ಪೊಲೀಸ್ ಬಲೆಗೆ ಬಿದ್ದ ಶೂಟರ್ಗಳು!
ಹಾಸನ: ಜಿಲ್ಲೆಯ ಜನರನ್ನು ತಲ್ಲಣಗೊಳಿಸಿದ್ದ ಚನ್ನಪಟ್ಟಣ ತಾಲೂಕು ನುಗ್ಗೇಹಳ್ಳಿಯಲ್ಲಿ ಚಿನ್ನದಂಗಡಿ ಮಾಲೀಕನನ್ನು ಕೊಂದ ಸುಪಾರಿ ಕಿಲ್ಲರ್ಗಳನ್ನು ಪೊಲೀಸರು 30 ನಿಮಿಷಗಳಲ್ಲಿ ಬಂಧಿಸಿ, ಕೊಲೆ ಬಳಸಿದ್ದ ನಾಡ ಬಂದೂಕು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಪಾರಿ ನೀಡಿದ ನುಗ್ಗೇಹಳ್ಳಿಯ ಬಾಂಬೆ ಟೈಲರ್ ಅಂಗಡಿ ಮಾಲೀಕ ನಟೇಶ್ (38) ಮತ್ತು ಸುಪಾರಿಗೆ ನೀಡಲು ಮಧ್ಯವರ್ತಿಯಾಗಿದ್ದ ಚನ್ನರಾಯಪಟ್ಟಣ ಟೌನ್ನ ಟೈಲರ್ ಅಂಗಡಿಯ ಪ್ರಕಾಶ್ (36), ಸುಪಾರಿ ಕಿಲ್ಲರ್ಗಳನ್ನು ಕರೆ ತಂದಿದ್ದ ಸಕಲೇಶಪುರ ತಾಲೂಕು ಕಡುಗರಹಳ್ಳಿಯ ಆಟೋ ಚಾಲಕ ನಾಗೇಶ್ (34), ಚನ್ನರಾಯಪಟ್ಟಣ ತಾಲೂಕು ಡಿ. ಕಾಳೇನಹಳ್ಳಿಯ ಆಟೋ ಚಾಲಕ ನಾಗೇಶ್ (52) ಮತ್ತು ಸುಪಾರಿ ಕಿಲ್ಲರ್ಗಳಾದ ಉತ್ತರ ಪ್ರದೇಶದ ಅಲಿಗರ್ ಜಿಲ್ಲೆಯ ಇಗಲಾನ್ ಗ್ರಾಮದ ಹೇಮಂತ್ ಠಕುರೇಲ (18), ಅದೇ ಗ್ರಾಮದವರಾದ ಕುಲದೀಪ್ ಸಿಂಗ್ (28), ಲಾರಿ ಚಾಲಕನಾಗಿರುವ ಸುನೀಲ್ ಅಲಿಯಾಸ್ ರಾಜವೀರ ಸಿಂಗ್ ಬಂಧಿತರು.
ಪಿಸ್ತೂಲ್ ವಶ: ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ಗಳು, 2 ನಾಡ ಪಿಸ್ತೂಲ್ಗಳು, 1 ತೋಟಾ ಪಿಸ್ತೂಲ್, 5 ಸಜೀವ ಗುಂಡುಗಳು, 23 ಸಜೀವ ತೋಟಾ ಮದ್ದು ಗುಂಡುಗಳು, ಸುಪಾರಿ ನೀಡಿದ್ದ ರು. 35 ಸಾವಿರಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಂಡ: ಈ ಪ್ರಕರಣವನ್ನು ಪತ್ತೆ ಹಚ್ಚಲು ದಕ್ಷಿಣ ವಲಯ ಐಜಿಪಿ ಡಾ. ಕೆ. ರಾಮಚಂದ್ರರಾವ್ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಹಾಗೂ 4 ಸಿಬ್ಬಂದಿಗಳನ್ನು ಒಳಗೊಂಡ 5 ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳನ್ನು ತ್ವರಿತವಾಗಿ ಬಂಧಿಸುವಲ್ಲಿ ಯಶಸ್ಸಿಯಾದ ಚನ್ನರಾಯಪಟ್ಣಣ ಪೊಲೀಸ್ ಇನ್ಸ್ಪೆಕ್ಟರ್ ಶೈಲೇಂದ್ರ, ಜಿಲ್ಲಾ ಅಪರಾಧ ತನಿಖಾ ದಳದ ಇನ್ಸ್ಪೆಕ್ಟರ್ ಶಶಿಧರ್, ಅರಸೀಕೆರೆ ಇನ್ಸ್ಪೆಕ್ಟರ್ ಆರ್. ವಿ. ಗಂಗಾಧರಪ್ಪ, ಹಾಸನ ಗ್ರಾಮಾಂತರ ಠಾಣೆಯ ವೀರೇಂದ್ರ ಪಾಟೀಲ್, ಸಕಲೇಶಪುರ ಠಾಣೆಯ ಗುರುರಾಜ್, ಚನ್ನರಾಯಪಟ್ಟಣ ಟೌನ್ನ ಎಂ.ಎಸ್. ರಾಜು, ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯ ಪಿ. ಸುರೇಶ್, ನುಗ್ಗೇಹಳ್ಳಿ ಠಾಣೆಯ ಪಿಎಸ್ಸೈ ಜಗದೀಶ್, ಪೆನ್ಷನ್ ಮೊಹಲ್ಲಾ ಪಿಎಸ್ಸೈ ಮೋಹನ್ ಕುಮಾರ್, ಶ್ರವಣಬೆಳಗೊಳ ಠಾಣೆಯ ಪಿಎಸ್ಸೈ ರವಿಕುಮಾರ್, ನುಗ್ಗೇಹಳ್ಳಿಯ ಎಎಸ್ಸೈ ಪುಟ್ಟರಾಜಯ್ಯ, ಚನ್ನರಾಯಪಟ್ಟಣ ಠಾಣೆಯ ಮುಖ್ಯ ಕಾನ್ಸ್ಟೇಬಲ್ಗಳಾದ ಜವರೇಗೌಡ, ದೇವರಾಜು, ಶಿವಪ್ಪ, ಕಾನ್ಸ್ಟೇಬಲ್ಗಳಾದ ಜಮೀರ್ ಅಹಮದ್, ಪುನೀತ್, ನವೀನ್ ಕುಮಾರ್, ರವಿಕುಮಾರ್, ಅರುಣಣ್ಕುಮಾರ್, ನಾಗರಾಜ್, ರವಿ, ತೋಪೇಗೌಡ, ಶಾಂತರಾಜು, ಸತೀಶ್, ಶಾಂತರಾಜು, ಶಂಕರೇಗೌಡ, ಬಸವರಾಜು, ಶ್ರೀರಂಗ, ಚನ್ನಕೇಶವ, ಉಮಾಶಂಕರ್ ಅವರಿಗೆ ನಗದು ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಭೀಮನಕ್ಕನವರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

