ಹಾಸನ

ಉನ್ನತಿ, ಅವನತಿಗೆ ಹೆಣ್ಣೇ ಕಾರಣ: ರೇಣುಕಾ ಪ್ರಭು

Published On :

ಹಾಸನ: ಹೆಣ್ಣು ಬೆಳಕಾಗಿ ಜ್ಯೋತಿಯಂತೆ ಪ್ರಜ್ವಲಿಸಲೂ ಬಲ್ಲಳೂ ಹಾಗೂ ಕಿಡಿಯಾಗಿ ನಾಶಕ್ಕೂ ಕಾರಣಳಾಗಬಲ್ಲಳು ಎಂದು ಕವಯತ್ರಿ ರೇಣುಕಾಪ್ರಭು ವಿಮರ್ಶಿಸಿದ್ದಾರೆ.
ಇಲ್ಲಿನ ಶಾಂತಿನಗರದ ಪ್ರಕೃತಿ ಮಹಿಳಾ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣನ್ನು ಗೌರವಿಸುವುದು ಸಮಾಜದ ಹಾಗೂ ಕುಟುಂಬದ ಕರ್ತವ್ಯವಾಗಿದೆ ಎಂದು ತಾವು ಹೆಣ್ಣನ್ನು ಕುರಿತು ಬರೆದಿರುವ ಎರಡೂ ಕವನಗಳನ್ನು ಸ್ಮರಿಸಿದರು.
ಅತ್ತೆ, ಸೊಸೆ ಒಂದಾಗಬೇಕು: ಮೃತವೂ ಹೆಚ್ಚು ಸೇವಿಸಿದರೆ ವಿಷವಾಗುತ್ತದೆ ಎಂದು ಮಾರ್ಮಿಕವಾಗಿ ಎಚ್ಚರಿಸಿದ  ಅವರು, ವಿವಾಹವೆಂಬುದು ಒಂದು ಮರದ ತೊಗಟೆಯನ್ನು ಇನ್ನೊಂದು ಮರಕ್ಕೆ  ಕಸಿ ಮಾಡಿ ಸೇರಿಸುವ ಕೆಲಸದಂತೆ. ಅದು ಅಷ್ಟು ಸುಲಭವಾದ ಸಂಗತಿಯಲ್ಲ.  ಕುಟುಂಬವೆಂದರೆ ಸಮಸ್ಯೆಗಳು ಬರುವುದು ಸಹಜ. ಅತ್ತೆ, ಸೊಸೆ ಒಂದಾದರೆ ಮನೆಯನ್ನು ಭದ್ರವಾಗಿ ಕಟ್ಟಲು ಸಾಧ್ಯ ಎಂದು ಹೇಳಿದರು.
ಸಾಮರಸ್ಯ ಅಗತ್ಯ: ಮನೆತನ ಮುಂದುವರಿಸುವುದು ವೈವಾಹಿಕ ಸಂಬಂಧದ ಮೂಲ ಉದ್ದೇಶವಾಗಿದ್ದು, ಹೊಂದಾಣಿಕೆ ತುಂಬಾ ಮುಖ್ಯ. ಸಾಮರಸ್ಯ ಅಗತ್ಯ ಎಂದು ತಿಳಿ ಹೇಳಿದರು.
ಕಿವಿಮಾತು: ಅಕ್ಕಯ್ಯಮ್ಮ ಸುಬ್ಬೇಗೌಡ ಮಾತನಾಡಿ, ಹೆಣ್ಣು ಅಂತರಂಗದ ಬಂಧನ ಕಳಚಿ ಕೊಳ್ಳಬೇಕಿದೆ. ಹೆಣ್ಣು ಆಬಲೆಯಲ್ಲ, ಸಬಲೆ ಎಂಬುದನ್ನು ತೋರಿಸಿಕೊಡಬೇಕಿದೆ ಎಂದು ಕಿವಿಮಾತು ಹೇಳಿದರು.  ಕೆಂಪುಚೆಲುವಾಜಮ್ಮಣ್ಣಿ ಮಹಿಳಾ ಸಮಾಜದ ಪ್ರಧಾನ ಕಾರ್ಯದರ್ಶಿ   ಲೀಲಾವತಿ ಆಧ್ಯಕ್ಷತೆ ವಹಿಸಿದ್ದರು. ಸಮಾಜದ ಅಧ್ಯಕ್ಷೆ ಪ್ರೇಮ ಬೋರೇಗೌಡ ನಿರೂಪಿಸಿ, ಸಮಾಜದ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಗೀತ ಮಂಜುಳ, ಪ್ರೇಮ ಪ್ರಾರ್ಥಿ ಸಿದರು. ಸಾವಿತ್ರಮ್ಮ ಹನುಮಂತೇ ಗೌಡ ಸ್ವಾಗತಿಸಿದರು. ಸವಿತಾ ವಾಸುದೇ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.