ಚುನಾವಣೆ ಬಳಿಕ ಎಲ್ಲಾ ಭಾಗ್ಯ ಬಿದ್ದುಹೋಗಲಿವೆ
ಬೇಲೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗುತ್ತಾ ಬಂದರೂ ಜನರಿಗೆ ಕುಡಿಯುವ ನೀರು ಕೊಡುವುದಕ್ಕೂ ಸಾಧ್ಯವಾಗಿಲ್ಲ. ಚುನಾವಣೆ ನಂತರ ಘೋಷಿಸಿರುವ ಎಲ್ಲಾ ರೀತಿಯ 'ಭಾಗ್ಯ'ಮಯ ಕಾರ್ಯಕ್ರಮಗಳು ಬಿದ್ದು ಹೋಗಲಿವೆ ಎಂದು ಮಾಜಿ ಸಚಿವ ಹಾಲಿ ಶಾಸಕ ಎಚ್.ಡಿ. ರೇವಣ್ಣ ಭವಿಷ್ಯ ನುಡಿದಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೇಲೂರಿನ ಒಕ್ಕಲಿಗರ ಸಮೂದಾಯ ಭವನದಲ್ಲಿ ಏರ್ಪಡಿಸಿದ್ದ ಜೆಡಿಎಸ್ ತಾಲ್ಲೂಕು ಕಾರ್ಯಕರ್ತರ ಸಮಾವೇಶ ಮತ್ತು ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಷಾದ: ಮಾಜಿ ಪ್ರಧಾನಿ ದೇವೇಗೌಡರು 10 ತಿಂಗಳು ದೇಶದ ಪ್ರಧಾನಿಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿ, ಯಾವುದೇ ಹಗರಣದ ಕಳಂಕವಿಲ್ಲದೆ ಅಧಿಕಾರದಿಂದ ಇಳಿದವರು. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳ ಹಗರಣಗಳಲ್ಲಿ ಭಾಗಿಯಾಗಿರುವ ನಿದರ್ಶನಗಳನ್ನು ಕಾಣಬಹುದಾಗಿದೆ ಎಂದು ವಿಷಾದಿಸಿದರು.
ಬೂತ್ ಮಟ್ಟದಿಂದ ಸಂಘಟನೆ: ದೇವೇಗೌಡರು ಸಾಕಷ್ಟು ಕುಡಿಯುವ ನೀರಿನ ಯೋಜನೆಗಳನ್ನು ತಂದವರು, ಜಿಲ್ಲೆಯ 7 ತಾಲ್ಲೂಕುಗಳಿಗೂ ಉತ್ತಮವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ, ಮತ್ತು ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಕುಡಿಯುವ ನೀರಿಗೆ ಹಣವನ್ನು ನೀಡಿದ್ದಾರೆ ಮತ್ತು ದೇಶದಲ್ಲಿ ತೃತೀಯ ರಂಗಕ್ಕೆ ಹೆಚ್ಚು ಅವಕಾಶಗಳಿದ್ದು ನಾಯಕತ್ವವನ್ನು ಸಹ ಹೊಂದಿದ್ದಾರೆ. ಆದ್ದರಿಂದ, ಪಕ್ಷದ ಕಾರ್ಯಕರ್ತರು ಬೂತ್ಮಟ್ಟದಿಂದಲೇ ಪಕ್ಷ ಸಂಘಟಿಸುವ ಕೆಲಸ ಮಾಡಬೇಕಾಗಿದೆ ಎಂದರು.
ವಿಶ್ವಾಸ: ಬೇಲೂರು ಕ್ಷೇತ್ರದ ಮತದಾರರು ದೇವೆಗೌಡರಿಗೆ ಸಾಕಷ್ಟು ಬಾರಿ ಉತ್ತಮ ಬೆಂಬಲ ನೀಡಿ ಹೆಚ್ಚು ಮತಗಳನ್ನು ನೀಡುವ ಮೂಲಕ ಆಶೀರ್ವದಿಸಿದ್ದಾರೆ, ಮುಂದೆಯೂ ಬೇಲೂರು ಕ್ಷೇತ್ರದ ಜನತೆ ಹೆಚ್ಚಿನ ಅಂತರದಿಂದ ಸಂಸತಿಗೆ ಕಳುಹಿಸಲಿದ್ದಾರೆ ಎಂಬ ವಿಶ್ವಾಸವನ್ನು ರೇವಣ್ಣ ವ್ಯಕ್ತಪಡಿಸಿದರು.
ಗೌಡರ ಅನುಪಸ್ಥಿತಿಯಲ್ಲಿ ಸಂಘಟನೆ: ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕರೀಗೌಡ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತೃತಿಯ ರಂಗದ ಅಧ್ಯಕ್ಷರಾಗಿದ್ದು, ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಬೇಕಗಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಶಾಸಕ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಾಜಶೇಖರ್, ಮಾಜಿ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್, ಜಿಲ್ಲಾ ಪಂಚಾಯ್ತಿ ಸದಸ್ಯೆಯರಾದ ಹೇಮಾವತಿ ಮಂಜುನಾಥ್, ಜಿ.ಟಿ. ಇಂದಿರಾ, ಮುಖಂಡರಾದ ತಜುಮುಲ್ ಪಾಷಾ, ಮರಿಯಪ್ಪ ಹಾಗೂ ಇನ್ನಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಡಿ. ಚಂದ್ರೇಗೌಡ, ಮಾಜಿ ಜಿಪಂ ಸದಸ್ಯ ಸಿ.ಎಸ್. ಪ್ರಕಾಶ್, ಜೆಡಿಎಸ್ ತೂಲೂಕು ಅಧ್ಯಕ್ಷ ಅನಂತ ಸುಬ್ಬರಾಯ, ಮಾಜಿ ತಾಪಂ ಅಧ್ಯಕ್ಷ ಎಂ.ಎ. ನಾಗರಾಜು, ರಾಜ್ಯ ಸಮಿತಿಯ ಆರ್.ಎಸ್. ಪ್ರಸನ್ನ ಕುಮಾರ್, ತಾಪಂ ಮಾಜಿ ಅಧ್ಯಕ್ಷೆ ಕಮಲಚನ್ನಪ್ಪ, ಮುಖಂಡರಾದ ನಟರಾಜ್, ವಿಷ್ಣುಕುಮಾರ್, ಗಂಗೇಶ್, ಹೊಸಳ್ಳಿ ರಾಜು ಹಾಗೂ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

