ಹಾಸನ

ಕಾಂಗ್ರೆಸ್‌ಗೆ ಸಿಗೋದು ಕೇವಲ 70- 80 ಸ್ಥಾನ

Published On :

ಹಾಸನ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೇವಲ 70ರಿಂದ 80 ಸ್ಥಾನ ದೊರಕಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶ್ಲೇಷಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬ್ಮಹಾಂಡ ಭ್ರಷ್ಟಾಚಾರದಿಂದ ಜನ ತೀವ್ರ ಬೇಸತ್ತಿದ್ದಾರೆ. ಎಲ್ಲವನ್ನೂ ಕಾಲವೇ ನಿರ್ಣಯ ಮಾಡುತ್ತದೆ ಎಂದು ಅವರು ಹೇಳಿದರು.
ಮಹಿಳೆಯರಿಗೆ ಮೀಸಲಾತಿಯಿಲ್ಲ: ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ಇಲ್ಲಿಯವರೆಗೂ ಮಹಿಳೆಯರಿಗೆ ಯಾವ ಮೀಸಲಾತಿಯನ್ನೂ ನೀಡಿಲ್ಲ. ಸೋನಿಯಾ ಗಾಂಧಿ ಅವರ ಅಧಿಪತ್ಯ 10 ವರ್ಷದಿಂದ ನಡೆಯುತ್ತಿದೆಯಷ್ಟೆ. ಆದರೆ, ಇಲ್ಲಿಯವರೆಗೂ ಮಹಿಳೆಯರ ಬಗ್ಗೆ ಯಾವ ಕನಿಕರವೂ ಅವರಿಗೆ ಬಂದಿಲ್ಲ. ಈಗ, ಉತ್ತರ ಪ್ರದೇಶ ಸೇರಿದಂತೆ ಇತರೆ ಭಾಗಗಳಲ್ಲಿ ಕಾಂಗ್ರೆಸ್ ಗತಿ ಏನಾಗಿದೆ ಎಂದು ಅವರು ಪ್ರಶ್ನಿಸಿದರು.
ಭತ್ಯೆ, ಪಿಂಚಣಿ ಬೇಡ: ಲೋಕಸಭೆಗೆ ಹೋಗುವುದು ಟಿಎ, ಡಿಎಗಾಗಿ ಅಲ್ಲ ಎಂದ ಅವರು, ಅಂತಹ ಉದ್ದೇಶದಲ್ಲಿ ಎಂದೂ ಹೋಗಿಲ್ಲ. ಮಾಜಿ ಲೋಕಸಭಾ ಸದಸ್ಯರಿಗೆ ನೀಡಲಾಗುವ ಪಿಂಚಣಿಯನ್ನೂ ನಾನು ನಿರಾಕರಿಸಿದ್ದೇನೆ ಎಂದರು.
   ನನಗೆ 50 ವರ್ಷದ ರಾಜಕೀಯ ಅನುಭವ ಇದ್ದು, ಜನರ ಋಣ ತೀರಿಸಿ ದೇವರು ಕರೆದಾಗ ಹೋಗುವೆನೆಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.