ಅರಕಲಗೂಡು ಪಪಂ ಕಾಂಗ್ರೆಸ್ ತೆಕ್ಕೆಗೆ
ಅರಕಲಗೂಡು: ಇಲ್ಲಿನ ಪಟ್ಟಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆಯಿತು. ತಹಸೀಲ್ದಾರ್ ಬಸವರಾಜು ಅವರು ಚುನಾವಣಾಧಿಕಾರಿಗಳಾಗಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಒಟ್ಟು 15 ಸದಸ್ಯರ ಬಲ ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ 7 ಸ್ಥಾನಗಳು ಕಾಂಗ್ರೆಸ್ ಪಾಳೆಯದ್ದಾಗಿದ್ದು, ಜೆಡಿಎಸ್ 5 ಸ್ಥಾನಗಳು ಮತ್ತು ಮೂವರು ಪಕ್ಷತರರು ಇದ್ದಾರೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಕಾಂಗ್ರೆಸ್ನಿಂದ ಮಂಜುಳಮ್ಮ, ಜೆಡಿಎಸ್ನಿಂದ ಮಮತ ಮತ್ತು ಪೊಟ್ಯಾಟೋ ಕ್ಲಬ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೌರಮ್ಮ ನಾಮಪತ್ರ ಸಲ್ಲಿಸಿದ್ದರು.ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಸಲೀಂ ಅಹಮದ್, ಜೆಡಿಎಸ್ನ ಅಬ್ದುಲ್ ಅಲೀಂ ಪಾಷಾ ಹಾಗೂ ಪೊಟ್ಯಾಟೋ ಬೆಂಬಲಿತ ಪಕ್ಷೇತರ ಸದಸ್ಯ ವಾಟಾಳ್ ರಮೇಶ್ ನಾಮಪತ್ರ ಸಲ್ಲಿಸಿದ್ದರು.
ಪ್ರಯತ್ನ ಫಲಕಾರಿಯಾಗಲಿಲ್ಲ: ಕೊನೆ ವೇಳೆವರೆಗೂ ಜೆಡಿಎಸ್ ಮತ್ತು ಪಕ್ಷೇತರರ ನಡುವೆ ಹೊಂದಾಣಿಕೆ ಪ್ರಯತ್ನ ನಡೆದು ತೀವ್ರ ಪೈಪೋಟಿ ನಿರೀಕ್ಷಿಸಿತ್ತಾದರೂ, ಹೊಂದಾಣಿಕೆಯ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಅಂತಿಮವಾಗಿ ಮತದಾನ ನಡೆದು ಕಾಂಗ್ರೆಸ್ನ ಮಂಜುಳಮ್ಮ ಮತ್ತು ಸಲೀಂ ಅಹಮದ್ ತಲಾ 8 ಮತಗಳನ್ನು ಗಳಿಸುವ ಮೂಲಕ ಕ್ರಮವಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಜೆಡಿಎಸ್ ಮತ್ತು ಪೊಟ್ಯಾಟೋ ಬೆಂಬಲಿತ ಅಭ್ಯರ್ಥಿಗಳು ತಲಾ 4 ಮತ್ತು ಮೂರು ಮತಗಳನ್ನು ಗಳಿಸಿಕೊಂಡು ಪರಾಭವಗೊಂಡರು. ಚುನಾವಣೆಯಲ್ಲಿ ಶಾಸಕ ಎ. ಮಂಜು ಅವರು ಪಾಲ್ಗೊಂಡು ಕಾಂಗ್ರೆಸ್ ಪರ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರೆ, ಜೆಡಿಎಸ್ನ 1ನೇ ವಾರ್ಡಿನ ಸದಸ್ಯೆ ಶಾರದಮ್ಮ ಅವರು ಸಭೆಗೆ ಗೈರುಹಾಜರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

