'ಸ್ಮಾರಕಗಳು ಜೀವಂತ ಸಂಸ್ಕೃತಿ'
ಹೊಳೆನರಸೀಪುರ: ಭಾರತದಲ್ಲಿನ ಕಲೆ- ಸಂಸ್ಕೃತಿ ಮತ್ತು ಪರಂಪರೆಗಳ ಸಾಕ್ಷಾತ್ಕಾರಕ್ಕೆ ಇತಿಹಾಸದ ಗತವೈಭವವನ್ನು ಸಾಕ್ಷೀಕರಿಸಲು ಸಹಕಾರಿಯಾದ ಸ್ಮಾರಕಗಳು ಒಂದು ಜೀವಂತ ಸಂಸ್ಕಂತಿಯ ವೈಭವದ ಮುನ್ನುಡಿ ಎಂದರೆ ಅತಿಶಯೋಕ್ತಿಯಲ್ಲ ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಬಿ. ಇರ್ಷಾದ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು 2ನೇ ಹಂತದ ಸ್ಮಾರಕ ಸಂರಕ್ಷಣಾ ಅಭಿಯಾನದಡಿಯಲ್ಲಿ, 7ದಿನಗಳ ಕಾಲ ರಾಜ್ಯದಲ್ಲಿನ ವಿವಿಧ ಐತಿಹಾಸಿಕ ಸ್ಥಳಗಳಿಗೆ ನೀಡಿದ್ದ ಭೇಟಿಯ ಕುರಿತಂತೆ ಮಾಹಿತಿ ನೀಡಿ ಅವರು ಮಾತನಾಡಿದರು.
ಸ್ಮಾರಕಗಳು ಒಂದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅತ್ಯಮೂಲ್ಯ ದಾಖಲೆಗಳು ಎಂದ ಅವರು, ನಮ್ಮ ಸಂಸ್ಕೃತಿಯ ನಾನಾ ಆಯಾಮಗಳನ್ನು ಪರಂಪರೆಗಳ ರೂಪದಲ್ಲಿ ಸಾಕ್ಷೀಕರಿಸುವ ಸ್ಮಾರಕಗಳ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.
ಈ ಅಭಿಯಾನದ ಉಸ್ತುವಾರಿಯನ್ನು ಎಂ.ಕಾಂ. ಸಂಯೋಜಕರಾದ ಎಸ್.ಆರ್. ವಿಜಯಕುಮಾರ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಸ್. ಕಿರಣ್ ರಾವತ್, ಸಹಾಯಕ ಗ್ರಂಥಪಾಲಕರಾದ ಎಂ.ಸಿ. ಕುಮಾರಸ್ವಾಮಿ, ಅತಿಥಿ ಉಪನ್ಯಾಸಕರಾದ ಚಿದಂಬರ ಮತ್ತು ಚೈತ್ರ ವಹಿಸಿದ್ದರು ಎಂದು ಪ್ರಾಂಶುಪಾಲರು ತಿಳಿಸಿದರು.
2ನೇ ಹಂತದ ಸ್ಮಾರಕ ಸಂರಕ್ಷಣಾ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಮಾರಿಕಣಿವೆ, ಚಿತ್ರದುರ್ಗ, ಕೂಡಲಸಂಗಮ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬನಶಂಕರಿ, ಬಿಜಾಪುರ, ಹಂಪಿ, ಗೋವ (ಪಾರಂಪರಿಕ ನಗರ), ಕಾರವಾರ, ಇಡಗುಂಜಿ, ಮುರುಡೇಶ್ವರ, ಗೋಕರ್ಣ, ಉಡುಪಿ, ಯಾಣ, ಮಹಾಕೂಟ ಇನ್ನೂ ಮುಂತಾದ ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡಿದ್ದ ವಿದ್ಯಾರ್ಥಿಗಳು ಐತಿಹಾಸಿಕ ಸ್ಥಳಗಳ ಸ್ವಚ್ಚತೆ ಕಾಪಾಡುವ ಬಗ್ಗೆ ಪ್ರವಾಸಿಗರಲ್ಲಿ ಜಾಗೃತಿ, ಐತಿಹಾಸಿಕ ಸ್ಮಾರಕಗಳ ವಾಸ್ತು ಅಧ್ಯಯನ, ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳು, ಸ್ಮಾರಕಗಳ ಮಾಹಿತಿ ಸಂಗ್ರಹ ಹಾಗೂ ವಿಭಿನ್ನ ಸಂಪ್ರದಾಯಗಳ ಅಧ್ಯಯನ ಸ್ಥಳೀಯ ಕಲೆ, ನೃತ್ಯ, ಉಡುಪು, ಆಹಾರ ಮತ್ತು ಸಾಂಪ್ರಾದಾಯಿಕ, ಆಚರಣೆಗಳ ಅಧ್ಯಯನವನ್ನು ಈ ಅಭಿಯಾನ ಒಳಗೊಂಡಿತ್ತು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

