ವಿದ್ಯಾರ್ಥಿಗಳಿಗೆ ವ್ಯಾವಹಾರಿಕ ಜ್ಞಾನ ಅಗತ್ಯ
ಕ.ಪ್ರ.ವಾರ್ತೆ, ಜಾವಗಲ್, ಮಾ. 26
ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಮೂಡಿಸುವುದು ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಿದೆ ಎಂದು ಪ್ರಾಂಶುಪಾಲ ಡಾ. ಕೆ ಭಾಷಾ ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಆಹಾರಮೇಳ ಕಾರ್ಯಕ್ರಮವನ್ನು ರುಚಿಯಾದ ತಿನಿಸುಗಳನ್ನು ಸವಿಯುವ ಮೂಲಕ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ 1 ವರ್ಷದಲ್ಲಿ 15ರಿಂದ 20 ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗಬೇಕಾಗಿದ್ದು, ಇಷ್ಟೊಂದು ಪ್ರಮಾಣದ ಉದ್ಯೊಗವನ್ನು ಸರ್ಕಾರವಾಗಲಿ, ಕಾರ್ಪೊರೇಟ್ ವಲಯವಾಗಲಿ ಸೃಷ್ಟಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಯುವ ಜನತೆ ಸ್ವಯಂ ಉದ್ಯೋಗವನ್ನು ಕೈಗೆತ್ತಿಕೊಳ್ಳುವ ಮೂಲಕ ಉದ್ಯೋಗ ಸೃಷ್ಟಿಕರ್ತರಾಗಬೇಕಾಗಿದೆ ಎಂದರು.
ಕಾಲೇಜಿನ ಆವರಣದಲ್ಲಿ ಸಂತೃಪ್ತಿ ಊಟದ ಹೋಟೆಲ್, ಕ್ಯಾಂಟೀನ್, ಐಸ್ಕ್ರೀಮ್, ಕಾಫಿ, ಟೀ, ಜ್ಯೂಸ್, ತಂಪುಪಾನಿಯಗಳು, ಎಳನೀರು, ಪಾನೀಪುರಿ, ಮಸಾಲೆಪುರಿ, ಬೇಲ್ಪುರಿ, ಸಮೋಸ, ಜಾಮೂನ್, ಕರಗಡಬು, ಕಾರಾ-ಸಿಹಿ ಪೊಂಗಲ್ ಸ್ಟಾಲ್, ಪಾಯಸ, ಫ್ರೂಟ್ಸಾಲಿಡ್, ಸಾಂಪ್ರದಾಯಿಕ ಅಡುಗೆಗಳಾದ ಚಿತ್ರಾನ್ನ, ಪುಲಾವ್, ಪುಳಿಯೊಗರೆ, ಮೊಸರನ್ನ, ಬೋಂಡ, ಬಜ್ಜಿ ಹಾಗೂ ಪೌಷ್ಟಿಕಾಂಶವುಳ್ಳ ಮೊಳಕೆಕಾಳುಗಳ ಕೋಸಂಬರಿ, ವಲಯವಾಗಲಿ ಸೃಷ್ಟಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಯುವ ಜನತೆ ಸ್ವಯಂ ಉದ್ಯೋಗವನ್ನು ಕೈಗೆತ್ತಿಕೊಳ್ಳುವ ಮೂಲಕ ಉದ್ಯೋಗ ಸೃಷ್ಟಿಕರ್ತರಾಗಬೇಕಾಗಿದೆ ಎಂದರು. ಕಾಲೇಜಿನ ಆವರಣದಲ್ಲಿ ಸಂತಣಪ್ತಿ ಊಟದ ಹೋಟೆಲ್, ಕ್ಯಾಂಟೀನ್, ಐಸ್ ಕ್ರೀಮ್, ಕಾಫಿ, ಟೀ, ಜ್ಯೂಸ್, ತಂಪುಪಾನಿಯಗಳು, ಎಳನೀರು, ಪಾನೀಪುರಿ, ಮಸಾಲೆಪುರಿ, ಬೇಲ್ಪುರಿ, ಸಮೋಸ, ಜಾಮೂನ್, ಕರಗಡಬು, ರಾಗೀಅಂಬಲಿ, ಗಿಣ್ಣ, ಹಲ್ವ, ಕಾರಾ-ಸಿಹಿ ಪೊಂಗಲ್ ಸ್ಟಾಲ್, ಪಾಯಸ, ಫ್ರೂಟ್ಸಾಲಿಡ್, ಸಾಂಪ್ರದಾಯಿಕ ಅಡುಗೆಗಳಾದ ಚಿತ್ರಾನ್ನ, ಪಲಾವ್, ಪುಳಿಯೊಗರೆ, ಮೊಸರನ್ನ, ಬೋಂಡ, ಬಜ್ಜಿ ಹಾಗೂ ಪೌಷ್ಟಿಕಾಂಶವುಳ್ಳ ಮೊಳಕೆಕಾಳುಗಳ ಕೋಸಂಬರಿ, ಮಾವಿನಕಾಯಿ, ಸೌತೇಕಾಯಿ ಪೀಸುಗಳು ಸೇರಿದಂತೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ವಿದ್ಯಾರ್ಥಿಗಳು ತಯಾರಿಸಿಕೊಂಡು ಬಂದು ಮಾರಾಟ ಮಾಡಿದರು.
ಉಪನ್ಯಾಸಕರಾದ ದಿಲೀಪ್, ಪ್ರಿಯಾಂಕ, ಸಿ.ಎಸ್. ಸೌಮ್ಯ, ಲೋಕೇಗೌಡ, ಎನ್. ಸೌಮ್ಯ, ವಿಶ್ವನಾಥ್, ಲೋಕೇಗೌಡ, ಕುತ್ಸಿಯಾಪರ್ವಿನ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಭರ್ಜರಿಯಾಗಿ ವ್ಯಾಪಾರ ಮಾಡಿದರು. ಕೇವಲ 20 ರು.ಗೆ 1 ಊಟದ ವ್ಯವಸ್ಥೆಮಾಡಲಾಗಿತ್ತು. ಹೆಚ್ಚು ಗ್ರಾಹಗರನ್ನು ಸೆಳೆಯಿತು. ಕಾಲೇಜಿನ ಆವರಣದಲ್ಲಿ ಆಹಾರ ಮೇಳವು ಬಹಳ ಅಚ್ಚುಕಟ್ಟಿನಿಂದ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

