ರೈಲಿನಿಂದ ಬಿದ್ದು ವ್ಯಕ್ತಿ ಸಾವು
ಅರಸೀಕೆರೆ: ಪ್ರಯಾಣಿಕನೊಬ್ಬ ರೈಲಿನಿಂದ ಇಳಿಯಲು ಹೋಗಿ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಸಾವನಪ್ಪಿದ ಘಟನೆ ಸೋಮವಾರ ಸಂಜೆ ಪಟ್ಟಣದ ರೈಲು ನಿಲ್ದಾಣದಲ್ಲಿ ಸಂಭವಿಸಿದೆ. ಮೈಸೂರಿನಿಂದ ತಾಳಗುಪ್ಪಕ್ಕೆ ಹೋಗುವ ಇಂಟರ್ ಸಿಟಿ ಎಕ್ಸ್ಪ್ರಸ್ನಲ್ಲಿ ಮೈಸೂರಿನ ಯುವರಾಜ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಿಲೇಶ್ (19) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿರುವ ಅವರ ಅಕ್ಕ ಶೈಲಾ ತಮ್ಮನಿಗಾಗಿ ಲ್ಯಾಬ್ಟಾಪ್ ಕೊಡಲು ಅರಸೀಕೆರೆ ನಿಲ್ದಾಣಕ್ಕೆ ಬಂದಾಗ ಅಕ್ಕನನ್ನು ನೋಡಿದ ನೀಲೇಶ್ ಚಲಿಸುತ್ತಿದ್ದ ರೈಲಿನಿಂದ ಪ್ಲಾಟ್ಫಾರಂ ಇಲ್ಲದ ಕಡೆ ಇಳಿಯಲು ಪ್ರಯತ್ನಿಸಿದಾಗ ರೈಲಿಗೆ ಸಿಲುಕಿದರಿಂದ ಈ ದುರ್ಘಟನೆ ನಡೆದಿದೆ.
ಸಾರ್ವಜನಿಕರ ಆಕ್ರೋಶ: ರೈಲು ಚಾಲಕರು ನಿಲ್ದಾಣದ ಪ್ಲಾಟ್ಫಾರಂ ಬಿಟ್ಟು ಮುಂದೆ ಹೋಗಿ ನಿಲ್ಲಿಸುತ್ತಿರುವುದರಿಂದ ಇಂತಹ ಅಪಘಾತಗಳು ಸಂಭವಿಸುತ್ತಿದ್ದು ರೈಲು ಪ್ಲಾಟ್ಫಾರಂ ಇರುವ ಕಡೆ ನಿಂತಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪರಿಚಿತ ಮಹಿಳೆ ಶವ ಪತ್ತೆ
ಮೈಸೂರು: ಶ್ರೀರಂಗಪಟ್ಟಣ- ನಾಗೇನಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ಮಾ. 22 ರಂದು ಸುಮಾರು 50 ವರ್ಷದ ಅಪರಿಚಿತ ಮಹಿಳೆ ಮೃತಪಟ್ಟಿದ್ದಾರೆ. ಮೃತ ಮಹಿಳೆಯು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಎಡಗೈಯಲ್ಲಿ ಜವನಮ್ಮ ಎಂಬ ಹಚ್ಚೆ ಗುರುತು ಮತ್ತು ಬಲಗೈಯಲ್ಲಿ ಪಂಚಾಕ್ಷರಿ ಎಂಬ ಹಚ್ಚೆ ಗುರುತು ಇದೆ. ಕೆಂಪು ಬಣ್ಣದ ತುಂಬು ತೋಳಿನ ಸ್ವೆಟರ್, ನೀಲಿ ಬಣ್ಣದ ರವಿಕೆ, ಹಳದಿ ಬಣ್ಣದ ಕೆಂಪು ಹೂಗಳ್ಳುಳ್ಳ ಕಪ್ಪು ಮಿಶ್ರಿತ ಅಂಚುಳ್ಳ ಸೀರೆ, ತಿಳಿನೀಲಿ ಬಣ್ಣದ ಲಂಗ ಧರಿಸಿದ್ದಾರೆ. ಮೃತ ಮಹಿಳೆಯ ದೇಹವನ್ನು ಮೈಸೂರಿನ ವೈದ್ಯಕೀಯ ಕಾಲೇಜು ಶವಾಗಾರದಲ್ಲಿಡಲಾಗಿದೆ. ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿ, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂ. 0821- 2516579 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

