ಬೇಲೂರು ಪುರಸಭಾಧ್ಯಕ್ಷ ಗಿರೀಶ್
ಬೇಲೂರು: ಬುಧವಾರ ನಡೆದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧವಾಗಿ ಜೆಡಿಎಸ್ನ ಬಿ. ಗಿರೀಶ್ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಸಲ್ಮಾ ಅಖ್ತಾರ್ ಅಯ್ಕೆಗೊಂಡಿದ್ದಾರೆ.
ಕಳೆದ ಒಂದು ವರ್ಷದಲ್ಲಿ ನಡೆದ ಪುರಸಭೆ ಚುನಾವಣೆಯ ಬೇಲೂರು ಪುರಸಭೆ 23 ವಾರ್ಡ್ಗಳಿಂದ 23 ಪುರಸಭಾ ಸದಸ್ಯರು ಅಯ್ಕೆಗೊಂಡಿದ್ದು, ಜೆಡಿಎಸ್ನಿಂದ 12, ಕಾಂಗ್ರೆಸ್ನಿಂದ 9, ಸ್ವತಂತ್ರ ಅಭ್ಯರ್ಥಿಗಳಾಗಿದ್ದ 2 ಮಂದಿ ಆಯ್ಕೆಗೊಂಡಿದ್ದರು. ಆದರೆ ಹಲವು ತಾಂತ್ರಿಕ ಕಾರಣಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಅಡ್ಡಿಯಾದ ದಿಸೆಯಲ್ಲಿ ಇಂದು ಅಧಿಕೃತವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಯ್ಕೆ ಮಾಡಲಾಯಿತು.
ನೂತನವಾಗಿ ಅಯ್ಕೆಯಾದ ಅಧ್ಯಕ್ಷ ಬಿ. ಗಿರೀಶ್ ಮಾತನಾಡಿ, ನಾವು ಕಳೆದ ಒಂದು ವರ್ಷದ ಹಿಂದೆ ಪುರಸಭೆಗೆ ಅಯ್ಕೆಯಾಗಿದ್ದು, ಅದರೆ ನಮಗೆ ಅಧಿಕಾರ ಇರಲಿಲ್ಲ, ಕಾಂಗ್ರೆಸ್ ಪಕ್ಷದ ಕುತಂತ್ರದಿಂದ ನಮಗೆ ಅಧಿಕಾರ ಇಲ್ಲವಾಗಿತ್ತು. ಹೈಕೋರ್ಟ್ ಆದೇಶದ ಮೇರೆಗೆ ಇಂದು ಚುನಾವಣೆ ನಡೆದಿದೆ ಎಂದ ಅವರು, ಬೇಲೂರು ಪುರಸಭೆ ವಿಶ್ವ ಪ್ರಸಿದ್ಧಿ ತಾಣವಾಗಿದ್ದು, ಹಲವು ಹತ್ತು ಮೂಲಸೌಲಭ್ಯಗಳು ಇಲ್ಲದೇ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ದಿಸೆಯಲ್ಲಿ ಸರ್ವ ಸದಸ್ಯರ ಅಭಿಪ್ರಾಯದಿಂದ ಪುರಸಭೆಯ ಸಮಗ್ರ ಅಭಿವೃದ್ಧಿ ಮಾಡಲಾಗುತ್ತದೆ. ಜನಪರ ಮತ್ತು ಸಮಾಜಮುಖಿ ಕೆಲಸಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷೆ ಸಲ್ಮಾ ಅಖ್ತಾರ್, ಜೆಡಿಎಸ್ ಮುಖಂಡರಾದ ಬಿ.ಡಿ. ಚಂದ್ರೇಗೌಡ, ಎಂ.ಎ. ನಾಗರಾಜು, ವಿಷ್ಣುಕುಮಾರ್, ಸಿ.ಎಸ್.ಪ್ರಕಾಶ್, ಹೇಮಾವತಿ ಮಂಜುನಾಥ್, ಹೆಬ್ಬಾಳು ಭುವನೇಶ್ ಇನ್ನೂ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

