ರೆಡ್ ರಿಬ್ಬನ್ ವತಿಯಿಂದ ಏಡ್ಸ್ ಜಾಗೃತಿ
ಹಾಸನ: ರೆಡ್ರಿಬ್ಬನ್ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಜಾಗೃತದಳದ ವತಿಯಿಂದ ಏಡ್ಸ್ ಜಾಗೃತಾ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಾಮಲಾದೇವಿ ಅವರು ರಕ್ತದಾನ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿ, ಭಾರತದಲ್ಲಿ ನಾನಾ ರಾಜ್ಯಗಳಲ್ಲಿ ಇರುವ ಏಡ್ಸ್ ರೋಗಿಗಳ ಸಂಖ್ಯೆಯನ್ನು ತಿಳಿಸುತ್ತಾ ಅದನ್ನು ಕೆಳಮಟ್ಟಕ್ಕೆ ತಂದು ಕೊನೆಗೆ ಸೊನ್ನೆಗೆ ತರುವಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರ ಬಗ್ಗೆ ತಿಳಿಸಿದ ಅವರು, ರಕ್ತದಾನದ ಮಹತ್ವ ತಿಳಿಸಿ ರಕ್ತದಾನ ಮಾಡುವುದರಿಂದ ದಾನಿಗಳಿಗೆ ಉಂಟಾಗುವ ಲಾಭಗಳ ಬಗ್ಗೆಯೂ ಹೇಳಿದರು.
ಚಾಮರಾಜೇಂದ್ರ ರಕ್ತನಿಧಿ ಕೇಂದ್ರದ ವೈದ್ಯ ಡಾ. ಪುರುಷೋತ್ತಮ್ ಮಾತನಾಡಿ, ರಕ್ತ ನಿಧಿ ಕೇಂದ್ರಗಳಲ್ಲಿ ರಕ್ತಕ್ಕಿರುವ ಬೇಡಿಕೆ ಹಾಗೂ ಅದರ ಸಂಗ್ರಹದ ಬಗ್ಗೆ ತಿಳಿಸಿ, ಹೆಚ್ಚು ಹೆಚ್ಚು ರಕ್ತದಾನಿಗಳು ರಕ್ತದಾನದಲ್ಲಿ ಮುಂದೆ ಬಂದು ಬೇಡಿಕೆಗೆ ತಕ್ಕಷ್ಟು ಪೂರೈಕೆಯನ್ನು ಒದಗಿಸಿಕೊಡಲು ಸಹಕಾರಿಯಾಗಬೇಕು ಎಂದರು.
ಕೊಡುಗೆ ಸಲ್ಲಿಸಬೇಕು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರೊ. ಡಾ.ಟಿ.ಬಿ. ತ್ರಿಪಾಠಿ ಮಾತನಾಡಿ, ಇಂದಿನ ದಿನಗಳಲ್ಲಿ ವಿದ್ಯಾವಂತ ಯುವಕರು ಸಮಾಜದ ಹಾಗೂ ದೇಶದ ಅಭಿವೃದ್ಧಿಯ ಬಗ್ಗೆ ಚಿಂತಿಸಿ ಅದಕ್ಕೆ ಅಗತ್ಯವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತನ್ಮೂಲಕ ದೇಶಕ್ಕೆ ತಮ್ಮದೇ ಕೊಡುಗೆಗಳನ್ನು ಸಲ್ಲಿಸಬೇಕು ಎಂದು ಹೇಳಿದರು.
ಬಹುಮಾನ ವಿತರಣೆ: ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ರಿಬ್ಬನ್ ಕ್ಲಬ್ನ ಅಧಿಕಾರಿದ ಪ್ರೊ. ಪಾಂಡುರಂಗ ಅವರು, ರೆಡ್ರಿಬ್ಬನ್ ಕ್ಲಬ್ನ ಕಾರ್ಯಕ್ರಮಗಳ ವರದಿಯನ್ನು ಸಭೆಯ ಮುಂದೆ ಇಟ್ಟು, ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಿರುನಾಟಕ ಹಾಗೂ ಚಿತ್ರಕಲಾ ಸ್ಪರ್ಧೆಯ ವಿಜೇತರ ಹೆಸರುಗಳನ್ನು ಘೋಷಿಸಿದರು. ಅವರಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಅಭಿನಂದನೆ: ಇಂಡಿಯನ್ ರೆಡ್ಕ್ರಾಸ್ ಅಧ್ಯಕ್ಷ ಎಚ್.ವಿ. ಮೋಹನ್ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಹಾಗೂ ಪ್ರಜೆಗಳ ಆರೋಗ್ಯ, ಆರ್ಥಿಕ, ಸಾಮಾಜಿಕ ಸ್ಥಿತಿಗಳನ್ನು ಉತ್ತಮ ಪಡಿಸಲು ಸರ್ಕಾರದ ಜೊತೆಗೆ ಇತರ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದೇ ಆದರೆ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ನನಸು ಮಾಡಲು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದ ಅವರು, ಕಾಲೇಜಿನವರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಕ್ಕೆ ಅಭಿನಂದಿಸಿದರು.
ಡಾ. ಪ್ರಕಾಶ್ ಎಲ್. ಹೆಗ್ಗಡೆಯವರು ಸ್ವಾಗತಿಸಿದರೆ, ಡಾ. ಮುರಳೀಧರ್ ಪೂಜಾರ್ ವಂದಿಸಿದರು. ಹಾಸನ ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಜಾಗೃತದಳದ ಅಧಿಕಾರಿ ಡಾ. ನಟರಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು.
ನಡೆದ ರಕ್ತದಾನ ಶಿಬಿರದಲ್ಲಿ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ಹಾಗೂ ವಿದ್ಯಾರ್ಥಿಗಳೆಲ್ಲ ಸೇರಿ ಒಟ್ಟು 68 ಜನ ದಾನಿಗಳು ರಕ್ತ ದಾನ ಮಾಡಿ ಪ್ರಾಂಶುಪಾಲರಿಂದ ಪ್ರಶಂಸೆಗೆ ಒಳಗಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

