ದೇಶ ಕಟ್ಟುವಲ್ಲಿ ರಾಮನ್ ಶ್ರಮ ಅಪಾರ
ಹಾಸನ: ಭಾರತ ದೇಶವನ್ನು ಸ್ವಾಭಿಮಾನಿ, ಸ್ವಾವಲಂಬಿ ಹಾಗೂ ವಿಜ್ಞಾನ- ತಂತ್ರಜ್ಞಾನದ ದೇಶವನ್ನಾಗಿ ಕಟ್ಟುವಲ್ಲಿ ಸರ್.ಸಿ.ವಿ. ರಾಮನ್ ಅವರ ಶ್ರಮ ಅಪಾರ ಎಂದು ವಿಚಾರವಾದಿ ಹಾಗೂ ಲೇಖಕ ಕೆ.ಎಸ್. ರವಿಕುಮಾರ್ ತಿಳಿಸಿದರು.
ಇತ್ತೀಚೆಗೆ ನಗರದ ಬಿಜಿವಿಎಸ್ ಕಚೇರಿಯಲ್ಲಿ ಇತ್ತೀಚೆಗೆ ಬಿಜಿವಿಎಸ್ ಕಾರ್ಯಕರ್ತರಿಗೆ ಭಾರತದ ವಿಜ್ಞಾನಿಗಳು ಹಾಗೂ ಪರಿಸರವನ್ನು ಅಥೈಸಿಕೊಳ್ಳುವ ಬಗ್ಗೆ ನಡೆದ ಜಿಲ್ಲಾಮಟ್ಟದ ಕಾಯಾಗಾರದಲ್ಲಿ ಮಾತನಾಡಿದರು.
ಸಿ.ವಿ. ರಾಮನ್, ಪಿ.ಸಿ.ರೇ, ಮೇಘನಾದ ಸಹಾ, ಎಸ್.ಎನ್.ಬೋಸ್, ವಿಶ್ವೇಶ್ವರಯ್ಯ, ಶ್ರೀನಿವಾಸ ರಾಮಾನುಜಂ, ಸಿ.ಎನ್.ಆರ್.ರಾವ್ ಯಾವುದೇ ದೇಶದ ಆಮಿಶಗಳಿಗೆ ಒಳಗಾಗದೇ, ಭಾರತೀಯರಾಗಿದ್ದುಕೊಂಡು ಭಾರತದ ಮಣ್ಣಿನಲ್ಲಿ ವಾಸಬಾಗಿದ್ದುಕೊಂಡೇ ಭಾರತವನ್ನು ಪಾಶ್ಚಾತ್ಯ ದೇಶಗಳ ಸಾಲಿನಲ್ಲಿ ತಂದು ನಿಲ್ಲಿಸಲು ಅವಿರತವಾಗಿ ದುಡಿದ ಭಾರತ ರತ್ನಗಳು ಎಂದು ಹೇಳಿದರು.
ಶಾಲೆಗಳ ವಿಜ್ಞಾನ ಸಂಘದ ಹಂತದಲ್ಲಿಯೆ ಭಾರತದ ವಿಜ್ಞಾನಿಗಳ ಸಾಧನೆ, ಶ್ರಮವನ್ನು ಪರಿಚಯಿಸಬೇಕು ಎಂದರು.
ಪರಿಸರ ಶಿಕ್ಷಣ ಕೇಂದ್ರದ ಬ.ಎಸ್.ರವಿಶಂಕರ್ ಮಾತನಾಡಿ, ಶಾಶ್ವತ ನೀರಾವರಿ ಯೋಜನೆ ರೂಪಿಸುವ ಅಗತ್ಯ ನಾಡಿಗಿದೆ ಎಂದರು.
4.2 ಲಕ್ಷ ವರ್ಷದಲ್ಲಿ ಇಂಗಾಲಾಮ್ಲ 180 ರಿಂದ 280 ಪಿ.ಪಿ.ಎಂ ಬದಲಾಗಿದೆ. ಆದರೆ 2100ರ ವೇಳೆಗೆ ಇದು 700ರಿಂದ 900 ಪಿಪಿಎಂಗೆ ಏರಲಿದೆ. ಆಗ ಯಾವ ಜೀವಿಯೂ ಭೂಮಿ ಮೇಲೆ ಬದುಕಲಾರದು ಎಂದು ಅವರು ಹೇಳಿದರು.
ಶಿಕ್ಷಣ ಉಪಸಮಿತಿ ಸಂಚಾಲಕಿ ಕೆ.ವಿ. ಕವಿತಾ ಸ್ವಾಗತಿಸಿದರು. ಜಿಲ್ಲಾ ಸಹಕಾರ್ಯದರ್ಶಿ ಮಮತಾ ಶಿವು ವಂದಿಸಿದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಶಾಲಾಮಕ್ಕಳಿಗಾಗಿ ನಡೆಸಿದ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಉತ್ತರ ಬಡಾವಣೆ ಬಿಜಿವಿಎಸ್ ಅಧ್ಯಕ್ಷ ಗೋಪಾಲಲ್ಬಹುಮಾನ ವಿತರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಭಾಗ್ಯ ಮತ್ತು ಸಭಾ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

