ಮೈಸೂರು ಘೋಷಣೆಗೆ ಅಂತಾರಾಷ್ಟ್ರೀಯ ಮಾನ್ಯತೆ
ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಹಾಗೂ ಬ್ಯಾಂಗಲ್ ವಿಶ್ವವಿದ್ಯಾಲಯವು ಮೈಸೂರು ಘೋಷಣೆ (ಮೈಸೂರು ಡಿಕ್ಲರೇಷನ್) ಎಂಬ ಮನೋರೋಗಿಗಳ ಮಾನವ ಹಕ್ಕುಗಳ ಕಾಪಾಡುವ ಕರಡುಪತ್ರವನ್ನು ಪ್ರಕಟಿಸಿದ್ದು, ಇದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ ಎಂದು ಮೈಸೂರು ವೈದ್ಯಕೀಯ ಕಾಲೇಜಿನ ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್. ರವೀಶ್ ಹೇಳಿದರು.
ಮನೋರೋಗ ಚಿಕಿತ್ಸೆಗೆ ಹೊಸ ಮಾನಸಿಕ ಆರೋಗ್ಯ ಮಸೂದೆ ಸಂಸತ್ನಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗಿದೆ. ದಕ್ಷಿಣ ಮತ್ತು ಪೂರ್ವ ಏಷ್ಯಾದಲ್ಲಿ ಮೈಸೂರು ಪ್ರಕಟಣೆಯನ್ನು ಪರಿಗಣಿಸಿ, ಬ್ರಿಟಿಷ್ ಕೌನ್ಸಿಲ್ 1 ವರ್ಷದ ಆರ್ಥಿಕ ಸಹಾಯ ನೀಡುತ್ತಿದೆ. ಈ ಕಾರ್ಯ ಯೋಜನೆಯನ್ನು ಇನ್ನೂ 5 ಹಂತದಲ್ಲಿ ಸಮಾಜಕ್ಕೆ ತರಲು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಬ್ಯಾಂಗರ್ ವಿವಿ ಒಪ್ಪಂದ ಮಾಡಿಕೊಂಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರಿನಲ್ಲಿ ಮಾನಸಿಕ ರೋಗಿಗಳಿಗೆ ಬಲತ್ಕಾರಾದ ಚಿಕಿತ್ಸೆ ಕುರಿತು ಇಂಡೋ- ಯುರೋಪಿಯನ್ ಕಾರ್ಯಾಗಾರವನ್ನು ಮಾ.24 ಮತ್ತು 25 ರಂದು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ದೇಶದ 30 ಮಂದಿ ಮಾನಸಿಕ ತಜ್ಞರು ಪಾಲ್ಗೊಂಡಿದ್ದರು. ಮಾನಸಿಕ ರೋಗದ ಚಿಕಿತ್ಸೆಗೆ ಪಾಲಿಸುತ್ತಿರುವ ವಿಧಾನ, ಮಾನವ ಹಕ್ಕು ಉಲ್ಲಂಘನೆ ತಡೆಯುವುದು, ಅದರ ನಿರ್ವಹಣೆ, ನಿರ್ಧಾರ, ಯಾವ ಸಂದರ್ಭದಲ್ಲಿ ಕಾನೂನು ಚೌಕಟ್ಟಿನಲ್ಲಿ ಚಿಕಿತ್ಸೆ ನೀಡಬೇಕು ಮೊದಲಾದ ವಿಚಾರಗಳ ಕುರಿತು ಚರ್ಚಿಸಲಾಯಿತು ಎಂದು ಹೇಳಿದರು.
ಮನೋರೋಗಿಗಳಿಗೆ ಮಾನವೀಯ, ಸಮಾನವಾದ ಕನಿಷ್ಠ ಸೇವೆ, ಮಾನವ ಹಕ್ಕಿಗೆ ಚ್ಯುತಿ ಬಾರದಂತೆ ಚಿಕಿತ್ಸೆ ನೀಡುವುದು, ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರ ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.
ಬ್ಯಾಂಗಲ್ ವಿವಿ ಗೌರವ ಪ್ರಾಧ್ಯಾಪಕ ಹಾಗೂ ಮನೋರೋಗ ತಜ್ಞ ಡಾ.ಪೀಟರ್ ಲೆಪ್ಪಿಂಗ್, ಕಾನೂನು ಮನೋವೈದ್ಯ ಡಾ. ಟಾಮ್ ಫಾರ್ಮಿಸ್ಟರ್ನಾ, ಮನೋವೈದ್ಯ ಡಾ. ಮುರಳಿಕೃಷ್ಣ ಇದ್ದರು.
ಹೆಚ್ಚಿನ ಮಾಹಿತಿಗಾಗಿ ಢಿಢಿಢಿ.ಟಣಡ್ಟ್ಠಜ್ಛ್ಟಜ್ಠ್ಛ್ಝ್ಟಟಿ.್ಛ್ಟಟ ವೆಬ್ಸೈಟ್ ನೋಡಬಹುದು.
ಗೌಡರ ಕೈ ಬಲಪಡಿಸಿ
ಮೈಸೂರು: ದೇಶದ ಪ್ರಧಾನಮಂತ್ರಿಯಾಗಿ 10 ತಿಂಗಳು ಸ್ವಚ್ಛ ಆಡಳಿತ ನೀಡಿದ ಎಚ್.ಡಿ. ದೇವೇಗೌಡರ ಕೈ ಬಲಪಡಿಸುವಂತೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ ಮನವಿ ಮಾಡಿದರು.
ನಗರದಲ್ಲಿ ಪಕ್ಷದ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ತಾವು ಈಗ ರಾಜಕೀಯ ಪ್ರವೇಶಿಸಿದ್ದೇನೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು. ಅಲ್ಲದೇ ಒಬ್ಬರೇ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಈಗ ನಾನು ಪಕ್ಷದ ಒಂದು ಭಾಗವಾಗಿದ್ದು ಗೆಲವು ತಂದುಕೊಡಲು ಸ್ಪರ್ಧಿಸಿದ್ದೇನೆ. ಕಾರ್ಯಕರ್ತರು ಹೋರಾಡಿ ತಮ್ಮನ್ನು ಆಯ್ಕೆ ಮಾಡುವಂತೆ ಕೋರಿದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ನಮ್ಮ ಪಕ್ಷದ ಕಾರ್ಯಕರ್ತರು ನಮಗೆ ಸೈನಿಕರಿದ್ದಂತೆ. ಈಗ ನಮ್ಮ ಅಭ್ಯರ್ಥಿ ಘೋಷಣೆಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ದುಡಿದು ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಶಾಸಕ ಸಾ.ರಾ. ಮಹೇಶ್, ನಗರಾಧ್ಯಕ್ಷ ರಾಜಣ್ಣ, ಮುಖಂಡ ನರಸಿಂಹಸ್ವಾಮಿ, ಎಸ್ಬಿಎಂ ಮಂಜು, ವೇಣುಗೋಪಾಲ್, ಮಂಜುನಾಥ್, ನಟರಾಜ್, ರವಿಚಂದ್ರೇಗೌಡ ಭಾಗವಹಿಸಿದ್ದರು. ಇದೇ ವೇಳೆ 150ಕ್ಕೂ ಹೆಚ್ಚು ಮಂದಿ ನಗರ ವಿದ್ಯಾರ್ಥಿ ಘಟಕಕ್ಕೆ ನೇಮಿಸಿ ನೇಮಕ ಪತ್ರ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

