16 ನಾಮಪತ್ರ ಅಂಗೀಕೃತ
ಹಾಸನ: ಹಾಸನ ಲೋಕಸಭಾ ಕ್ಷೇತ್ರದ ನಾಮಪತ್ರಗಳ ಪರಿಶೀಲನಾ ಕಾರ್ಯ ಗುರುವಾರ ಮುಕ್ತಾಯಗೊಂಡಿದ್ದು, ಒಟ್ಟು ಸಲ್ಲಿಕೆಯಾಗಿದ್ದ 44 ನಾಮಪತ್ರಗಳಲ್ಲಿ 34 ಅಂಗೀಕೃತವಾಗಿದ್ದು, 10 ನಾಮಪತ್ರಗಳು ತಿರಸ್ಕೃತವಾಗಿವೆ.
23 ಅಭ್ಯರ್ಥಿಗಳು 44 ನಾಮಪತ್ರಗಳನ್ನು ಸಲ್ಲಿಸಿದ್ದರು. ಆ ಪೈಕಿ 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ. ಉಳಿದ 16 ಮಂದಿ ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕೃತವಾಗಿದೆ. ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಚುನಾವಣಾ ವೀಕ್ಷಕ ರಘುವೀರ್ ಶ್ರೀವಾಸ್ತವ್ ಹಾಗೂ ಅಭ್ಯರ್ಥಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಾಮಪತ್ರಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಹಾಸನ ಲೋಕಸಭಾ ಚುನಾವಣೆಗೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಟಿ.ಜೆ. ಅಬ್ರಹಾಂ, ಕೆ.ಆರ್. ಗಂಗಾಧರಪ್ಪ, ಎಚ್.ಜೆ. ಉಷಾ,.ಹೊ.ತಿ. ಹುಚ್ಚಪ್ಪ, ಕೆಂಪಯ್ಯ. ಎಂ. ರಾಮಯ್ಯ, ಶಿವಾನಂದ ಅವರ ನಾಮಪತ್ರಗಳು ಅಸಮರ್ಪಕವಾಗಿರುವ ಕಾರಣ ತಿರಸ್ಕಾರಗೊಂಡಿರುವುದಾಗಿ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ. ಟಿ.ಡಿ. ಜಗದೀಶ್ ಅವರು ಕ್ರಮಸಂಖ್ಯೆ 24ರಲ್ಲಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ಆದರೆ ಕ್ರಮಸಂಖ್ಯೆ 38ರಲ್ಲಿ ಸಲ್ಲಿಸಿರುವ ಅರ್ಜಿ ಸರಿಯಿದ್ದು, ಅದು ಅಂಗೀಕಾರಗೊಂಡಿದೆ. ನಾಮಪತ್ರ ಸಹಿ ಸಮರ್ಪಕವಾಗಿ ಇಲ್ಲದ ಕಾರಣ ಮಾಹಿತಿ ಹಕ್ಕು ಹೋರಾಟಗಾರ ಟಿ.ಜೆ. ಅಬ್ರಹಾಂ ಅವರು, 10 ಸೂಚಕರಲ್ಲಿ ಓರ್ವರ ಮಾಹಿತಿ ಸರಿಯಿಲ್ಲದ ಕಾರಣ ಅಂಧ ರಾಮಯ್ಯ ಅವರ ನಾಮಪತ್ರ ತಿರಸ್ಕೃತವಾಗಿದೆ.
ಖಾಲಿ ನಾಮಪತ್ರ: ಪಕ್ಷೇತರಾಗಿ ಸ್ಪರ್ಧಿಸಲು ಬಯಸಿದ್ದ ಶಿವಾನಂದ ಅವರು ನಾಮಪತ್ರ ಸಲ್ಲಿಸುವ ಅರ್ಜಿಯನ್ನು ಭರ್ತಿ ಮಾಡದೇ ಖಾಲಿ ಕೊಟ್ಟಿದ್ದರು. ಈ ಕಾರಣ ತಿರಸ್ಕೃತವಾಗಿದೆ.
ಅಂಗೀಕೃತ: ಉಳಿದಂತೆ ಮಾಜಿ ಎಚ್.ಡಿ. ದೇವೇಗೌಡ (ಜೆಡಿಎಸ್ ), ಸಿ.ಎಚ್. ವಿಜಯಶಂಕರ್ (ಬಿಜೆಪಿ), ಎ. ಮಂಜು (ಕಾಂಗ್ರೆಸ್), ಎ.ಪಿ. ಅಹಮದ್ (ಬಿಎಸ್ಪಿ), ಸಂತೋಷ್ ಮೋಹನ್ (ಆಮ್ ಆದ್ಮಿ), ಡಾ. ಭಾನುಪ್ರಕಾಶ್ ಕೆ. (ಪಕ್ಷೇತರ), ಬಿ.ಟಿ. ಗಿರೀಶ್ (ಪಕ್ಷೇತರ), ಎಂ. ಮಹೇಶ್ (ಪಕ್ಷೇತರ), ಪುಟ್ಟಯ್ಯ (ಪಕ್ಷೇತರ), ಮಂಜುನಾಥ್ (ಪಕ್ಷೇತರ), ಎಚ್.ಡಿ. ರೇವಣ್ಣ (ಪಕ್ಷೇತರ), ಬಿ.ಡಿ. ಜಗದೀಶ್ (ಪಕ್ಷೇತರ) ಜವರಯ್ಯ (ಪಕ್ಷೇತರ), ಎಸ್.ಎನ್. ಮಲ್ಲಪ್ಪ (ಪಕ್ಷೇತರ), ಎಸ್.ಬಿ. ರಾಜೇಗೌಡ (ಪಕ್ಷೇತರ), ಎ. ಮಂಜು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ರುದ್ರೇಗೌಡ (ಪಕ್ಷೇತರ) ಅವರ ನಾಮಪತ್ರಗಳು ಅಂಗೀಕಾರವಾಗಿವೆ.
29ರ ಗಡುವು
ಮಾ. 29ರಂದು ಮಧ್ಯಾಹ್ನ 3ರೊಳಗೆ ನಾಮಪತ್ರ ಹಿಂದೆ ಪಡೆಯಲು ಅಭ್ಯರ್ಥಿಗಳಿಗೆ ಅವಕಾಶವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

