ಹದಗೆಟ್ಟ ಚೀಲನಾಯ್ಕನಹಳ್ಳಿ ರಸ್ತೆ
ಹಳೇಬೀಡು: ಹಳೇಬೀಡು ಗ್ರಾಮಪಂಚಾಯಿತಿಗೆ ಸೇರಿದ ಚೀಲನಾಯ್ಕನಹಳ್ಳಿ - ಹಳೇಬೀಡು ಡಾಂಬರು ರಸ್ತೆ ತೀವ್ರ ಹದಗೆಟ್ಟಿದೆ.
ಫಾರಂ ಗಡಿಯಿಂದ ಎಲೆಹಂಕ ನಡುವಿನ 7 ಕಿ.ಮೀ. ರಸ್ತೆಗೆ ಡಾಂಬರ್ ಹಾಕಲು ಆದೇಶ ನೀಡಿದ್ದರೂ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ. ಇಲ್ಲಿಯ ಹೊಯ್ಸಳರ ಕಾಲದ ದಕ್ಷಿಣ ಕಾಶಿ ಎಂದು ಹೆಸರು ಪಡೆದಿರುವ ತೀರ್ಥಮಲ್ಲಿಕಾರ್ಜುನ ದೇಗುಲಕ್ಕೆ ಸರ್ಕಾರದ ನೆರವು ಅವಶ್ಯವಿದೆ. ಇದೊಂದು ಉತ್ತಮ ಪ್ರವಾಸಿ ಕೇಂದ್ರ ವಾಗುವ ಅರ್ಹತೆ ಪಡೆದಿರುವುದರಿಂದ ಪುರಾತತ್ವ ಇಲಾಖೆ ಹೆಚ್ಚಿನ ಗಮನಹರಿಸಲು ಒತ್ತಾಯಿಸಿದೆ.
ಹಳೇಬೀಡು ಬೆಣ್ಣೆಗುಡ್ಡೆ- ಚೀಲನಾಯ್ಕನಹಳ್ಳಿ ಹಳೇಬೀಡು- ತಿಮ್ಮನ ಕಟ್ಟೆ ಹಾಗೂ ಫಾರಂ ಗಡಿಯಿಂದ ಚೀಲನಾಯ್ಕನಹಳ್ಳಿ ಮೂರು ಕಡೆಯಿಂದ ಉತ್ತಮ ರಸ್ತೆ ಈ ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಅವಶ್ಯವಿದೆ. ಕೂಡಲೇ ವ್ಯವಸ್ಥೆಗಾಗಿ ಇಲ್ಲಿಯ ಗ್ರಾಮದ ಜನತೆ ಒತ್ತಾಯ ಮಾಡಿದೆ. ಇತ್ತೀಚೆಗೆ ಪುಷ್ಪ ಗಿರಿ ಸಂಸ್ಥಾನದ ಮಠಾಧೀಶರಾದ ಸೋಮ ಶೇಖರ ಶಿವಾಚಾರ್ಯ ಸ್ವಾಮೀಜಿ ದೇಗುಲಕ್ಕೆ ಭೇಟಿ ನೀಡಿ ದೇವಾಲಯ ಅಭಿವೃದ್ಧಿ ಬಗ್ಗೆ ಹೆಚ್ಚು ಒತ್ತು ನೀಡುವ ಭರವಸೆ ನೀಡಿದ್ದು, ಗ್ರಾಮದ ಜನತೆಗೆ ಆಶಾದಾಯಕ ವಾತಾವರಣ ಕಂಡಿದೆ.
250 ಮನೆ ಮತ್ತು 820 ಮತದಾರರನ್ನು ಹೊಂದಿರುವ ಗ್ರಾಮ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ, ಹಾಲಿನ ಡೈರಿಗಳು ಉತ್ತಮ ಕಾರ್ಯ ನಿರ್ವಹಣೆಯಲ್ಲಿದೆ.
ಇಲ್ಲಿಯ ಗ್ರಾಮದೇವತೆಗಾಗಿ 2 ಚಕ್ರದ ವಿಶೇಷ ರಥವಿದೆ. ಕುಡಿಯುವ ನೀರಿಗಾಗಿ ಯಗಚಿ ಅಣೆಕಟ್ಟಿನಿಂದ ಸೌಲಭ್ಯ ಕಲ್ಪಿಸಿ ರುವುದರಿಂದ ಸದ್ಯಕ್ಕೆ ನೀರಿನ ಬವಣೆ ತಪ್ಪಿದೆ. ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಜಾನುವಾರುಗಳು ತೀವ್ರ ತೊಂದರೆ ಅನುಭವಿಸುತ್ತಿದೆ. ಕರೆಂಟ್ ಕಣ್ಣಾ ಮುಚ್ಚಾಲೆ ಆಟ ಶುರು ಮಾಡಿದೆ. ಬೀದಿ ದೀಪ ವ್ಯವಸ್ಥೆ ಸುಧಾರಣೆ ಕಂಡು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

