'ಮಹಿಳಾ ಹಕ್ಕು ಶಾಸನದಿಂದಲ್ಲ, ಮನಸ್ಸಿನಿಂದ ನೀಡಿ'
ಸಕಲೇಶಪುರ: ಶಾಸನದ ಮೂಲಕ ನೀಡಲಾಗುತ್ತಿರುವ ಮಹಿಳೆಯರ ಹಕ್ಕನ್ನು, ಪುರುಷ ಪ್ರಧಾನ ಸಮಾಜ ಪ್ರಾಮಾಣಿಕ ಮನಸ್ಸಿನಿಂದ ನೀಡಿದಾಗ ಮಾತ್ರ ವಕೀಲೆ ಹಾಗೂ ಮಹಿಳಾ ಮಾರ್ಗದರ್ಶಿ ಅಸೋಸಿಯೇಟ್ ಅಧ್ಯಕ್ಷ ಕಲ್ಪನಾಕೀರ್ತಿ ಹೇಳಿದರು.
ಪಟ್ಟಣದ ಕುಶಾಲನಗರ ಬಡಾವಣೆಯ ಮಿನಿ ಸಮುದಾಯ ಭವನದಲ್ಲಿ ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಟ್ಸ್ ವತಿಯಿಂದ ಸೋಮವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯು ಹಕ್ಕಿಗಾಗಿ ಹೋರಾಟ ನಡೆಸುವ ಮೂದಲೇ ಅವಳ ಹಕ್ಕನ್ನು ನೀಡುವ ಮೂಲಕ ಪುರುಷರು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
77ರಿಂದ ಎಲ್ಲೆಡೆ ದಿನಾಚರಣೆ: 1975ರ ಸಮಯದಲ್ಲಿ, ಮಾ. 8ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದವು. ಎರಡು ವರ್ಷದ ನಂತರ, 1977ರಲ್ಲಿ ದಿ. ಜನರಲ್ ಅಸ್ಸೆಂಬ್ಲಿ ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನು ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು.
ಮೊದಲು ಅಮೆರಿಕದಲ್ಲಿ: ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ ಅಂತಾರಾಷ್ಟ್ರೀಯ ಮಹಿಳೆಯರ ದಿನ 1909ರಲ್ಲಿ ಫೆ. 28ರಂದು ಆಚರಿಸಲಾಯಿತು. 1910ರಲ್ಲಿ ಅಂತಾರಾಷ್ಟ್ರೀಯ ಸಮಾಜವಾದಿ ನಾಯಕರು ಕೊಪನ್ಹೇಗ್ನಲ್ಲಿ ನಡೆದ ಚರ್ಚೆಯಲ್ಲಿ ಇದನ್ನು ಅಧಿಕೃತಗೊಳಿಸಿದರು. ಈ ಪ್ರಸ್ತಾಪವನ್ನು ಅವಿರೋಧವಾಗಿ 100 ಮಹಿಳೆಯರು 17 ದೇಶಗಳಿಂದ ಸಹಕರಿಸಿದರು.
ಕೊಪನ್ಹೇಗ್ನಲ್ಲಿ ಮೊದಲ ಹೆಜ್ಜೆಯ ಫಲಿತಾಂಶವಾಗಿ, ಅಂತಾರಾಷ್ಟ್ರೀಯ ಮಹಿಳೆಯರ ದಿನವನ್ನು ಮೊದಲ ಬಾರಿಗೆ 1911ರ ಮಾ. 19ರಂದು ಆಸ್ಟ್ರೇಲಿಯ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಡ್ಜರ್ಲೆಂಡ್ ದೇಶಗಳು ಗುರುತಿಸಿದವು. ಅಂದು ಒಂದು ಮಿಲಿಯನ್ಗಿಂತಲೂ ಹೆಚ್ಚು ಮಹಿಳೆಯರು ಹಾಗೂ ಪುರುಷರು ಈ ಚಳವಳಿಯಲ್ಲಿ ಭಾಗವಹಿಸಿದರು ಎಂದು ಅವರು ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ವಿವರಿಸಿದರು.
ತಮ್ಮ ಇಲಾಖೆಯಿಂದ ಮಹಿಳಾ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದ ಅವರು, ಯಾವುದೇ ಯೋಜನೆಗಳಿಗೆ ಅರ್ಹರಾಗಬೇಕಾದರೆ ನೋಂದಣಿ ಮಾಡಿಸಿ ಸ್ಮಾರ್ಕಾರ್ಡ್ ಪಡೆಯುವುದು ಕಡ್ಡಾಯ ಎಂದರು.
ಈ ಸಂದರ್ಭದಲ್ಲಿ ಮಹಿಳಾ ವಿದ್ಯಾರ್ಥಿ ನಿಲಯುದ ಮೇಲ್ವಿಚಾರಕಿ ಮಾದೇವಿ, ಶಿಕ್ಷಕಿ ಚಂದ್ರಮತಿ, ದಲಿತ ಮುಖಂಡ ಲಕ್ಷ್ಮಣ ಕೀರ್ತಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

