60 ವರ್ಷ ದೇಶ ಆಳಿದರೂ ಕಾಂಗ್ರೆಸ್ನ ಸಾಧನೆ ಶೂನ್ಯ
ಕ.ಪ್ರ.ವಾರ್ತೆ ಅರಸೀಕೆರೆ ಮಾ.27
ದೇಶವನ್ನು ಕಾಂಗ್ರೆಸ್ 60 ವರ್ಷಗಳ ಕಾಲ ಆಳಿದೆ. ದೇಶದ ಅಭಿವೃದ್ಧಿ ವಿಷಯದಲ್ಲಿ ಏನೂ ಸಾಧನೆ ಮಾಡಿಲ್ಲ. ಆದ್ದರಿಂದ ದೇಶದ ಜನರ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಕರೆಗೆ ಒಗೊಟ್ಟು ಬಿಜೆಪಿ ಪರ ಮತ ಚಲಾಯಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ರಸ್ತೆಗಳ ಜೋಡಣೆ, ನದಿಗಳ ಜೋಡಣೆ ಕನಸು ನನಸಾಗಬೇಕಾದರೆ ಜಿಲ್ಲೆಯ ಜನತೆ ಈ ಬಾರಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕೆಂದು ಬಿಜೆಪಿ ಅಭ್ಯರ್ಥಿ ಸಿ. ಎಚ್. ವಿಜಯಶಂಕರ್ ಮನವಿ ಮಾಡಿದರು.
ಅಟಲ್ರಿಂದ ಅಪಾರ ಕೊಡುಗೆ: ಪ್ರಚಾರದ ನಿಮಿತ್ತ ತಾಲ್ಲೂಕಿನ ಕೋಡಿಮಠ, ಹಾರನಹಳ್ಳಿ ನಂತರ ಪಟ್ಟಣಕ್ಕೆ ಆಗಮಿಸಿದ್ದ ಅವರು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮತಯಾಚನೆ ನಡೆಸಿದ ನಂತರ ಮಾತನಾಡಿದ ಅವರು, ಮಾಜಿ ಪ್ರಧಾನಿ ಅಟಲ್ ಜೀ ಆಡಳಿತದ ಅವಧಿಯಲ್ಲಿ ದೇಶಕ್ಕೆ ಅತ್ಯುತ್ತಮ ಕೊಡುಗೆಯನ್ನೇ ನೀಡಿದ್ದಾರೆ.
ನದಿ ಜೋಡಣೆ ಮಾಡುತ್ತೇವೆ: ಸರ್ವ ಶಿಕ್ಷಣ ಅಭಿಯಾನ, ಗ್ರಾಮ ಸಡಕ್ ಯೋಜನೆ, ಸ್ವಜಲಧಾರ, ಚತುಷ್ಪಥ ಹೆದ್ದಾರಿಗಳ ನಿರ್ಮಾಣ ಸೇರಿದಂತೆ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ದೇಶದ ಜನತೆಗೆ ನೀಡಿದ್ದರು. ಆದರೆ ಅವರ ಕನಸಾದ ಅಂತಾರಾಜ್ಯ ನದಿ ಜೋಡಣೆ ಕನಸಾಗಿಯೇ ಉಳಿದಿದೆ. ಇದನ್ನು ಸಾಕಾರಗೊಳಿಸಬೇಕಾದರೆ ಮತದಾರರು ಬಿಜೆಪಿಯನ್ನು ಬೆಂಬಲಿಸಿ ದೆಹಲಿ ರಾಜಕಾರಣಕ್ಕೆ ಕಳುಹಿಸಿಕೊಟ್ಟಾಗ ಮಾತ್ರ ಸಾಧ್ಯವಿದೆ ಎಂದರು.
ಭರವಸೆ: ತಮಗೆ ಮತ ನೀಡಿದರೆ ಜಿಲ್ಲೆಯಲ್ಲಿ ಭೇಟಿ ಮಾಡಲು ಸಾಧ್ಯವಿಲ್ಲ ಎಂಬ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಮತದಾರರುಇದಕ್ಕೆ ಕಿವಿಗೊಡಬಾರದು, ವಾರದಒಂದು ದಿನದಲ್ಲಿ ಹಾಸನದ ಪಕ್ಷದ ಕಚೇರಿಯಲ್ಲಿ ಕುಳಿತು ಕಾರ್ಯ ನಿರ್ವಹಿಸಲಿದ್ದೇನೆ. ವಾರದ ಮತ್ತೊಂದು ದಿನ ಜಿಲ್ಲೆಯ ಪ್ರವಾಸ ಮಾಡಿ, ಜನಸಾಮಾನ್ಯರ ಕುಂದು ಕೊರತೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

