ಸುದ್ದಿ ಸಂಕ್ಷೇಪ
ವಿಜೃಂಭಣೆಯ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ
ಅರಕಲಗೂಡು: ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಭಾನುವಾರ ವಿಜೃಭಂಣೆಯಿಂದ ನೆರವೇರಿತು. ಪಟ್ಟಣದ ರಥಬೀದಿಗಳಲ್ಲಿ ಮೊದಲು ಕೃಷ್ಣಗಂಧೋತ್ಸವ ಅಡ್ಡೆಯ ಮೂಲಕ ಸಾಗಿ ನಂತರ ಉತ್ಸವ ಮೂರ್ತಿಯ ರಥಾರೋಹಣ ನೆರವೇರಿತು. ವೈಖಾನಸ ಪದ್ಧತಿ ರೀತಿ ಪೂಜಾ ವಿಧಿಗಳು ನಡೆದ ನಂತರ ತಹಸೀಲ್ದಾರ್ ಜಗನ್ನಾಥ್ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಪಟ್ಟಣದ ರಥಬೀದಿಯಲ್ಲಿ ಶ್ರದ್ಧಾ ಭಕ್ತಿಯಿಂದ ರಥ ಎಳೆದರು. ಮಂಗಳ ವಾದ್ಯ ಸೇರಿದಂತೆ ವಿವಿಧ ಜಾನಪದ ತಂಡಗಳ ಪ್ರದರ್ಶನ ನೆರವೇರಿತು.
ರಾಜ್ಯಪಾಲರ ಪ್ರವಾಸ
ಹಾಸನ: ರಾಜ್ಯಪಾಲ ಹೆಚ್.ಆರ್. ಭಾರದ್ವಾಜ್ ಅವರು 18 ಮತ್ತು 21ರಂದು ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಲಿರುವರು. ಮಾ. 18ರಂದು ಬೆಳಗ್ಗೆ 11.45ಕ್ಕೆ ಹಾಸನಕ್ಕೆ ಆಗಮಿಸುವರು. ಅಂದು ಸಂಜೆ 5ಕ್ಕೆ ಬೇಲೂರಿಗೆ ತೆರಳುವರು. ಸಂಜೆ 6.30ಕ್ಕೆ ಬೇಲೂರಿನಿಂದ ಚಿಕ್ಕಮಗಳೂರಿಗೆ ತೆರಳುವರು. ಮಾ. 21ರಂದು ಮಧ್ಯಾಹ್ನ 12ಕ್ಕೆ ಹಾಸನಕ್ಕೆ ಆಗಮಿಸಿ, ಅಂದು ಸಂಜೆ 4 ಗಂಟೆಗೆ ಹಾಸನದಿಂದ ಹೊಳೆನರಸೀಪುರಕ್ಕೆ ತೆರಳುವರು. ಸಂಜೆ 5.15ರ ಸುಮಾರಿಗೆ ಹೊಳೆನರಸೀಪುರದಿಂದ ಮೈಸೂರಿಗೆ ತೆರಳುವರು.
ಇಂದು ವಿದ್ಯುತ್ ವ್ಯತ್ಯಯ
ಹೊಳೆನರಸೀಪುರ: ತಾಲೂಕಿನ ಹಂಗರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕಾಮಗಾರಿಯ ಪ್ರಯುಕ್ತ ಹಂಗರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿತರಣೆಯಾಗುವ ಹಂಗರಹಳ್ಳಿ-ಎಫ್1, ಹಳೇಕೋಟೆ ಎಫ್-5 ಹಾಗೂ ಬಾಗೀವಾಳು ಫೀಡರ್ನಲ್ಲಿ ಬರುವ ಗ್ರಾಮಗಳಾದ ಹಂಗರಹಳ್ಳಿ, ನ್ಯಾಮನಹಳ್ಳಿ, ಹನುಮನಹಳ್ಳಿ, ಹಳೇಕೋಟೆ, ಕಿನ್ನರಹಳ್ಳಿ, ದೇವನಗರ, ಹರದನಹಳ್ಳಿ, ಬಾಗೀವಾಳು, ತವನಂದಿ, ಸಿಗರನಹಳ್ಳಿ, ಹೂವಿನಹಳ್ಳಿ, ಹರಿಹರಪುರ, ಎಳ್ಳೇಶಪುರ ಮತ್ತು ಬೆಟ್ಟದಸಾತೇಹಳ್ಳಿ ಗ್ರಾಮಗಳಿಗೆ ಮಾ. 18ರ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಕಡಿತಗೊಳಿಲಿರುವ ಕಾರಣದಿಂದಾಗಿ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಹಂಗರಹಳ್ಳಿ ವಿದ್ಯುತ್ ವಿತರಣಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

