ಹಾಸನ

ಆಹಾ... ಎಂಥ ನಾಜೂಕು ದರೋಡೆ!

Published On :

ಆಲೂರು: ಮನೆಯೊಂದರ ಬಳಿ ನಿಂತಿದ್ದ ಎರಡು ಕಾರುಗಳ ಹಿಂಬದಿಯ ಗ್ಲಾಸ್‌ಗಳನ್ನು ತೆಗೆದು ಪಕ್ಕಕ್ಕಿರಿಸಿ ಕಳವು ಮಾಡಿರುವ ಘಟನೆ ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಶಿವಕುಮಾರ್ ಎಂಬುವರಿಗೆ ಸೇರಿದ ಮಾರುತಿ 800 ಹಾಗೂ ಕುಮಾರಶೆಟ್ಟಿಯವರಿಗೆ ಸೇರಿದ ಮಾರುತಿ ಆಲ್ಟೋ ಕಾರ್‌ಗಳನ್ನು ಕಳ್ಳರು ಗುರಿಯಾಗಿರಿಸಿದ್ದಾರೆ. ಸೆಂಟರ್ ಲಾಕ್ ಮಾಡಿ ನಿಲ್ಲಿಸಲಾಗಿದ್ದ ಈ ಕಾರುಗಳ ಹಿಂಬದಿಯ ಗಾಜನ್ನು ನಾಜೂಕಾಗಿ ಪಕ್ಕಕ್ಕೆ ತೆಗೆದಿಟ್ಟು ಚಾಲಾಕಿತನ ತೋರಿದ್ದಾರೆ.
ಮೊದಲು ಶಿವಕುಮಾರ್ ಕಾರನ್ನು ಜಾಲಾಡಿರುವ ಕಳ್ಳರಿಗೆ ಅಲ್ಲಿ ಕದಿಯುವಂಥದ್ದು ಏನೂ ಸಿಕ್ಕಿಲ್ಲ. ಇದರಿಂದ ನಿರಾಸೆಗೊಂಡ ಅವರು, ಹತ್ತಿರದಲ್ಲೇ ಇದ್ದ ಕುಮಾರ ಶೆಟ್ಟಿ ಎಂಬುವರ ಕಾರಿನ ಮೇಲೆ ಕಣ್ಣು ಹಾಯಿಸಿದ್ದಾರೆ. ಇಲ್ಲೂ ಹಿಂಬದಿಯ ಗ್ಲಾಸ್ ಕೆಳಗಿಳಿಸಿ ಚಾಲಾಕಿತನದಿಂದಲೇ ದರೋಡೆಗಿಳಿದ ಕಳ್ಳರಿಗೆ ಫಲ ಸಿಕ್ಕಿದೆ. ಸುಮಾರು ರು. 25 ಸಾವಿರಕ್ಕೂ ಅಧಿಕ ಮೌಲ್ಯದ ಮ್ಯೂಸಿಕ್ ಪ್ಲೇಯರ್‌ಗಳು ಹಾಗೂ ಸ್ಪೀಕರ್‌ಗಳನ್ನು ಕದ್ದೊಯ್ದಿದ್ದಾರೆ.
ನಾಗರಿಕರ ದೂರು:  ಪಟ್ಟಣದಲ್ಲಿ ಇತ್ತೀಚೆಗೆ ಚಾಣಾಕ್ಷತನದಿಂದ ಒಳಗೊಂಡ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.
 ರಾತ್ರಿ ತಮ್ಮ ಮನೆಗಳ ಬಳಿ ನಿಲ್ಲಿಸಿರುವ ಬೈಕ್‌ಗಳಿಂದ ಪೆಟ್ರೋಲ್ ಕದಿಯಲಾಗುತ್ತಿತ್ತು. ಈಗ, ಕಾರುಗಳಲ್ಲಿನ ವಸ್ತುಗಳು ಕಳ್ಳತನವಾಗಲು ಆರಂಭವಾಗಿದೆ. ಹೀಗಾಗಿ, ವಾಹನ ಮಾಲೀಕರಿಗೆ ತಮ್ಮ ಮನೆಗಳ ಹೊರಗೆ ನಿಲ್ಲಿಸಿರುವ ವಾಹನಗಳ ಬಗ್ಗೆ ಆತಂಕಗೊಳ್ಳುತ್ತಲೇ ರಾತ್ರಿಗಳನ್ನು ಕಳೆಯುವ ಸಮಯ ಬಂದಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.