ಜಿಲ್ಲೆಯಲ್ಲಿ ಬಿಜೆಪಿ ನಾಯಕರಿಲ್ಲವೇ ?: ಗೋಪಾಲ್
ಹಾಸನ: ಜಿಲ್ಲೆಯ ಬಿಜೆಪಿಯಲ್ಲಿ ಮುಖಂಡರೇ ಇಲ್ಲವೇ, ಹೊರಗಿನ ಜಿಲ್ಲೆಯವರಿಗೆ ಸ್ಪರ್ಧಿಸಲು ಅವಕಾಶ ಕೊಡಲು ಮುಂದಾಗುತ್ತಿರುವುದು ಎಷ್ಟು ಸರಿ ಎಂದು ಬಿಜೆಪಿ ಹಿರಿಯ ಮುಖಂಡ ಡಿ.ವೈ. ಗೋಪಾಲ್ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯು ಅಂದುಕೊಂಡಂತೆ ಉನ್ನತ ಸ್ಥಿತಿಯಲ್ಲಿ ಇಲ್ಲ. ಈ ಮಟ್ಟಕ್ಕೆ ಬರಬೇಕಾದರೆ ರಾಜ್ಯಮಟ್ಟದ ನಾಯಕರೇ ಕಾರಣ. ಅವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಹಾಗೂ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಬರಲು ಬೇರೆ ಪಾರ್ಟಿಯವರೊಂದಿಗೆ ಹೊಂದಿಕೊಂಡಿದ್ದಾರೋ ಎಂಬ ಶಂಕೆ ಬರುತ್ತಿದೆ ಎಂದು ಅವರು ಹೇಳಿದರು.
ಗೆಲ್ಲುವ ನಾಯಕರಿಲ್ಲ: ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯವಿದ್ದು, ನಂತರ ಲಿಂಗಾಯಿತರಿಗೂ ಸ್ಥಾನವಿದೆ. ಬಿಜೆಪಿ ಹಿರಿಯ ಮುಖಂಡರಾದ ಬಿ.ಬಿ. ಶಿವಪ್ಪ ಹಾಗೂ ಎ.ಎಸ್. ಬಸವರಾಜು ಶಾಸಕರಾಗಿದ್ದವರು. ಈ ಹಿಂದೆ ಜಿಲ್ಲೆಯಲ್ಲಿ ನಾಲ್ಕು ಜನ ಬಿಜೆಪಿ ಶಾಸಕರನ್ನು ಹೊಂದಿತ್ತು. ಈಗಲೂ ಬಿಜೆಪಿಗೆ ಒಲವು ಇದ್ದೇ ಇದೆ. ಲಿಂಗಾಯಿತರಾಗಲಿ, ಇಲ್ಲವೇ ಒಕ್ಕಲಿಗರಾಗಲಿ, ಬಿಜೆಪಿಯಲ್ಲಿ ಗೆಲ್ಲುವ ನಾಯಕರಿಲ್ಲ ಎಂದು ವರಿಷ್ಠರು ಭಾವಿಸಿಕೊಂಡಿರುವುದು ತಪ್ಪು ಎಂದು ಹೇಳಿದ್ದಾರೆ.
ವಿಪರ್ಯಾಸ: ಒಕ್ಕಲಿಗರಲ್ಲಿ ಜೈ ಮಾರುತಿ ದೇವರಾಜ್ ಜತೆಗೆ ಇತರರೂ ಇದ್ದಾರೆ. ಲಿಂಗಾಯಿತರಲ್ಲಿ ಮಾಜಿ ಶಾಸಕರಲ್ಲದೇ ಇತರರು ಇದ್ದರೂ ಸ್ಥಳೀಯರಿಗೆ ಅವಕಾಶ ನೀಡದೇ ಬೇರೆ ಜಿಲ್ಲೆಯಿಂದ ಅಭ್ಯರ್ಥಿಗಳನ್ನು ಕರೆತಂದು ಇಲ್ಲಿಗೆ ಅವಕಾಶ ನೀಡುತ್ತಿರುವುದು ವಿಪರ್ಯಾಸವಲ್ಲವೇ ಎಂದು ಅವರು ಪ್ರಶ್ನಿಸಿದರು.
ಎಚ್ಚರಿಕೆ: ಈಗಲಾದರೂ ಎಚೆತ್ತುಕೊಂಡು ಜಿಲ್ಲೆಯಲ್ಲಿಯೇ ಸಮರ್ಥ ನಾಯಕರಿಗೆ ಅವಕಾಶ ನೀಡುವ ಮೂಲಕ ಬಿಜೆಪಿಯನ್ನು ಬೆಳೆಸಲು ಶ್ರಮಪಡುತ್ತಿರುವ ನಾಯಕರಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಇಲ್ಲವಾದರೆ ಮುಂದಿನ ದಿವಸಗಳಲ್ಲಿ ಜಿಲ್ಲೆಯೊಳಗೆ ಬಿಜೆಪಿ ನಾಶವಾಗುವುದು ಖಚಿತ ಎಂದು ಡಿ.ವೈ. ಗೋಪಾಲ್ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

