'ಬ್ಯಾಂಕ್ ವ್ಯವಹಾರದಿಂದ ಮೋಸ ಕಡಿಮೆ'
ಚನ್ನರಾಯಪಟ್ಟಣ: ಸಾಮಾನ್ಯ ಜನತೆಯೂ ಕೂಡ ಇಂದು ಬ್ಯಾಂಕ್‌ಗಳಲ್ಲಿ ವ್ಯವಹರಿಸುವುದರಲ್ಲಿ ಮುಂದಾಗಿರುವುದರಿಂದ ಮೋಸ ವಂಚನೆಗಳು ಕಡಿಮೆಯಾಗುತ್ತಿವೆ ಶ್ರೀ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಅಗ್ರಹಾರ ಬೀದಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನ ಮಾರ್ಕೆಟ್ ಶಾಖೆ ಉಧ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಹಿಂದೆ ಜನತೆ ತಮ್ಮಲ್ಲಿದ್ದ ಹಣವನ್ನು ಮನೆಯಲ್ಲಿಟ್ಟು ಅದನ್ನು ಕಳ್ಳರಿಗೆ ಕದಿಯಲು ದಾರಿ ಮಾಡಿಕೊಡುತ್ತಿದ್ದರು. ಆದರೆ ಇಂದು ಜನರು ಬುದ್ಧಿವಂತಿಕೆಯಿಂದ ಬ್ಯಾಂಕ್‌ಗಳಲ್ಲಿ ತಮ್ಮ ಹಣವನ್ನಿಡುತ್ತಿರುವುದರಿಂದ ಅವರ ಹಣಕ್ಕೆ ಭದ್ರತೆ ಸಿಗುತ್ತಿದೆ, ಅಲ್ಲದೇ, ಅವರ ಆಪತ್ತಿಗೆ ಹಣ ಸಿಗುತ್ತಿದೆ ಎಂದರು.
ಸಾಲ ಮನ್ನಾ ಎಂಬ ದುರಾಸೆ ಯಾರಲ್ಲಿಯೂ ಬರಬಾರದು ಎಂದ ಶ್ರೀಗಳು, ಕಷ್ಟಪಟ್ಟು ದುಡಿಯುವ ಮನೋಭಾವ ಕಲ್ಪಿಸಿಕೊಳ್ಳಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಹಿಂದಿನಿಂದಲೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವುದರಿಂದ ಅದು ಎಲ್ಲರ ಮನೆಯ ಬ್ಯಾಂಕ್ ಆಗಿದ್ದು, ಶಾಖೆಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ತೆರೆಯಲಿ ಎಂದು ಆಶಿಸಿದರು. ಹಾಸನ ಶಾಖಾ ಮಠದ ಶಂಭುನಾಥ್ ಸ್ವಾಮೀಜಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

