ಹಾಸನ

ವಿಜೃಂಭಣೆಯ ಮಹದೇಶ್ವರ ಜಾತ್ರೆ

Published On :

ಹಾರನಹಳ್ಳಿ: ಇಲ್ಲಿನ ಕೋಡಿಮಠ ಮಹಾಸಂಸ್ಥಾನದಲ್ಲಿ ಮಹದೇಶ್ವರ ಜಾತ್ರೆಯ ಅಂಗವಾಗಿ  ಹುಣ್ಣಿಮೆ ಕಟ್ಟಳೆ, ಜಗದ್ಗುರು ಜಂಗಮ ಮಹಾಪೂಜೆ ನಡೆದವು. ಸುಕ್ಷೇತ್ರ ಕೋಡಿಮಠ ಪೀಠ  ಅಲಂಕರಿಸಿದ 55 ಪೂಜ್ಯ ಜಂಗಮವರ್ಯರ ದಿವ್ಯ ಸ್ಮರಣಾರ್ಥ ಗದ್ದುಗೆ ಮಹಾಪೂಜೆ, ಧ್ವಜಾರೋಹಣ, ಸಿಂಹಾಸನ ಪೂಜೆ, ರಜತಪಲ್ಲಕಿ ಪೂಜೆ ವಿಜೃಂಭಣೆಯಿಂದ ನೆರವೇರಿತು.
ಇದೇ ವೇಳೆ, 1101 ಮುತ್ತೈದೆಯರಿಗೆ ಸೀರೆ, ಮಂಗಳದ್ರವ್ಯ ನೀಡಿ ಉಡಿ ತುಂಬಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಹಾನಗಲ್ ತಾಲೂಕು ಬೊಮ್ಮನಹಳ್ಳಿ ವಿರಕ್ತಮಠದ ಶ್ರೀ ಶಿವಯೋಗಿ ಮಹಾಸ್ವಾಮಿಗಳ ಪಟ್ಟಾಧಿಕಾರದ ಹದಿನೈದನೇ ಮಹೋತ್ಸವದ ಅಂಗವಾಗಿ ಪೂಜ್ಯರಿಗೆ ಶ್ರೀ ಮಠದ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.
ನಂತರ ಮಾತನಾಡಿದ ಶ್ರೀಗಳು, ಕೋಡಿಮಠಕ್ಕೂ ಬೊಮ್ಮನಹಳ್ಳಿ ವಿರಕ್ತಮಠಕ್ಕೂ ಅವಿನಾಭಾವ ಸಂಬಂಧವಿದೆ. ತಮ್ಮ ಮಕ್ಕಳನ್ನು ನಾಡಿನಉತ್ತಮ ಪ್ರಜೆಗಳಾಗಿ ರೂಪಿಸುವ ಗುರುತರ ಜವಾಬ್ದಾರಿಯನ್ನು ಶ್ರೀ ಮಠ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದೆ ಎಂದರು.
ಸ್ವಾಮೀಜಿ ಕರೆ: ಗದಗ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮತಾಯಿ ಅಸುಂಡಿ ಪ್ರವಚನ ನೀಡಿ, ವಿಶ್ವ ಬೆಳಗಿದ ಮಹಾತ್ಮರಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಒಬ್ಬರು ಎಂದರು. ಎಲ್ಲರೂ ಸನ್ಮಾರ್ಗದಲ್ಲಿ ಸಾಗಬೇಕೆಂದು ಕರೆ ನೀಡಿದರು.
ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಬೆಳಗಾಂ ಜಿಲ್ಲಾ ನಿಡಸೂಸಿಯ ಸಿದ್ಧಸಂಸ್ಥಾನ ಮಠದಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ರಾಜಶೇಖರ ಸ್ವಾಮೀಜಿ ಪ್ರಭುಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಾಣಿ ಚಂದ್ರಯ್ಯನಾಯ್ಡು ಮಾತನಾಡಿದರು. ಗಿರಿಯಾಪುರದ ನಳಿನಿಕುಮಾರ್ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ಸಾವಿರಾರು ಜನ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.