ಊಟದ ಅವ್ಯವಸ್ಥೆ: ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಬೇಲೂರು: ಪಟ್ಟಣದ ಕೆಂಪೇಗೌಡ ರಸ್ತೆಯಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಪರಿಶಿಷ್ಟ ಬಾಲಕರ ಹಾಸ್ಟೆಲ್ ವಿದ್ಯಾರ್ಥಿಗಳು ಊಟದ ವ್ಯವಸ್ಥೆ ಸರಿಯಿಲ್ಲವೆಂದು ಆಕ್ರೋಶಗೊಂಡು ವಾರ್ಡನ್ ಸಂತೋಷ್ ಅವರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಇತ್ತೀಚೆಗೆ ನಡೆದಿದೆ.
ಪತ್ರಕರ್ತರೊಂದಿಗೆ ಮಾತನಾಡಿದ ವಿದ್ಯಾರ್ಥಿಗಳಾದ, ಗಿರೀಶ್, ಪ್ರೇಮಕುಮಾರ್, ಪ್ರವೀಣ್, ಮೂರ್ತಿ, ಅರುಣ್, ನಾಗರಾಜ್, ರಘು ಸಾಂಬರ್ ರುಚಿ ಇರುವುದಿಲ್ಲ. ಮನಬಂದಂತೆ ಮಾಡುತ್ತಾರೆ. ಕೇಳಿದರೆ ಉಡಾಫೆಯಿಂದ ವರ್ತಿಸುತ್ತಾರೆ. ಇವರ ಹಿಂಸೆ ತಾಳದೆ ಇಂದು ಊಟ ಬಿಟ್ಟು ಮುಷ್ಕರದ ಹಾದಿ ಹಿಡಿದಿದ್ದೇವೆ ಎಂದು ತಿಳಿಸಿದರು.
ತಿಂದ್ರೆ ತಿನ್ನಿ ಬಿಟ್ರೆ ಬಿಡಿ: ಪ್ರತಿನಿತ್ಯ ಎಲೆಕೋಸು, ಸಿಹಿ ಸೋರೆಕಾಯಿ ಸಾಂಬರ್ ಮಾಡುತ್ತಾರೆ. ಊಟ ಸರಿಯಿಲ್ಲದೆ ಕೆಲವರಿಗೆ ಆರೋಗ್ಯ ಹಾಳಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ, ಇಲ್ಲಿ ಹೀಗೇ ಅಡುಗೆ ಮಾಡೋದು. ತಿಂದರೆ ತಿನ್ನಿ ಇಲ್ಲದಿದ್ದರೆ ಬಿಡಿ ಎನ್ನುತ್ತಾರೆ. ನಮಗೆ ಸಾಂಬಾರಿನಲ್ಲಿ ಎಲೆಕೋಸು ಸಿಗಬಾರದೆಂದು ಅದನ್ನು ಗ್ರೈಂಡರ್ನಲ್ಲಿ ರುಬ್ಬಿ ಹಾಕುತ್ತಾರೆ ಎಂದು ದೂರಿದರು.
ದೂರು: ಅಡುಗೆಯವರಲ್ಲಿ ಮಹಿಳೆಯರು ಹೊರತುಪಡಿಸಿ ಉಳಿದವರು ಮನಬಂದಂತೆ ಕೆಲಸ ಮಾಡುತ್ತಾರೆ. ಯಾವಾಗಲೋ ಬರುತ್ತಾರೆ, ಯಾವಾಗಲೋ ಹೋಗುತ್ತಾರೆ. ಮುಖ್ಯ ಅಡುಗೆ ಭಟ್ಟ ಪುಟ್ಟರಾಜು ಎಂಬುವರು ಹಾಸ್ಟೆಲ್ಗೆ ಬಂದು ಕೆಲವೇ ಸಮಯವಿದ್ದು ನಂತರ ಅವರದೇ ಆದ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ತೆರಳುತ್ತಾರೆ ಎಂದು ದೂರಿದರು.ಅಲ್ಲದೇ, ಹಾಸ್ಟೆಲ್ನಲ್ಲಿ ವಾರ್ಡನ್ ಸಹ ಸರಿಯಾಗಿ ಇರುವುದಿಲ್ಲ. ಮಂಚವಿಲ್ಲದೆ ಇಟ್ಟಿಗೆಗಳನ್ನು ಜೋಡಿಸಿಕೊಂಡು ಮಂಚ ಮಾಡಿಕೊಂಡಿದ್ದೇವೆ. ಹಾಸಿಗೆಗಳು ಹರಿದಿವೆ. ಈ ಬಗ್ಗೆ ಮೇಲಾಧಿಕಾರಿಗಳಿಗೂ ತಿಳಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲವೆಂದು ಅಲವತ್ತು ಕೊಂಡರು.
ನೀರು ಸಚ್ಛವಿಲ್ಲ: ಕುಡಿಯುವ ನೀರಿನ ಸಿಂಟೆಕ್ಸ್ ತೊಳೆದು ವರ್ಷಗಳೇ ಕಳೆದಿದೆ. ಅದಲ್ಲಿ ತುಂಬವ ನೀರನ್ನೇ ವಿದ್ಯಾರ್ಥಿಗಳಿಗೆ ಕುಡಿಸಲಾಗುತ್ತಿದೆ ಹಾಗೂ ಅಡುಗೆಗೂ ಉಪಯೋಗಿಸಲಾಗುತ್ತಿದೆ ಎಂದ ವಿದ್ಯಾರ್ಥಿಗಳು, ಸಮಸ್ಯೆ ಬಗೆಹರಿಸಿ ಎಂದು ಮಾಧ್ಯಮಗಳ ಮುಂದೆ ಅಂಗಲಾಚಿದರು.
ಸಮಸ್ಯೆ ಹೀಗೇ ಮುಂದುವರಿದರೆ ಸಮಾಜಕಲ್ಯಾಣ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ಬಗ್ಗೆ ವಾರ್ಡನ್ ಸಂತೋಷಕುಮಾರ್ ಅವರನ್ನ ವಿಚಾರಿಸಿದಾಗ, ಇವತ್ತು ಸ್ವಲ್ಪ ಏರುಪೇರಾಗಿದೆ. ದಿನಾಲು ಇಲ್ಲಿ ಊಟ ಚೆನ್ನಾಗಿರುತ್ತದೆ. ಕಟ್ಟಡ ಬಾಡಿಗೆಯದಾಗಿದ್ದು ಸಮಸ್ಯೆಯಾಗಿದೆ. ಇಲ್ಲಿನ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು. ಸೋರೆಕಾಯಿ, ಎಲೆಕೋಸು ಸ್ಟಾಕ್ ಇಟ್ಟುಕೊಂಡಿರುತ್ತೇವೆ. ಬೇಕಾದಾಗ ಬಳಸುತ್ತೇವೆ. ಮುಖ್ಯ ಅಡುಗೆಯ ಪುಟ್ಟರಾಜು ಎಂಬುವವರು ಸರಿಯಾಗಿ ಹಾಸ್ಟೆಲ್ಗೆ ಬರುವುದಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೂ ಉಪಯೋಗವಾಗಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

