹಿತನೊಂದಿಗೆ ಸಕಲೇಶಪುರದ ರೌಡಿಯೊಬ್ಬನನ್ನು ನಟೇಶ್‌ಗೆ ಪರಿಚಯ ಮಾಡಿಸಿದ್ದಾನೆ. ಆತ ಎರಡು ಲಕ್ಷಕ್ಕೆ ಡೀಲ್ ಮುಗಿಸಿ ಉತ್ತರ ಪ್ರದೇಶದಿಂದ ಸುಪಾರಿ ಕಿಲ್ಲರ್‌ಗಳನ್ನು ಕರೆಸಿ, ಪರಮೇಶ್‌ನನ್ನು ಶೂಟೌಟ್ ಮಾಡಿಸಿದ್ದಾನೆ ಎಂದು ಎಸ್ಪಿ ತಿಳಿಸಿದರು.
ಮುಂಗಡ: ಸಕಲೇಶಪುರದ ರೌಡಿಗೆ ಮುಂಗಡವಾಗಿ 90 ಸಾವಿರ ನೀಡಿದ  ನೇಟಶ್ ಮತ್ತು ಆತನ ಸ್ನೇಹಿತರು, ಪರಮೇಶನ ಚಲನವಲನಗಳನ್ನು ಕಳೆದ 10 ದಿನಗಳ ಹಿಂದೆ ಸುಫಾರಿ ಕಿಲ್ಲರ್‌ಗೆ ತೋರಿಸಿದ್ದರು.
ತಲೆ ತಪ್ಪಿಸಿಕೊಂಡ ಕೊಲೆಗಾರರು: ಸೋಮವಾರ ರಾತ್ರಿ 7ಗಂಟೆ ಸಮಯದಲ್ಲಿ ನುಗ್ಗೇಹಳ್ಳಿಯಲ್ಲಿ ವಿದ್ಯುತ್ ಕಡಿತಗೊಂಡ ತಕ್ಷಣ ಪರಮೇಶ್ ಅಂಗಡಿ ಬಾಗಿಲು ಹಾಕಿ, ಹಾಸನಕ್ಕೆ ವಾಪಸಾಗಲು ನುಗ್ಗೇಹಳ್ಳಿ ಬಸ್ ನಿಲ್ದಾಣದ ಬಳಿ ಬಂದ ಸಂದರ್ಭದಲ್ಲಿ ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ಸುಪಾರಿ ಕೊಲೆಗಾರರು ಪಿಸ್ತೂಲಿನಿಂದ ಎರಡು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿ ತಲೆ ತಪ್ಪಿಸಿಕೊಂಡಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ 6 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಕೊಲೆ ನಡೆದು 24 ಗಂಟೆಯೊಳಗೆ ಪ್ರಕರಣ ಬೇಧಿಸಿದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ತಂಡಕ್ಕೆ 10 ಸಾವಿರ ಬಹುಮಾನ ಘೋಷಣೆ ಮಾಡಿದರು.
ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿ ರಶ್ಮಿ, ಸರ್ಕಲ್ ಇನ್‌ಸ್ಪೆಕ್ಟರ್ ಶೈಲೇಂದ್ರ ಇದ್ದರು. ಇದಕ್ಕೂ ಮುನ್ನ ನುಗ್ಗೇಹಳ್ಳಿಯಲ್ಲಿ ಶೂಟೌಟ್ ಆದ ಸ್ಥಳಕ್ಕೆ ದಕ್ಷಿಣ ವಲಯ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.