ಹಾಸನ

'ಸಮಾಜಮುಖಿಯಾಗಿ ಬದುಕಿದಾಗ ಜನ್ಮ ಸಾರ್ಥಕ'

Published On :

ಬೇಲೂರು: ಸಮಾಜಮುಖಿಯಾಗಿ ಸಾರ್ಥಕ ಬದುಕು ನಡೆಸಿದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದು ಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಸಿ. ಪ್ರಭು ಅಭಿಪ್ರಾಯಪಟ್ಟರು.
ಪಟ್ಟಣದ ಯಗಚಿ ಅಣೆಕಟ್ಟು ಕಚೇರಿಯಲ್ಲಿ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ನಂತರದಲ್ಲಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ನಾವು ಅಧಿಕ ಸಂಪತ್ತು ಕ್ರೋಢೀಕರಿಸಿದರೂ, ಕೊನೆಗೆ ಅದನ್ನು ಬಿಟ್ಟು ಹೋಗಬೇಕು. ಈ ನಡುವೆ ಜನಪರ ಮತ್ತು ಸಮಾಜಮುಖಿಯಾಗಿ ಅರ್ಥಪೂರ್ಣ ಜೀವನ ನಡೆಸಿದಾಗ ಮಾತ್ರ ಮನುಷ್ಯನ ಜನ್ಮಕ್ಕೆ ಬೆಲೆ ಬರುತ್ತದೆ ಎಂದರು.
ಬೇಲೂರು ಲಯನ್ಸ್ ಸಂಸ್ಥೆ ಸರ್ವ ಸದಸ್ಯರು ಜನಪರ ಕಾಳಜಿಯಿಂದ ಕೂಡಿದ್ದು, ಉತ್ತಮ  ಕೆಲಸಗಳಿಗೆ ಸಾಕ್ಷಿಯಾಗಿದ್ದಾರೆ ಎಂದು ಅವರು ಲಯನ್ಸ್ ಸಂಸ್ಥೆಯನ್ನು ಕೊಂಡಾಡಿದರು.
ಅವಕಾಶ ಉಪಯೋಗಿಸಿಕೊಳ್ಳಬೇಕು: ಮಾ. 15ರಂದು ಲಯನ್ಸ್ ಸಂಸ್ಥೆ ಕಾಲು ಕಳೆದುಕೊಂಡ ಅಂಗವಿಕರಲರಿಗೆ ಕೃತಕ ಕಾಲು ಜೋಡಣೆ ಕಾರ್ಯವನ್ನು ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಬೇಲೂರು ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಪಿ. ಪೂವಯ್ಯ ಮಾತನಾಡಿ, ಲಯನ್ಸ್ ಸಂಸ್ಥೆಯಿಂದ ಸಾವಯವ ಕೃಷಿ ಬಗ್ಗೆ ಹೆಚ್ಚಿನ ಅರಿವು ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪರಾಜ್ಯಪಾಲ ಮಂಜುನಾಥಮೂರ್ತಿ, ಎ.ಜಿ.ಶೆಟ್ಟಿ, ಶಾಂತವೇರಿ ಪ್ರಭು, ಎನ್. ಆರ್. ಗಿರೀಶ್, ಕಾರ್ಯದರ್ಶಿ ರಮೇಶ್ ಕುಮಾರ್, ಖಜಾಂಚಿ ಸುರೇಶ್, ಡಾ. ಸಂತೋಷ್, ಡಾ. ಚಂದ್ರಮೌಳಿ, ಅಶೋಕ್ ಕುಮಾರ್, ವಕೀಲ ರಾಜಶೇಖರ್, ತೌಫೀಕ್ ಅಹಮದ್, ಸುಭಾನ್, ವಸಂತಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಬಿ.ಎಸ್.ಆನಂದ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.