ಮತ ಬಹಿಷ್ಕಾರದ ಬೆದರಿಕೆ
ಚುನಾವಣೆಯ ನೀತಿ ಸಂಹಿತೆ ಕಾರಣಗಳನ್ನು ನೀಡದೇ ಚುನಾವಣಾ ಆಯೋಗದ ವಿಶೇಷ ಅನುಮತಿ ಪಡೆದು ತಕ್ಷಣ ರಸ್ತೆಯ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದ ಗ್ರಾಮಸ್ಥರು, ಈ ಕೂಡಲೇ ಈ ರಸ್ತೆ ದುರಸ್ಥಿ ಕಾರ್ಯವನ್ನು ಪ್ರಾರಂಭಿಸದಿದ್ದರೆ ಏ. 17ರ ಲೋಕಸಭಾ ಚುನಾವಣೆಯನ್ನು ಹಾಸನದಿಂದ ತಿಪಟೂರು ಭಾಗದವರೆಗೂ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಬಿ.ಸೋಮೇಶ್, ರಂಗೇಗೌಡ, ಲಕ್ಷ್ಮಣ್ ಗೌಡ, ಶಾಸ್ತ್ರಿ, ಗಂಗಾಧರ್, ಪ್ರಕಾಶ್ ಯಾಜಿ, ನಾರಾಯಣ ಮೂರ್ತಿ, ಶ್ರೀನಿವಾಸ್, ದಿನೇಶ್, ಆರ್. ಶಿವಪ್ಪ, ಯತೀಶ್, ಸಂತೋಶ್, ಮಂಜುನಾಥ್, ಯೋಗೇಶ್, ನಾರಾಯಣ ಮೂರ್ತಿ, ಬಸವರಾಜು, ನಾಗರಾಜು, ಪತ್ರಕರ್ತ ಆರ್.ಪಿ.ವೆಂಕಟೇಶ್ ಮೂರ್ತಿ ಹಾಗೂ ಇದರರು ಇದ್ದರು.
ವಾಹನ ಸಂಚಾರ ಸ್ಥಗಿತ
ಬೆಳಿಗ್ಗೆಯಿಂದಲೇ ರಸ್ತೆ ಮಧ್ಯೆ ಶಾಮಿಯನಾ ಹಾಕಿ ಪ್ರತಿಭಟಿಸಿದ್ದರಿಂದ ಗಂಟೆಗಟ್ಟಲೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ತಮ್ಮ ಸ್ಥಳಕ್ಕೆ ತೆರಳಲು ಪರದಾಡುವಂತಾಗಿ, ಇತರೆ ವಾಹನಗಳ ಆಸರೆ ಪಡೆದು ಬೇರೆ ಮಾರ್ಗವಾಗಿ ಚಲಿಸಿದರು. ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲ ವಾಹನದ ಚಾಲಕರು ಬೇರೆ ಮಾರ್ಗವಾಗಿ ಹೋಗಲು ಮುಂದಾದಾಗ ಪ್ರತಿಭಟನೆಗಾರರು ಕಲ್ಲು ತೂರಲು ಮುಂದಾದರು. ರಸ್ತೆ ಮಧ್ಯೆ ಟೈರ್ಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಆಗ, ಪೊಲೀಸರು ಮಧ್ಯೆ ಪ್ರವೇಶಿಸಿ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ತಹಸೀಲ್ದಾರ್ ಭೇಟಿ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಇದ್ದು, ಇದೇ ತಿಂಗಳು ಜಿಲ್ಲೆಗೆ ಮುಖ್ಯಮಂತ್ರಿ ಆಗಮಿಸಲಿದ್ದಾರೆ. ಆ ವೇಳೆ ನಿಮ್ಮ ಸಮಸ್ಯೆಯನ್ನು ಮುಂದಿಡುವಂತೆ ತಿಳಿಸಿದ ಅವರು, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

