ಲೋಕ ಕಲ್ಯಾಣಾರ್ಥಮಹಾರುದ್ರ ಹೋಮ
ಅರಸೀಕೆರೆ: ಪಟ್ಟಣದ ಹೊರವಲಯದ ಶ್ರೀಮಾರುತಿ ಸಚ್ಚಿದಾನಂದ ಸೇವಾಶ್ರಮದಲ್ಲಿ ಲೋಕಕಲ್ಯಾಣಾರ್ಥವಾಗಿ ಸೇವಾಶ್ರಮದ ಸಂಸ್ಥಾಪಕ ಶ್ರೀ ಸತೀಶ್ ಶರ್ಮಾ ಗುರೂಜಿ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಹಾರುದ್ರ ಹೋಮಕ್ಕೆ ನೂರಾರು ಪ್ರಧಾನ ಋದ್ವಿಕರ ರುದ್ರಹೋಮದ ಪಾರಾಯಣದ ವೇದ ಮಂತ್ರಘೊಷಗಳೊಡನೆ ಪೂರ್ಣಾಹುತಿ ಸಮರ್ಪಿಸುವುದರೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮುಕ್ತಾಯಗೊಂಡಿತು.
ಧಾರ್ಮಿಕ ಪೂಜಾ ಕೈಂಕರ್ಯ: ಪ್ರಕೃತಿ ವಿಕೋಪದಿಂದಾಗಿ ಬರಗಾಲ ಪೀಡಿತವಾಗಿರುವ ಈ ಭಾಗದಲ್ಲಿ ಲೋಕ ಕಲ್ಯಾಣಾರ್ಥಕ್ಕಾಗಿ ಮತ್ತು ಸುವೃಷ್ಟಿ, ಸಸ್ಯ ಸಮೃದ್ಧಿ, ಮಾನವರಲ್ಲಿ ಸಧರ್ಮಾಚರಣೆ ಮತ್ತು ಮನಃ ಶಾಂತಿ, ಸಕಲ ರೋಗ ನಿರ್ಮೂಲನೆಗಾಗಿ ಸಂಕಲ್ಪಿಸಿ, ಕಳೆದ 7 ದಿನಗಳಿಂದ ಶ್ರೀ ಮಹಾರುದ್ರ ಹೋಮ, ಶ್ರೀ ಲಕ್ಷ್ಮೀನರಸಿಂಹ ಮೂಲ ಮಂತ್ರ ಹೋಮ, ಮಹಾನ್ಯಾಸ ಪೂರ್ವಕ ಶ್ರೀರುದ್ರ ಪುನಶ್ಚರಣೆ, ಸಹಸ್ರ ಮೋದಕ ಗಣಪತಿ ಹೋಮ, ದತ್ತಾತ್ರೇಯ ಮೂಲ ಮಂತ್ರ ಹೋಮ, ನವಗ್ರಹ ಪುರಸ್ಸರ ಶನೀಶ್ವರ, ಆಂಜನೇಯ ಮೂಲ ಮಂತ್ರ ಹೋಮ, ಮನ್ಯುಸೂಕ್ತ ಹೋಮ ನೆರವೇರಿದವು. ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಮಾರಂಭದ ನೇತೃತ್ವವನ್ನು ಆಗಮಿಕರಾದ ಮುರುಳೀಧರ ಶ್ರೀವತ್ಸ ಶರ್ಮ, ಸೋಮಸುಂದರ ಭಟ್ಟ ವಹಿಸಿದ್ದರು, ಸೇವಾಶ್ರಮದ ಆಡಳಿತಾಧಿಕಾರಿ ಬಿ.ಎಸ್. ಸೇತುರಾಂ, ಎ.ಕೆ. ವಿದ್ಯಾಶಂಕರ ಭಟ್ಟ ಸಂಚಾಲಕರಾದ ಮುರುಳೀ ಮಂದಾರ್ತಿ ಕಾರ್ಯಕ್ರಮ ಆಯೋಜಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

