ರಥೋತ್ಸವದ ವೇಳೆ ಕಳಚಿದ ಗಾಲಿ ಪಟ್ಟಿ
ಹೊಳೆನರಸೀಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಭಾನುವಾರ ಜರುಗುವ ಸಂದರ್ಭದಲ್ಲಿ ಹಿಂಬದಿಯಿಂದ ರಥವನ್ನು ಕ್ರೇನ್ ಮುಖೇನ ನಿಯಂತ್ರಿಸುತ್ತಿದ್ದ ವೇಳೆ ರಥದ ಹಿಂಭಾಗದಲ್ಲಿನ ಮುಖ್ಯ ತಳಪಾಯದ ಮರದ ದಿಮ್ಮಿಯಲ್ಲಿ ಕೆತ್ತಲಾಗಿದ್ದ ವಿಗ್ರಹವು ಭಗ್ನಗೊಂಡಿರುವುದಲ್ಲದೇ, ರಥದ ಮುಂಬಾಗದಲ್ಲಿನ ಎರಡೂ ಗಾಲಿಗಳಿಗೆ ಹೊದಿಸಲಾಗಿದ್ದ ಕಬ್ಬಿಣದ ಪಟ್ಟೆಗಳು ಕಳಚಿಹೋದ ಪ್ರಸಂಗ ನಡೆಯಿತು.
ನೂರಾರು ವರ್ಷಗಳಷ್ಟು ಹಳೆಯದಾಗಿದ್ದ ಇಲ್ಲಿನ ಬ್ರಹ್ಮರಥದ ಬದಲಿಗೆ ಇತ್ತೀಚಿನ ಐದು ವರ್ಷಗಳ ಹಿಂದೆಯಷ್ಟೇ ಸುಮಾರು ರು. 50 ಲಕ್ಷ ವೆಚ್ಚದಲ್ಲಿ ಆಧುನಿಕ ತಂರ್ತ್ರಜನ ಬಳಸಿ, ಸುಂದರವಾದ ಕೆತ್ತನೆಯುಳ್ಳ ನೂತನ ಬ್ರಹ್ಮರಥವನ್ನು ನಿರ್ಮಿಸಲಾಗಿತ್ತು. ಈ ರಥಕ್ಕೆ ಬೇರಿಂಗ್ ಹೊಂದಿದ ಚಕ್ರಗಳನ್ನು ಅಳವಡಿಸಿದ್ದಲ್ಲದೇ, ರಥದ ಗಾಲಿಗಳನ್ನು ನಿಯಂತ್ರಿಸಲು ಆಕ್ಸೆಲ್ ಬ್ರೇಕ್ನ ಸೌಲಭ್ಯವನ್ನೂ ಅಳವಡಿಸಲಾಗಿತ್ತು. ನೂತನ ರಥವನ್ನು ಲೋಕಾರ್ಪಣೆಗೊಳಿಸಿದ ನಂತರ ರಥೋತ್ಸವದ ಸಂದರ್ಭದಲ್ಲಿ ರಥವನ್ನು ನಿಯಂತ್ರಿಸಲು ಹಿಂಬದಿಯಿಂದ ಕ್ರೇನ್ ಬಳಸಲಾಗುತ್ತಿತ್ತು.
ಆತಂಕ: ಭಕ್ತಾದಿಗಳು ರಥವನ್ನು ಹುಮ್ಮಸ್ಸಿನಿಂದ ಎಳೆಯುವ ಸಂದರ್ಭದಲ್ಲಿ ರಥವನ್ನು ಹಿಂಬದಿಯಿಂದ ನಿಯಂತ್ರಿಸುತ್ತಿದ್ದ ಕ್ರೇನಿನ ತಡೆಗೆ ರಥದ ಹಿಂಬಾಗದಲ್ಲಿನ ಆನೆಯ ಮೂರ್ತಿಯುಳ್ಳ ಮರದ ದಿಮ್ಮಿ ಮುರಿದುಹೋಗಿದೆ. ಅಲ್ಲದೇ, ರಥದ ಮುಂಭಾಗದಲ್ಲಿನ ಎರಡೂ ಚಕ್ರಗಳಿಗೆ ಅಳವಡಿಸಲಾಗಿದ್ದ ಕಬ್ಬಿಣದ ಪಟ್ಟೆಗಳೂ ಕೂಡ ಕಳಚಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿತು.
ಹೊಸ ರಥದ ಬಗ್ಗೆ ಅನುಮಾನ: ಈ ಘಟನೆಯಿಂದಾಗಿ ಯಾವುದೇ ಅನಾಹುತ ವರದಿಯಾಗಿಲ್ಲ. ಯಾವುದೇ ತಂತ್ರಜ್ಞಾನದ ಸಹಾಯವಿಲ್ಲದೇ ನೂರಾರು ವರ್ಷಗಳ ಹಿಂದೆಯೇ ನಿರ್ಮಾಣವಾದ ಹಳೆ ರಥ ಸುದೀರ್ಘ ಬಾಳಿಕೆ ನೀಡಿ ಲಕ್ಷಾಂತರ ಭಕ್ತರ ಪೂಜನೀಯತೆಗೆ ಸಾಕ್ಷಿಯಾಗಿತ್ತು. ಆದರೆ, ಕೇವಲ ನಾಲ್ಕೈದು ವರ್ಷಗಳ ಹಿಂದಷ್ಟೇ ನಿರ್ಮಾಣವಾದ ರಥದಲ್ಲಿ ಈ ಬಾರಿ ನಡೆದಿರುವ ಧಕ್ಕೆಗಳನ್ನು ಕಂಡರೆ ರಥದ ಮುಂದಿನ ಸುದೀರ್ಘ ಬಾಳಿಕೆಯ ಬಗ್ಗೆಯೇ ಅನುಮಾನ ಹುಟ್ಟಲು ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

