ಹಾಸನ

ಪುರಸಭೆಗೆ ರು. 75 ಲಕ್ಷ ಬಾಡಿಗೆ ಬಾಕಿ

Published On :

ಬೇಲೂರು: ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಯ ಸಮೀಪ ಮೂಲ ಸೌಲಭ್ಯ ನೀಡಿಲ್ಲ ಎಂಬ ಕಾರಣ ನೀಡಿ, ಅಂಗಡಿ ಮಾಲಿಕರು ಇಲ್ಲಿಯ ತನಕ ಸುಮಾರು 75  ಲಕ್ಷ ರು. ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಪುರಸಭಾ ಅಧ್ಯಕ್ಷ ಬಿ.ಗಿರೀಶ್ ತಿಳಿಸಿದರು.
ಪಟ್ಟಣದ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಯಲ್ಲಿ ಕೆಲ ಅಂಗಡಿ ಮಾಲಿಕರು ಬಾಡಿಗೆ ಕಟ್ಟದ ಕಾರಣ ಪುರಸಭೆ ಅಧಿಕಾರಿಗಳು ಬೀಗ ಹಾಕಿದ ನಂತರ ಪುರಸಭಾ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಐಡಿಎಸ್‌ಎಂಟಿ ನಿಗಮದಿಂದ ಸುಮಾರು 2. 75 ಕೋಟಿ ರು. ಸಾಲ ತಂದು ಮಳಿಗೆ ನಿರ್ಮಾಣ ಮಾಡಲಾಗಿದೆ, ಈ ಸಾಲವನ್ನು ಅಯಾ ವಾಣಿಜ್ಯ ಮಳಿಗೆಯ ಬಾಡಿಗೆಯಲ್ಲಿ ಮರು ಪಾವತಿ ಮಾಡಬೇಕು ಎಂಬ ನಿಯಮವಿದ್ದರು, ಸದರಿ ಅಂಗಡಿ ಮಾಲಿಕರು ಬಾಡಿಗೆ ಹಣ ಪಾವತಿ ಮಾಡಲು ಹಿಂದೇಟು ಹಾಕುತಿದ್ದಾರೆ. ಇದರಿಂದ ಪುರಸಭೆಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ಹೇಳಿದರು.
ಮಳಿಗೆಗಳ ಮಾಲಿಕರು ಇದನ್ನು ಅರಿತು ಉಳಿಸಿಕೊಂಡಿರುವ ಬಾಡಿಗೆಯ ಹಣದಲ್ಲಿ ಶೇ.50 ರಷ್ಟು ಮೊದಲು ಕಟ್ಟಿ ನಂತರದಲ್ಲಿ ಪ್ರತಿ ತಿಂಗಳು ಎರಡು ತಿಂಗಳ ಬಾಡಿಗೆ ಹಣ ಪಾವತಿ ಮಾಡಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.