ಹಾಸನ

ಜಹೊನಾ ಮಾನವ ಧರ್ಮದ ಪ್ರತಿಪಾದಕ: ಡಾ. ರಾಜೇಗೌಡ

Published On :

ಹಾಸನ: ಸಾಹಿತಿ ಜ.ಹೊ. ನಾರಾಯಣಸ್ವಾಮಿ ಅವರು ಮಾನವಧರ್ಮದ ಪ್ರತಿಪಾದಕರಾಗಿದ್ದಾರೆ ಎಂದು ಜಾನಪದ ತಜ್ಞ ಡಾ. ರಾಜೇಗೌಡ ಹೊಸಹಳ್ಳಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜ.ಹೊ. ನಾರಾಯಣಸ್ವಾಮಿಯವರ ಚೈತನ್ಯದ ಪೂಜೆ, ಸಂಪ್ರಾದಯದ ನೇಣುಗಂಬ ಹಾಗೂ ಮನುಸ್ಮೃತಿ ಮತ್ತು ದಲಿತರು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಧರ್ಮದಲ್ಲಿರುವ ನ್ಯೂನತೆಗಳನ್ನು ಎತ್ತಿ ತೋರಿಸುತ್ತಾ ಅದನ್ನು ತಿದ್ದುವ ಪ್ರಕ್ರಿಯೆಯನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಜಹೊನಾ ಪ್ರಕೃತಿಯನ್ನು ಪೂಜಿಸುವ ಭೌತವಾದಿಗಳಾಗಿದ್ದಾರೆ ಎಂದರು.  ಚೈತನ್ಯದ ಪೂಜೆ ಕೃತಿಯನ್ನು ಕುರಿತು ಡಾ.ಸೀ.ಚ. ಯತೀಶ್ವರ್ ಮಾತನಾಡಿ ಕುವೆಂಪು, ವಿವೇಕಾನಂದ, ಅಂಬೇಡ್ಕರ್ ಸಿದ್ಧಾಂತಗಳಿಂದ ಪ್ರಭಾವಿತರಾಗಿರುವ ಜಹೊನಾರವರು ಕುವೆಂಪು, ತೇಜಸ್ವಿಯವರ ಒಡನಾಟವನ್ನು ಮತ್ತು ಅವರ ವಿಚಾರಧಾರೆಯನ್ನು ಕೃತಿಯಲ್ಲಿ ಬಿಂಬಿಸಿದ್ದಾರೆ. ಪ್ರಗತಿಯೆನ್ನುವುದು ವಿಜ್ಞಾನದ ಹೆಸರಿನಲ್ಲಿ ಅಜ್ಞಾನವನ್ನು ಅಪ್ಪಿಕೊಂಡು ನಡೆಯುತ್ತಿದ್ದು, ಇದರಿಂದಾಗಿ ಶಾಂತಿ, ಸಮಾಧಾನದ ಬದಲು ಅಶಾಂತಿ ಮತ್ತು ಆತಂಕಗಳಿಂದ ಸಮಾಜ ಸೊರಗುತ್ತಿದೆ  ಎಂದರು.
ಸಂಪ್ರದಾಯದ ನೇಣುಗಂಬ ಕೃತಿಯನ್ನು ಕುರಿತು ಮಾತನಾಡಿದ ಭಾರತಿದೇವಿ ಮೌಢ್ಯದ, ಮೋಸದ, ಆತ್ಮ ವಂಚನೆಯ ಕೊಳೆಯನ್ನು ವೈಚಾರಿಕತೆ ತೊಳೆದು ಬದುಕಿಗೆ ಬೆಳಕನ್ನು ನೀಡುತ್ತದೆ. ವಿಚಾರದಿಂದ ವಿಮೋಚನೆ ಎಂಬ ಸಾವಕಾಲಿಕ ಸತ್ಯವನ್ನು ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.