ಹಾಸನ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

Published On :

ಹಾಸನ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ. 12ರಿಂದ ಮಾ. 27ರವರೆಗೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 17,766 ವಿದ್ಯಾರ್ಥಿಗಳು ಪರೀಕ್ಷೆ  ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು 37 ಪರೀಕ್ಷಾ ಕೇಂದ್ರಗಳಿದ್ದು ಕಲಾ ವಿಭಾಗಕ್ಕೆ 8269 ವಾಣಿಜ್ಯ ವಿಭಾಗಕ್ಕೆ 5132, ವಿಜ್ಞಾನ ವಿಭಾಗಕ್ಕೆ-4366, ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು 2210 ಮತ್ತು ಖಾಸಗಿ ಅಭ್ಯರ್ಥಿಗಳು 1126 ಹಾಜರಾಗುತ್ತಿದ್ದು ಇದೇ ಪ್ರಥಮ ಬಾರಿಗೆ 14,430 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಬಾಲಕರು 8126 ಹಾಗೂ ಬಾಲಕಿಯರು 9640 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎನ್. ರಾಜಮ್ಮ ತಿಳಿಸಿದ್ದಾರೆ.
2013-14 ನೇ ಸಾಲಿನ  ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವಂತಹ ವಿದ್ಯಾರ್ಥಿಗಳ ತಾಲ್ಲೂಕುವಾರು ವಿವರ ಇಂತಿದೆ.
ತಾಲೂಕು    ಪರೀಕ್ಷಾ    ಬಾಲಕರು    ಬಾಲಕಿಯರು    ಒಟ್ಟು    ಕೇಂದ್ರಗಳು
ಹಾಸನ    123    2668     3592    6260
ಆಲೂರು    2    300    380    680
ಸಕಲೇಶಪುರ    1    326    360    686
ಬೇಲೂರು    3    682    810    1492
ಹೊಳೆನರಸೀಪುರ    3    737    937    1674
ಅರಕಲಗೂಡು    4    737    772    1506
ಚನ್ನರಾಯಪಟ್ಟಣ    4    1062    1394     2456
ಅರಸೀಕೆರೆ    7    1617    1395    3012
ನಿಷೇಧಾಜ್ಞೆ ಜಾರಿ; ಜೆರಾಕ್ಸ್ ಅಂಗಡಿ ಬಂದ್
ಹಾಸನ: 2013-14 ನೇ ಸಾಲಿನ  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲಾಮಟ್ಟದಲ್ಲಿ ಒಂದು ಮತ್ತು ತಾಲೂಕು ಮಟ್ಟದಲ್ಲಿ 5 ಹಾಗೂ ಕೇಂದ್ರ ಕಚೇರಿಯ ವಿಭಾಗೀಯ ಮಟ್ಟದಿಂದ ಒಂದು ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಒಂದೊಂದು ಸ್ಥಾನಿಕ ಜಾಗೃತ ದಳಗಳು  ಕರ್ತವ್ಯ ನಿರ್ವಹಿಸುತ್ತಿವೆ. ಪರೀಕ್ಷೆಯು ಸುಗಮವಾಗಿ ನಡೆಯಲು ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶವನ್ನು ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆಯಾ ಉಪ ವಿಭಾಗಾಧಿಕಾರಿಗಳು ಜಾರಿಗೊಳಿಸಿದ್ದಾರೆ. ಪರೀಕ್ಷಾ ದಿನಗಳಂದು ಸದರಿ ನಿಷೇಧಿತ ವಲಯದಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದೆ. ಸಂಬಂಧಿಸದ ವ್ಯಕ್ತಿಗಳು ಅನಧಿಕೃತ ಪ್ರವೇಶ ಮಾಡದಂತೆ ನಿಷೇಧಿಸಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ  ಎನ್. ರಾಜಮ್ಮ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.