ಜೀವನಕ್ಕೆ ನಾಟಕಗಳ ಪ್ರಭಾವ ಹಿರಿದು
ಜಾವಗಲ್: ನಾಟಕಗಳು ಸಮಾಜದ ಜನಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ ಎಂದು ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಕೆ. ಎಸ್. ದಿನೇಶ್ ಅಭಿಪ್ರಾಯಪಟ್ಟರು.
ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯದಲ್ಲಿ ನಾಟಕಗಳು ಕುರಿತಾಗಿ ಉಪನ್ಯಾಸ ನೀಡಿದ ಅವರು, ಪ್ರಾಚೀನ ಸಾಹಿತ್ಯದ ರೂಪ ನಾಟಕಗಳಾಗಿದ್ದು, ಸೃಜನಶೀಲ ಸಾಹಿತ್ಯ ಪ್ರೇರೇಪಿಸಿದ ಪ್ರಕಾರಗಳಲ್ಲಿ ನಾಟಕವು ಹೆಚ್ಚಿನ ಪ್ರಭಾವಗೊಂಡಿದೆ. ಸಾಹಿತ್ಯದಲ್ಲಿ ನಾಟಕಕ್ಕೆ ವಿಭಿನ್ನ ಸ್ಥಾನವಿದ್ದು, ನಾಟಕಗಳೇ ಬದುಕಿನ ಜೀವಾಳ ಎನಿಸಿವೆ ಎಂದರು.
ಕಾರ್ನಾಡ್ಗೆ 2ನೇ ಸ್ಥಾನ: ಭಾರತೀಯ ನಾಟಕ ಪರಂಪರೆಯಲ್ಲಿ ಕಾಳಿದಾಸ ಪ್ರಮುಖ ಸ್ಥಾನಗಳಿಸಿದ್ದರೆ, ನಂತರದ ಸ್ಥಾನ ಗಿರೀಶ್ ಕಾರ್ನಾಡ್ರವರಿಗೆ ಸಲ್ಲುತ್ತದೆ. ಕಾಕನಕೋಟೆ ನಾಟಕ ಕನ್ನಡ ನಾಟಕ ಪರಂಪರೆಯ ದಿಕ್ಸೂಚಿಯಾಗಿದೆ. ಮೈಸೂರು ಅರಸರ ಕಾಲದಲ್ಲಿ ಸಂಸ್ಕೃತ, ಇಂಗ್ಲಿಷ್ ಭಾಷೆಗಳಿಂದ ಕನ್ನಡಕ್ಕೆ ನಾಟಕಗಳ ಅನುವಾದ ಹಾಗೂ ಕನ್ನಡದಲ್ಲಿ ನಾಟಕ ಬರೆಯುವ ಕೆಲಸ ಪ್ರಾರಂಭವಾಗಿ, ಅರಸರ ಕಾಲದಲ್ಲಿ ಹೆಚ್ಚಿನ ಪ್ರೋತ್ಸಾಹ ದೊರಕಿತು. ನಾಟಕಗಳಿಂದ ಮನುಷ್ಯನ ತಿಳುವಳಿಕೆ, ಕಲ್ಪನೆ, ಆಲೋಚನೆಗಳನ್ನು ಅರಿತುಕೊಳ್ಳಬಹುದು. ನಾಟಕವು ಮನರಂಜನೆಗೆ ಹೇಳಿಮಾಡಿಸಿದ ಕಲೆಯಾಗಿದೆ ಎಂದರು.
ನಾಟಕಗಳ ನಿರ್ಲಕ್ಷ್ಯ: ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಕೆ. ಭಾಷಾ ಮಾತನಾಡಿ, ನಾಟಕವು ಜನಸಾಮಾನ್ಯರಿಗೆ ತಲುಪುವ ಮನರಂಜನೆಯ ಮುಖ್ಯ ಪ್ರಕಾರವಾಗಿದ್ದು, ಸಿನಿಮಾ ಮತ್ತು ದೂರದರ್ಶನಗಳ ಹಾವಳಿಯಿಂದಾಗಿ, ನಾಟಕಗಳನ್ನು ಕ್ಷುಲ್ಲಕವಾಗಿ ಕಾಣುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಶಂಕರಲಿಂಗೇಗೌಡ, ಉಪನ್ಯಾಸಕರಾದ ಶಿವಕುಮಾರ್, ಸತೀಶ್ ಮಾತನಾಡಿದರು. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

