ಮತದಾನದ ಮಹತ್ವ ಅರಿಯಲು ಚರ್ಚಾ ಸ್ಪರ್ಧೆ
ಹಾಸನ: ಹೊಳೆರಸೀಪುರ ತಾಲೂಕು ಮತದಾರರ ಶಿಕ್ಷಣ ಮತ್ತು ಸಹಬಾಗಿತ್ವ ಸಮಿತಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೋಂದಿಗೆ ಶನಿವಾರ ಕಾಲೇಜಿನಲ್ಲಿ ಮತದಾನದ ಮಹತ್ವ ತಿಳಿಸುವ ಬಗ್ಗೆ ಚರ್ಚಾ ಸ್ವರ್ಧೆ ಏರ್ಪಡಿಸಲಾಗಿತ್ತು.
ಸ್ವೀಪ್ ಸಮಿತಿ ಉಸ್ತುವಾರಿ ಅಧಿಕಾರಿ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್. ನರಸಿಂಹಯ್ಯ ಮಾತನಾಡಿ, ಮತದಾನವು ನಮ್ಮ ಸಂವಿಧಾನ ಪ್ರಜೆಗಳಿಗೆ ನೀಡಿರುವ ಅಧಿಕಾರ. ಇದನ್ನು ಪ್ರತಿಯೊಬ್ಬರೂ ಸಮರ್ಪಕವಾಗಿ ಚಲಾಯಿಸಿದಾಗ ಪ್ರಜಾಪ್ರಭುತ್ವ ಸದೃಢವಾಗಲು ಸಾಧ್ಯ. ಏ. 17ರಂದು ಪ್ರತಿಯೊಬ್ಬ ಮತದಾರನೂ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ಎಂದು ಕರೆ ನೀಡಿದರು.
ಮತದ ಮಹತ್ವ: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮಾದಪ್ಪ ಮಾತನಾಡಿ, ಚುನಾವಣೆಯಲ್ಲಿ ಒಂದು ಮತದ ಅಂತರದಿಂದ ಸೋತ ಅಭ್ಯರ್ಥಿಗೆ ಅದರ ಮಹತ್ವ ಅರ್ಥವಾಗುತ್ತದೆ. ಆ ಮತಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕ ಟಿ.ಡಿ. ತಮ್ಮಣ್ಣ ಗೌಡ ಮಾತನಾಡಿ, ಒಂದು ಮತ ಒಂದು ಮೌಲ್ಯ ಪ್ರಜಾ ಪ್ರಭುತ್ವದ ಅಡಿಗಲ್ಲು ಜಾತಿ, ಧರ್ಮ, ಲಿಂಗ, ವರ್ಣ ಇತ್ಯಾದಿ ಹೊರತುಪಡಿಸಿ ಎಲ್ಲರಿಗೂ ಒಂದೇ ಮತದ ಅವಕಾಶವಿರುವುದು ನಮ್ಮ ದೇಶದ ಹೆಮ್ಮೆ. ಇಂಥ ಸದಾವಕಾಶವನ್ನು ಸದುಪಯೋಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಅದ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ಬಿ. ಇರ್ಷಾದ್ ಮಾತನಾಡಿ, ಮತದಾನದ ಮಹತ್ವದ ಬಗ್ಗೆ ಜನ ಜಾಗೃತಿ ಅತ್ಯವಶ್ಯಕ ಎಂದರು.
ಚರ್ಚಾ ಸ್ಪರ್ಧೆಯಲ್ಲಿ ಸುಮಾರು 36 ಜನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಪ್ರಥಮ ಸ್ಥಾನವನ್ನು ರವಿ ಎಸ್. ಕೆ. (ಅಂತಿಮ ಬಿ.ಕಾಂ.), ದ್ವಿತೀಯ ಸ್ಥಾನವನ್ನು ರೋಹಿಣಿ (ಆಂತಿಮ ಬಿ.ಎ), ತೃತೀಯ ಸ್ಥಾನವನ್ನು ದಿಲೀಪ್ ಬಿ.ಕೆ. (ಪ್ರಥಮ ಎಂ.ಕಾಂ.) ಗಳಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು, ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಇ. ಮಧುಸೂದನ್ ಾರ್ಯಕ್ರಮ ಆಯೋಜಿಸಿ ನೆರವೇರಿಸಿಕೊಟ್ಟರು. ಮಧುಸೂದನ್ ಸ್ವಾಗತಿಸಿದರು. ನಿಶ್ಚಿತ ವಂದಿಸಿದರು. ಫಯಾಜ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

